ಯಾದಗಿರಿ: ಜಿಲ್ಲೆಯ 155 ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಮನೆಮನೆಗೆ ನೀರು ಕಲ್ಪಿಸುವ ಕಾಮಗಾರಿಗೆ 2020ರ ಅಕ್ಟೋಬರ್‌ನಲ್ಲಿ ಚಾಲನೆ ನೀಡಲಾಯಿತು. ಇದರಲ್ಲಿ 71 ಕಡೆ ಕಾಮಗಾರಿ ಆರಂಭವಾಗಿದ್ದು, 84 ಕಡೆ ಕೆಲಸ ಆರಂಭವಾಗಿಲ್ಲ.

‘ಜಲಜೀವನ್ ಮಿಷನ್ ಯೋಜನೆ ಗುರಿ ಸಾಧಿಸಲು ಪ್ರಧಾನಿ ನರೇಂದ್ರ ಮೋದಿಯವರು ಜನವರಿ 8ಕ್ಕೆ ನೂರು ದಿನದ ಗಡುವು ನೀಡಿದ್ದರು. ಆದರೆ, ಈವರೆಗೆ ಕಾಮಗಾರಿ ಪೂರ್ಣಗೊಳಿಸಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಫೆಬ್ರುವರಿಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಆದರೆ, ಮಾರ್ಚ್ ತಿಂಗಳು ಮುಗಿಯುತ್ತ ಬಂದರೂ ಆಯ್ಕೆ ಮಾಡಿಕೊಂಡ ಗ್ರಾಮಗಳಲ್ಲಿ ಇನ್ನೂ ಕಾಮಗಾರಿ ಆರಂಭವಾಗಿಯೇ ಇಲ್ಲ. ಇದರಿಂದ ಈ ಯೋಜನೆ ಇನ್ನೂ ಎಷ್ಟು ತಿಂಗಳು ಕಾಲ ಮುಂದುವರಿಯಲಿದೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಶಾಲೆ, ಅಂಗನವಾಡಿಗಳಲ್ಲೂ ನೀರು ಪೂರೈಸುವ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಅರ್ಧಕ್ಕರ್ಧ ಕಾಮಗಾರಿ ನಿಂತಿದೆ. ಜಿಲ್ಲೆಯಲ್ಲಿ 1380 ಅಂಗನವಾಡಿ ಕೇಂದ್ರಗಳಿದ್ದು, ಇದರಲ್ಲಿ ಶೇ 30ರಿಂದ 40ರಷ್ಟು ಮಾತ್ರ ಕಾಮಗಾರಿ ಆಗಿದೆ. ಪೂರ್ಣಗೊಂಡ ಕಡೆ ನೀರಿನ ವ್ಯವಸ್ಥೆ ಇಲ್ಲ.

ಇತ್ತಿಚೆಗೆ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಹಮ್ಮಿಕೊಂಡಿದ್ದ ವಡಗೇರಾ ತಾಲ್ಲೂಕಿನ ಬಿಳ್ಹಾರದ ಸರ್ಕಾರಿ ಪ್ರೌಢಶಾಲೆಯಲ್ಲಿ ನೀರಿನ ಸಮಸ್ಯೆ ಇರುವುದು ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಶರ್ಮಾ ಅವರ ಗಮನಕ್ಕೆ ಬಂತು. ಈ ಸಂಬಂಧ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಜಲ ಜೀವನ್ ಮಿಷನ್ ಅಡಿ ಪೈಪ್ ಮಾಡಿ ಎಂದು ತಾಕೀತು ಮಾಡಿದ್ದರು.

ಏನಿದು ಯೋಜನೆ?

ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಗೆ 55 ಲೀಟರ್ ಶುದ್ಧ ನೀರನ್ನು ಈ ಒಂದು ಯೋಜನೆ ಮುಖಾಂತರ ಪೂರೈಸಲಾಗುತ್ತದೆ. ಈ ಮೂಲಕ ಪ್ರತಿಯೊಬ್ಬರಿಗೆ ಶುದ್ಧ ಕುಡಿಯುವ ನೀರು ಸಿಗಬೇಕು ಎನ್ನುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.

