ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ಕೃಷ್ಣಾನದಿಯಲ್ಲಿ ಈಜಲು ಹೋಗಿ ಯುವಕ ನೀರುಪಾಲು

Published : 24 ಆಗಸ್ಟ್ 2024, 13:29 IST
Last Updated : 24 ಆಗಸ್ಟ್ 2024, 13:29 IST
ಫಾಲೋ ಮಾಡಿ
Comments

ನಾರಾಯಣಪುರ: ಈಜುವ ಸಲುವಾಗಿ ಸ್ನೇಹಿತರೊಂದಿಗೆ ಕೃಷ್ಣಾನದಿಯಲ್ಲಿ ಇಳಿದಿದ್ದ ಯುವಕನೊಬ್ಬ ನೀರು ಪಾಲಾದ ಘಟನೆ ಶುಕ್ರವಾರ ನಡೆದಿದೆ.

ವಿಜಯಪುರ ಜಿಲ್ಲೆಯ ತಾಳಿಕೋಟೆ ಮೂಲದ ಮಹಮ್ಮದ್ ಆದಿಲ್ (27) ನೀರು ಪಾಲಾದವರು ಎಂದು ತಿಳಿದುಬಂದಿದೆ.

ಛಾಯಾಭಗವತಿ ದೇವಸ್ಥಾನದ ದರ್ಶನಕ್ಕೆ ಬಂದಿದ್ದ ಆದಿಲ್‌ ಮತ್ತು ಆತನ ಸ್ನೇಹಿತರು ಸಮೀಪದ ಕೃಷ್ಣಾನದಿಯಲ್ಲಿ ಶುಕ್ರವಾರ ಸಂಜೆ ಈಜಲು ತೆರಳಿದ್ದಾರೆ. ಈ ವೇಳೆ ನೀರಿನ ಸುಳಿಗೆ ಸಿಲುಕಿ ಆದಿಲ್‌ ನೀರು ಪಾಲಾದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ದೆಹಲಿ ಮೂಲದ ಆದಿಲ್‌ ತಾಳಿಕೋಟೆಯಲ್ಲಿ ಕಳೆದ ಹಲವು ವರ್ಷಗಳಿಂದ ಕಟಿಂಗ್ ಶಾಪ್ ನಡೆಸುತ್ತಿದ್ದು, ಪ್ರವಾಸಕ್ಕೆಂದು ಛಾಯಾಭಗವತಿಗೆ ಸ್ನೇಹಿತರೊಂದಿಗೆ ಬಂದಿದ್ದಾಗ ದುರ್ಘಟನೆ ನಡೆದಿದೆ. ಆದಿಲ್‌ಗೆ ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರು ಇದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನದಿಯಲ್ಲಿ ನೀರಿನ ಹೆಚ್ಚಿನ ಹರಿವಿದ್ದು, ಯುವಕನಿಗಾಗಿ ಸ್ಥಳೀಯ ಮೀನುಗಾರರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯವನ್ನು ಶನಿವಾರವೂ ಮುಂದುವರೆಸಿದ್ದು, ಇನ್ನೂ ಆದಿಲ್ ಪತ್ತೆಯಾಗಿಲ್ಲ ಎಂದು ಸ್ಥಳೀಯ ಪೋಲಿಸ್ ಠಾಣೆಯ ಎಎಸ್‌ಐ ಬಾಬು ರಾಠೋಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT