ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ತರಕಾರಿ ದರ ಯಥಾಸ್ಥಿತಿ: ಸಿಗದ ಸೊಪ್ಪು

ನಿರಂತರವಾಗಿ ಸುರಿದ ಮಳೆಯಿಂದ ಸೊಪ್ಪು ಹಾಳು; ಬೇರೆ ಜಿಲ್ಲೆಗಳಿಂದಲೂ ಬರುತ್ತಿಲ್ಲ
Last Updated 14 ಆಗಸ್ಟ್ 2020, 14:57 IST
ಅಕ್ಷರ ಗಾತ್ರ

ಯಾದಗಿರಿ: ನಗರದ ವಿವಿಧ ಮಾರುಕಟ್ಟೆಗಳಲ್ಲಿ ತರಕಾರಿ ದರ ಯಥಾಸ್ಥಿತಿ ಇದೆ. ಆದರೆ, ಸೊಪ್ಪುಗಳು ಮಾರುಕಟ್ಟೆಗಳಲ್ಲಿ ಸಿಗುತ್ತಿಲ್ಲ. ಸಿಕ್ಕರೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ.

ಜುಲೈ ತಿಂಗಳಿನಲ್ಲಿ ಸುರಿದ ಭಾರಿ ಮಳೆಯಿಂದ ಸೊಪ್ಪುಗಳು ಕೊಳೆತುಹೋಗಿದ್ದವು. ಇದರಿಂದ ಸೊಪ್ಪುಗಳಿಗೆ ಬೇಡಿಕೆ ಹೆಚ್ಚಿದೆ. ಕೊರೊನಾ ಹಾವಳಿಯಿಂದ ಬೇರೆ ಜಿಲ್ಲೆಯಿಂದ ಸೊಪ್ಪುಗಳು ಬರುತ್ತಿಲ್ಲ. ಇದರಿಂದ ಜಿಲ್ಲೆಯಲ್ಲಿ ಸೊಪ್ಪುಗಳ ಬೆಲೆ ಏರಿಕೆಯಲ್ಲಿ ಗಣನೀಯವಾಗಿ ಹೆಚ್ಚಿದೆ ಎನ್ನುವುದು ವ್ಯಾಪಾರಿಗಳ ಮಾತಾಗಿದೆ.

ಒಂದು ಕಟ್ಟು ಪಾಲಕ್ಸೊಪ್ಪು ₹10ಕ್ಕೆ ಮಾರಾಟವಾಗುತ್ತಿದೆ. ಇದಕ್ಕೂ ಮುಂಚೆ ₹5ಕ್ಕೆ ಒಂದು ಕಟ್ಟು ಸಿಗುತ್ತಿತ್ತು. ಮೆಂತ್ಯೆಒಂದು ಕಟ್ಟು ₹20,ಪುಂಡಿಪಲ್ಯೆ ₹5ಗೆ ಒಂದು ಕಟ್ಟು, ರಾಜಗಿರಿಸೊಪ್ಪು ₹10ಕ್ಕೆ 1 ಕಟ್ಟು,ಸಬ್ಬಸಿಗಿ ಒಂದು ಕಟ್ಟು ₹10, ಕೋತಂಬರಿ ಒಂದು ಕಟ್ಟು ₹30,ಈರುಳ್ಳಿ ಸೊಪ್ಪು ಕೇಜಿ 60ಗೆ ಮಾರಾಟವಾಗುತ್ತಿದೆ.

ಬೆಲೆ ಇಳಿಯದ ನುಗ್ಗೆಕಾಯಿ, ಹಿರೇಕಾಯಿ: ಮಳೆಗಾಲವಾಗಿದ್ದರಿಂದ ನುಗ್ಗೆಕಾಯಿಗೆ ಬೇಡಿಕೆ ಹೆಚ್ಚಿದ್ದು, ಕೆಜಿಗೆ ₹120 ದರ ಇದೆ. ಕಳೆದ ತಿಂಗಳಿಂದಲೂ ನುಗ್ಗೆಕಾಯಿಗೆ ಹೆಚ್ಚಿನ ದರವಿದೆಎಂದು ವ್ಯಾಪಾರಿಗಳು ತಿಳಿಸಿದರು.