ಮನೆಗೂ ನೀರು ತಲುಪಿಸುವ ಕಾರ್ಯಕ್ರಮ ಮೊದಲಿಗೆ 100 ದಿನಗಳಲ್ಲಿ ಪೂರೈಸಬೇಕಾಗಿತ್ತು. ಆದರೆ, ಜಿಲ್ಲೆಯಲ್ಲಿ 5 ತಿಂಗಳು ಕಳೆದರೂ ಕೆಲ ಗ್ರಾಮಗಳಲ್ಲಿ ಟೆಂಡರ್ ಆಗಿಲ್ಲ. ಕಾಮಗಾರಿಯೂ ಪ್ರಾರಂಭವಾಗಿಲ್ಲ.

ಐದು ಗ್ರಾಮಗಳಲ್ಲಿ ಟೆಂಡರ್

‘ಶಹಾಪುರ ತಾಲ್ಲೂಕಿನಲ್ಲಿ ಜಲ ಜೀವನ ಮಿಷನ್ ಅನುಷ್ಠಾನ ನಿಧಾನ ಗತಿಯಲ್ಲಿದೆ. ತಾಲ್ಲೂಕಿನ ವನದುರ್ಗ, ಹೊಸಕೇರಾ, ಅಣಬಿ, ಶಿರವಾಳ, ಹೊತಪೇಟ ಗ್ರಾಮಗಳಲ್ಲಿ ಜಾರಿಯಾಗಲಿರುವ ಯೋಜನೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಇದನ್ನು ಅನುಷ್ಠಾನಗೊಳಿಸಲಿದೆ‘ ಎಂದು ಇಲಾಖೆ ಎಂಜಿನಿಯರ್ ತಿಳಿಸಿದ್ದಾರೆ.

‘ತಾಲ್ಲೂಕಿನ ಶಿರವಾಳ ಗ್ರಾಮದಲ್ಲಿ ಈಗಾಗಲೇ ಗ್ರಾಮ ಪಂಚಾಯಿತಿ ನಿಧಿಯಿಂದ ಶೇ 25ರಂತೆ ₹ 11ಲಕ್ಷ ಹಾಗೂ ಸ್ಥಳೀಯ ಜನರಿಂದ ಶೇ 10ರಷ್ಟು ನಿಧಿ ಸಂಗ್ರಹಿಸಲಾಗುತ್ತಿದೆ. ಟೆಂಡರ್ ಪ್ರಕ್ರಿಯೆ ಮುಗಿದ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಗ್ರಾಮ ಪಂಚಾಯಿತಿ ಸಿಬ್ಬಂದಿ ಮಾಹಿತಿ ನೀಡಿದರು.

ಜಲ ಮೂಲವೇ ಇಲ್ಲ!

ಜಲ ಜೀವನ್ ಮಿಷನ್‌ಗಾಗಿ ಆಯ್ಕೆ ಮಾಡಿಕೊಂಡ ಗ್ರಾಮಗಳಲ್ಲಿ ಜಲಮೂಲವೇ ಇಲ್ಲ. ಹೀಗಾಗಿ ಯೋಜನೆ ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತದೆ ಎಂದು ಎನ್ನುವುದು ಜಿಲ್ಲಾ ಪಂಚಾಯಿತಿ ಸದಸ್ಯರ ಅಭಿಪ್ರಾಯವಾಗಿದೆ.

‘ಜೆಜೆಎಂ ಯೋಜನೆಯಡಿ ಆರಂಭಿಸಿದ ಕಾಮಗಾರಿಗಳನ್ನು ಅಧಿಕಾರಿಗಳ ಜೊತೆಗೂಡಿ ವೀಕ್ಷಣೆ ಮಾಡಲು ತೀರ್ಮಾಸಿದ್ದೇನೆ. ಮನೆ ಮನೆಗೆ ನಳದ ಮೂಲಕ ನೀರು ಪೂಕೈಕೆ ಮಾಡಲು ಕೆರೆ, ಕಾಲುವೆ, ಡ್ಯಾಂ ಸೇರಿದಂತೆ ಯಾವ ಮೂಲಕವಾದರೂ ಜಲ ಮೂಲ ಇರಬೇಕು. ಆದರೆ, ಇದು ಇಲ್ಲದೇ ಕಾಮಗಾರಿ ಪ್ರಾರಂಭಿಸಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಅಧಿಕಾರಿಗಳ ಜೊತೆಗೂಡಿ ಕಾಮಗಾರಿ ನಡೆಯುವ ಸ್ಥಳಗಳಿಗೆ ಭೇಟಿ ನೀಡುತ್ತೇನೆ’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ಪಾಟೀಲ ಯಡಿಯಾಪುರ ಅವರು.

