ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಜೈನರ ಕೊಡುಗೆ ಅಪಾರ’

ಕುಣ್ಸಿ: 23ನೇ ತೀರ್ಥಂಕರ ಪಾರ್ಶ್ವನಾಥ ಮುನಿಗಳ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಮಂದಿರ ಲೋಕಾರ್ಪಣೆ
Published 22 ಫೆಬ್ರುವರಿ 2024, 16:26 IST
Last Updated 22 ಫೆಬ್ರುವರಿ 2024, 16:26 IST
ಅಕ್ಷರ ಗಾತ್ರ

ಕುಣ್ಸಿ(ಸೈದಾಪುರ): ದೇಶದಲ್ಲಿ ಜೈನ ಸಮಾಜ ಅನಾದಿಕಾಲದಿಂದ ಸಮಾಜಮುಖಿ ಕಾರ್ಯಗಳನ್ನು ನಿರಂತರ ಮಾಡಿಕೊಂಡು ಬರುವ ಮೂಲಕ ಸಾಮರಸ್ಯ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದೆ ಎಂದು ಕಸ್ತೂರಿ ರಾಜಮೋಕ್ಷ ಆರಾಧನ ಟ್ರಸ್ಟ್ ಹಾಗೂ ಪಾರ್ಶ್ವ ಪದ್ಮಾವತಿ ಗೋಶಾಲಾ ಅಧ್ಯಕ್ಷ ಶರಣಿಕ್ ಕುಮಾರ ದೋಕಾ ಅಭಿಪ್ರಾಯಪಟ್ಟರು

ಸಮೀಪದ ತೆಲಂಗಾಣ ಗಡಿ ಭಾಗದ ಕುಣ್ಸಿ ಗ್ರಾಮದಲ್ಲಿ ಜೈನ ಧರ್ಮದ 23ನೇ ತೀರ್ಥಂಕರ ಪಾರ್ಶ್ವನಾಥ ಜೈನ ಮುನಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಂದಿರದಲ್ಲಿ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಾಣ ಮಾಡಲಾಗಿದ. ಹಸುಗಳ ಸಂರಕ್ಷಣೆ ಗೋಶಾಲೆ ತೆರೆಯಲಾಗಿದೆ. ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸ್ಥಾಪನೆ ಮಾಡುವ ಉದ್ದೇಶ ಹೊಂದಿದ್ದೇವೆ. ಮುಂಬರುವ ದಿನಗಳಲ್ಲಿ ನಮ್ಮ ತಂಡ ಮತ್ತಷ್ಟು ಕ್ರೀಯಾಶೀಲವಾಗಿ ಕೆಲಸ ಮಾಡಿ, ಗಡಿ ಭಾಗದಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ, ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.

ಜೈನ ಮಠದ ಶ್ರೀಗಳಾದ ವಿಜಯರಾಜ ತಿಲಕ ಸೂರೇಶ್ವರ, ವಿಫುಲ್ ರೇಖಾ ಸೂರೇಶ್ವರ ಅವರ ಸಮ್ಮುಖದಲ್ಲಿ ಪಾಶ್ರ್ವನಾಥರ ಮೂರ್ತಿ ಸ್ಥಾಪನೆ ಹಾಗೂ ಇತರ ವಿಶೇಷ ಪೂಜೆ ಕೈಂಕರ್ಯಗಳು ಜರುಗಿದವು. ಮಂದಿರ ಉದ್ಘಾಟನೆಗಾಗಿ ಕಳೆದ 5 ದಿನಗಳಿಂದ ನಿರಂತರವಾಗಿ ನಡೆದುಕೊಂಡು ಬಂದ ವಿವಿಧ ಪೂಜಾ ಕಾರ್ಯಕ್ರಮಗಳಿಗೆ ಗುರುವಾರ ತೆರೆಬಿದ್ದಿತು.

ಸಮಾರಂಭದಲ್ಲಿ ಕಡೇಚೂರಿನ ಗುರುಮೂರ್ತಿ ಶಿವಾಚಾರ್ಯರು, ಚೇಗುಂಟಾದ ಕ್ಷೀರಲಿಂಗ ಸ್ವಾಮೀಜಿ, ನೇರಡಗುಂಬದ ಪಂಚಮಸಿದ್ದಲಿಂಗ ಸ್ವಾಮೀಜಿ, ಯಾದಗಿರಿಯ ವೀರೇಶ್ವರ ಸ್ವಾಮೀಜಿ, ಮಕ್ತಲ್ ಶಾಸಕ ಶ್ರೀಹರಿ, ಟ್ರಸ್ಟ್‌ ಪ್ರಮುಖರಾದ ಪ್ರೇಮಚಂದ್ ದೋಕಾ, ಕಿಶೋರ ಸೇಠ್ ಸುರಪುರ, ಅಭಯಕುಮಾರ ದೋಕಾ, ಅಶೋಕಕುಮಾರ ಜೈನ್, ಸುರೇಶಕುಮಾರ ಜೈನ್, ಹನುಮಾನದಾಸ್ ಮುಂದಡ, ದಿನೇಶಕುಮಾರ ಜೈನ್ ಯಾದಗಿರಿ, ಮೋಹನಲಾಲ್ ಸೋಲಂಕಿ, ಶಾಂತಿಲಾಲ್ ಹೈದ್ರಾಬಾದ್, ಯೋಗೇಶಕುಮಾರ ದೋಕಾ, ಮಹಿಪಾಲರಡ್ಡಿ ದುಪ್ಪಲ್ಲಿ ಸೇರಿ ಹಲವರು ದರ್ಶನ ಪಡೆದು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಸೈದಾಪುರ ಗಡಿ ಭಾಗದಲ್ಲಿರುವ ಕುಣ್ಸಿ ಗ್ರಾಮದ ಹತ್ತಿರ ನಿರ್ಮಿಸಿದ ಜೈನ ಮಂದಿರದಲ್ಲಿ ಜೈನ ಧರ್ಮದ 23ನೇ ತೀರ್ಥಂಕರ ಪಾರ್ಶ್ಚನಾಥ ಮುನಿಗಳ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು.
ಸೈದಾಪುರ ಗಡಿ ಭಾಗದಲ್ಲಿರುವ ಕುಣ್ಸಿ ಗ್ರಾಮದ ಹತ್ತಿರ ನಿರ್ಮಿಸಿದ ಜೈನ ಮಂದಿರದಲ್ಲಿ ಜೈನ ಧರ್ಮದ 23ನೇ ತೀರ್ಥಂಕರ ಪಾರ್ಶ್ಚನಾಥ ಮುನಿಗಳ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT