ಈ ಭಾಗದಲ್ಲಿ ಕೈಗಾರಿಕಾ ಪ್ರದೇಶವಿರುವುದರಿಂದ ಉತ್ತರ ಭಾರತ ಸೇರಿದಂತೆ ರಾಜ್ಯದ ಸುತ್ತಮುತ್ತಲಿನ ರಾಜ್ಯದ ಕಾರ್ಮಿಕರು ಆಗಮಿಸುತ್ತಿದ್ದಾರೆ. ನಮ್ಮ ಭಾಗದ ಜನರು ದಿನನಿತ್ಯ ಬೆಂಗಳೂರು, ಮುಂಬೈ, ಹೈದ್ರಾಬಾದ ಮತ್ತು ಚೆನೈನಂತಹ ಅನೇಕ ಮಹಾನಗರಗಳಿಗೆ ತೆರಳುತ್ತಿದ್ದಾರೆ. ಆದರಿಂದ ಸಮರ್ಪಕವಾದ ರೈಲುಗಳ ನಿಲುಗಡೆ ಮಾಡಬೇಕು ಹಾಗೂ ಬಡ ಕಾರ್ಮಿಕರಿಗೆ ಅನುಕೂಲವಾದ ರಾಯಚೂರು–ವಿಜಯಪುರ ಇಂಟರ್‌ಸಿಟಿ ಪ್ಯಾಸೆಂಜರ್ ರೈಲು ಪುನರಾರಂಭಿಸಬೇಕು. ನಿಲ್ದಾಣದಲ್ಲಿ ಶೌಚಾಲಯ, ಕುಡಿಯುವ ನೀರು, ವಿಶ್ರಾಂತಿ ಕೋಣೆಗಳ ಸಮಸ್ಯೆ ಇದ್ದು ದುರಸ್ತಿ ಮಾಡಬೇಕು. ಇದಲ್ಲದೆ ರೈಲು ಗೇಟ್ ಹತ್ತಿರ ಹಳಿ ದಾಟಲು ನಿತ್ಯ ಹತ್ತಾರು ಗ್ರಾಮಗಳ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ವಾಹನಗಳು ಸುಲಭವಾಗಿ ತೆರಳಲು ಮೇಲು ಸೇತುವೆ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.