ಯರಗೋಳ: ಸುತ್ತಲಿನ ಗ್ರಾಮಗಳಲ್ಲಿ ಬುಧವಾರ ಮಧ್ಯ ರಾತ್ರಿ ಸುರಿದ ಮಳೆಯಿಂದಾಗಿ ಬಹುತೇಕ ಗ್ರಾಮಗಳ ಕೆರೆ, ಹಳ್ಳಗಳು ಮೈ ದುಂಬಿ ಹರಿಯುತ್ತಿವೆ.

ಯರಗೋಳ ಗ್ರಾಮದ ದೊಡ್ಡ ಕೆರೆಯು ಕಳೆದ ಒಂದು ತಿಂಗಳಲ್ಲಿ ಮೂರು ಸಲ ಭರ್ತಿಯಾಗಿದೆ. ರಾತ್ರಿ ಸುರಿದ ಮಳೆಯಿಂದಾಗಿ ಕೆರೆಯ ಸುತ್ತಲಿನ 15ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ದವಸ, ಧಾನ್ಯಗಳು ಹಾಳಾಗಿವೆ.

ಕೆರೆಯ ದಂಡೆ ಮೇಲೆ ರಭಸವಾಗಿ ನೀರು ಹರಿಯುತ್ತಿದ್ದು. ಗ್ರಾಮ ಪಂಚಾಯತಿಯು ಕೆರೆ ಪ್ರದೇಶಕ್ಕೆ ಹೋಗಲು ನಿಷೇಧ ಹೇರಿದರು. ಯುವಕರು ಮೀನು ಹಿಡಿಯುವ, ಈಜು ಆಡುವ ಹುಚ್ಚು ಸಾಹಸಕ್ಕೆ ಮುಂದಾಗುತ್ತಿದ್ದಾರೆ.

ಚಾಮುನಳ್ಳಿ ಗ್ರಾಮದಲ್ಲಿ ಮಳೆಯಿಂದಾಗಿ ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ನೀರು ಹರಿದು ಸಾರ್ವಜನಿಕ ಸಂಚಾರಕ್ಕೆ ಅಡಚಣೆಯಾಗಿದೆ.

ಕೋಟಗೇರಾ ಗ್ರಾಮದಲ್ಲಿ ಜೋರಾದ ಮಳೆಯಿಂದಾಗಿ ಗುಡ್ಡ ಪ್ರದೇಶದಲ್ಲಿ ಜಲಪಾತ ಪ್ರವಾಸಿಗರಿಗೆ ಕೈಬೀಸಿ ಕರೆಯುತ್ತಿದ್ದು. ಯಾದಗಿರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ ಎಂದು ಗ್ರಾಮದ ಯುವಕ ಜಾಫರ್ ತಿಳಿಸಿದ.

ಎಸ್.ಹೊಸಳ್ಳಿ ಮತ್ತು ಬೆಳಗೇರಾ ಗ್ರಾಮದ ನಡುವೆ ಸಂಪರ್ಕವು ಕಡಿತಗೊಂಡಿದೆ. ಹೊಲಗಳಲ್ಲಿ ನೀರು ನುಗ್ಗಿದ್ದು ಬೆಳೆ ನಾಶವಾಗಿದೆ. ರಸ್ತೆಗಳೆಲ್ಲ ಕೊಚ್ಚಿಕೊಂಡು ಹೋಗಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

‘ಬಂದಳ್ಳಿ ಗ್ರಾಮದಲ್ಲಿ ಕೆರೆ ತುಂಬಿ ಹೆಚ್ಚುವರಿ ನೀರು ಗದ್ದೆಗಳಲ್ಲಿ ನುಗ್ಗಿದ್ದು ಭತ್ತದ ಬೆಳೆ ನೆಲಕ್ಕೆ ಉರುಳಿದೆ, ಕೂಡಲೇ ಜಿಲ್ಲಾಡಳಿತ ಭೇಟಿ ನೀಡಿ, ರೈತರಿಗೆ ತುರ್ತು ಪರಿಹಾರ ನೀಡಬೇಕು’ ಎಂದು ಗ್ರಾಮದ ರವಿ ಗೊಬೆನ್ನೂರ್ ಹೇಳಿದರು.

ಬಾಚವಾರ ಗ್ರಾಮದಿಂದ ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ಸಂಪರ್ಕಿಸುವ ಸೇತುವೆಯು ಸಂಪೂರ್ಣ ಮುಳುಗಡೆಯಾಗಿದ್ದು ಗ್ರಾಮಸ್ಥರು ದಿನನಿತ್ಯದ ಕಾರ್ಯಗಳಿಗೆ ತೊಂದರೆ ಅನುಭವಿಸುತ್ತಿದ್ದಾರೆ. ಹೊನಗೇರಾ ಗ್ರಾಮದ ನಡುವೆ ನೀರು ಹರಿಯುತ್ತಿದ್ದು ರೈತರಿಗೆ, ಜಾನುವಾರುಗಳಿಗೆ ತೊಂದರೆಯಾಗಿದೆ.

ಮೋಟ್ನಳ್ಳಿ, ಮಲ್ಕಪ್ನಳ್ಳಿ ,ಅಲ್ಲಿಪುರ, ಹೆಡಗಿಮದ್ರಾ, ಹತ್ತಿಕುಣಿ, ಸಮಣಾಪುರ, ಕ್ಯಾಸಪ್ಪನಳ್ಳಿ, ಕಾನಳ್ಳಿ, ಗುಲಗುಂಜಿ, ಅರಿಕೇರಾ ಬಿ. ಒರುಂಚ, ಠಾಣಗುಂದ ,ಮುದ್ನಾಳ ಅಬ್ಬೆತುಮಕೂರು. ಶಿವಪುರ, ಕಟ್ಟಿಗೆ ಶಹಾಪುರ ಗ್ರಾಮಗಳಲ್ಲಿ ಮಳೆಯಿಂದಾಗಿ ಹೊಲ, ಗದ್ದೆಗಳಲ್ಲಿ ನೀರು ಹರಿದು, ಭತ್ತ, ಹತ್ತಿ ಬೆಳೆ ನಾಶವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.