‘ಜಿಲ್ಲೆಯ ಹಲವಾರು ಕಡೆ ಟ್ಯಾಂಕ್ ನಿರ್ಮಾಣ ಮಾಡಿ ಪೈಪ್ ಹಾಕಲಾಗಿದೆ. ಆದರೆ, ನೀರು ಇಲ್ಲ. ಈ ಯೋಜನೆಯೂ ಆ ರೀತಿ ಆಗಬಾರದು. ಜೆಜೆಎಂ ಉತ್ತಮ ಯೋಜನೆಯಾಗಿದೆ. ಮಹಾತ್ವಾಕಾಂಕ್ಷಿ ಜಿಲ್ಲೆಯಾಗಿದ್ದರಿಂದ ಇದನ್ನು ಜಾರಿಗೊಳಿಸಲು ಸರ್ಕಾರ ಯೋಜನೆ ರೂಪಿಸಿದೆ.ಇದು ಸದ್ಬಳಕೆ ಆಗಬೇಕು. ಈ ಯೋಜನೆ ಬಗ್ಗೆ ಬೆಂಗಳೂರಿನಲ್ಲಿ ಸಂಬಂಧಿಸಿದವರನ್ನು ಭೇಟಿಯಾಗಿದ್ದೇನೆ. ಮೊದಲು ಜಲ ಮೂಲವನ್ನು ಹುಡುಕಿ ಕಾಮಗಾರಿ ಮಾಡಿ ಎಂದು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಾನು ಸಿವಿಲ್ ಎಂಜಿನಿಯರ್ ಇದ್ದೇನೆ. ನನಗೂ ಕಾಮಗಾರಿಗಳ ಬಗ್ಗೆ ಮಾಹಿತಿ ಇದೆ. ನೀರಿನ ಮೂಲ ಇದ್ದರೆ ಯಶಸ್ಸು ಆಗುತ್ತದೆ. ಇಲ್ಲದಿದ್ದರೆ ಇಲ್ಲ’ ಎನ್ನುತ್ತಾರೆ ಅವರು.

ಜೆಜೆಎಂ ಎಂಬುದು ಬೋಗಸ್ ಯೋಜನೆ. ಯಾರೂ ನಮಗೆ ಈ ರೀತಿ ನೀರು ಕೊಡಿ ಎಂದು ಕೇಳಿರಲಿಲ್ಲ. ಶೇ 90ರಷ್ಟು ಯೋಜನೆ ವಿಫಲವಾಗಿದೆ. ಬೇಡಿಕೆ ಇದ್ದ ಕಡೆ ನೀರು ಪೂರೈಸಿದರೆ ಸಾಕು. ಅದು ಬಿಟ್ಟು ಯೋಜನೆಗಾಗಿ ರಸ್ತೆ ಅಗೆದರೆ ಸರಿಪಡಿಸಲು ಆಗುತ್ತದೆಯೇ

- ರಾಜಶೇಖರ ಗೌಡ ಪಾಟೀಲ ವಜ್ಜಲ್, ಜಿಲ್ಲಾ ಪಂಚಾಯಿತಿ ಸದಸ್ಯ

ಜಲ ಜೀವನ್ ಯೋಜನೆಯಡಿ ಟೆಂಡರ್ ಕರೆದು ಶಂಕುಸ್ಥಾಪನೆ ಮಾಡಲಾಗಿದೆ. ಜಲಮೂಲ ಇಟ್ಟುಕೊಂಡು ಯೋಜನೆ ಜಾರಿ ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಪೈಪ್ ಹಾಕುವುದರಿಂದ ನೀರು ಪೂರೈಕೆಯಾಗುವುದಿಲ್ಲ. ಜಲ ಮೂಲ ಇಲ್ಲದೆ ಕಾಮಗಾರಿ ಮಾಡಿದರೆ ಯಾವುದೇ ಲಾಭ ಆಗುವುದಿಲ್ಲ

- ಬಸನಗೌಡ ಪಾಟೀಲ ಯಡಿಯಾಪುರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ

ಜಿಲ್ಲೆಯಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಕೈಗೆತ್ತಿಕೊಂಡ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ಟೆಂಡರ್ ಮುಗಿದಿದ್ದು, ನೀರಿನ ಮೂಲವನ್ನು ನೋಡಿಕೊಂಡು ಕಾಮಗಾರಿ ಆರಂಭಿಸಲಾಗುತ್ತಿದೆ

- ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.