ಮೂರು ವಾರಗಳಿಂದಲೂಬೀನ್ಸ್₹80,ಗಜ್ಜರಿ₹80,ಹಿರೇಕಾಯಿ₹80 ಒಂದೇ ಬೆಲೆ ಇದೆ. ಬೇರೆ ತರಕಾರಿಗಳು ₹10ರಿಂದ ₹20ದರ ಇಳಿಕೆಯಾದರೂ ಇವು ಇಳಿಕೆಯಾಗಿಲ್ಲ.

ಈರುಳ್ಳಿ ಬೆಲೆ ಇಳಿಕೆ: ತರಕಾರಿಗಳಲ್ಲಿಎರಡು ವಾರಗಳಿಂದಲೂ ಈರುಳ್ಳಿ ಬೆಲೆ ಕುಸಿದಿದೆ. ಈಗ ಮಾರುಕಟ್ಟೆಗಳಲ್ಲಿ ₹20ಕ್ಕೆ ಕೆಜಿ ಮಾರಾಟವಾಗುತ್ತಿದ್ದು, ಅತ್ಯಂತ ಕಡಿಮೆ ಬೆಲೆಗೆ ಈರುಳ್ಳಿ ಸಿಗುತ್ತಿದೆ.

ಇಳಿಕೆಯಾಗದ ಬದನೆಕಾಯಿ ಬೆಲೆ: ಶ್ರಾವಣ ಮಾಸದ ಆರಂಭದಿಂದಲೂಬದನೆಕಾಯಿ ಬೆಲೆ ಇಳಿಕೆ ಕಂಡಿಲ್ಲ.₹80ಕ್ಕೆ ಕೆಜಿ ಮಾರಾಟವಾಗುತ್ತಿದ್ದು,ಈಗಲೂ ಅದೇ ದರ ಮುಂದುವರಿದಿದೆ.

ಹಣ್ಣುಗಳ ದರ: ಸೇಬುಹಣ್ಣು ಚಿಕ್ಕ ಗಾತ್ರ ₹10, ಮಧ್ಯಮ ಗಾತ್ರ ₹20 ಬೆಲೆ ಇದೆ. ಮೊಸಂಬಿ ₹10ಗೆ ಒಂದು, ದಾಳಿಂಬೆ ಚಿಕ್ಕ ಗಾತ್ರ ಒಂದಕ್ಕೆ ₹10 ದರ ಇದೆ. ಬಾಳೆಹಣ್ಣು ಡಜನ್‌ಗೆ ₹40ಗೆ ಮಾರಾಟವಾಗುತ್ತಿದೆ.

--

ಮಳೆಯಿಂದ ಸೊಪ್ಪುಗಳುಹಾಳಾಗಿದೆ ಎಂದು ರೈತರು ಹೇಳುತ್ತಿದ್ದಾರೆ. ಇದರಿಂದ ಮಾರಾಟ ಮಾಡಲು ಸೊಪ್ಪುಗಳು ಸಿಗುತ್ತಿಲ್ಲ

-ಭರತ್‌ಹೂಗಾರ, ವ್ಯಾಪಾರಿ

ತರಕಾರಿ ಬೆಲೆಯಲ್ಲಿ ಏರಿಕೆ ಕಂಡಿದೆಹೊರತು ಇಳಿಕೆಯಾಗಿಲ್ಲ. ಶ್ರಾವಣ ಮಾಸ ಮುಗಿದ ನಂತರ ಇಳಿಕೆಯಾಗುವುದಾ ಕಾದು ನೋಡಬೇಕು.
- ದೇವಿಂದ್ರಪ್ಪ ಯಾದಗಿರಿ, ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT