ಶಿವಮೊಗ್ಗ: ದೂರಶಿಕ್ಷಣದಲ್ಲಿ ತಾಂತ್ರಿಕತೆಯ ಅಳವಡಿಕೆಯಿಂದ ಗುಣಮಟ್ಟದ ಅಧ್ಯಯನ ಸಾಮಗ್ರಿಗಳನ್ನು ಶಿಕ್ಷಣಾರ್ಥಿಗಳಿಗೆ ಪೂರೈಸಬಹುದು ಎಂದು ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತವಿಶ್ವವಿದ್ಯಾಲಯ (ಇಗ್ನೋ)ದ ಪ್ರಾಧ್ಯಾಪಕಿ ಪ್ರೊ. ಮಂಜುಳಿಕಾ ಶ್ರೀವಾತ್ಸವ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದಲ್ಲಿ ದೂರಶಿಕ್ಷಣ ನಿರ್ದೇಶನಾಲಯ ಹಮ್ಮಿಕೊಂಡ ಸ್ವಯಂ ಕಲಿಕಾ ಮತ್ತು ಅಧ್ಯಯನ ಸಾಮಗ್ರಿ ಸಿದ್ಧತೆ ಕುರಿತ ಎರಡು ದಿನದ ಕಾರ್ಯಾಗಾರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ದೂರಶಿಕ್ಷಣ, ಕಲಿಕಾರ್ಥಿಗಳಲ್ಲಿ ಯೋಚನಾಶಕ್ತಿಯನ್ನು ಬೆಳಸಲಿದೆ. ಹಾಗಾಗಿಯೇ ದೂರಶಿಕ್ಷಣಕ್ಕೆ ಪ್ರಾಮುಖ್ಯತೆ ಹೆಚ್ಚಾಗಿದೆ. ತಾಂತ್ರಿಕತೆಯ ಬಳಕೆಯಿಂದ ದೂರಶಿಕ್ಷಣದ ಗುಣಮಟ್ಟ ಹಾಗೂ ವ್ಯಾಪ್ತಿಯನ್ನು ವಿಸ್ತರಿಸಬಹುದಾಗಿದೆ ಎಂದರು.

ಕೇಂದ್ರ ಸರಕಾರ 2012ರ ಅಂತ್ಯದ ವೇಳೆಗೆ ದೂರಶಿಕ್ಷಣದ ವ್ಯಾಪ್ತಿಯನ್ನು ಶೇ. 15 ಹಾಗೂ ಮುಂದಿನ ಪಂಚವಾರ್ಷಿಕ ಯೋಜನೆ ವೇಳೆಗೆ ಶೇ. 20ರಷ್ಟು ವಿಸ್ತರಿಸುವ ಯೋಜನೆ ಹೊಂದಿದೆ ಎಂದರು.

ಇಗ್ನೋದ ಪ್ರಾಧ್ಯಾಪಕ ಪ್ರೊ.ಸ್ವರಾಜ್ ಬಸು ಮಾತನಾಡಿ, ದೂರಶಿಕ್ಷಣದ ಮೂಲಕ ಪೂರೈಸಲಾಗುವ ಕಲಿಕಾ ಸಾಮಗ್ರಿಗಳು ಕಾಲೇಜುಗಳಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರುಗಳೂ ಬಳಸುವಂತೆ ಆಗಬೇಕು. ಇದರಿಂದ ಜ್ಞಾನವನ್ನು ಹಂಚಿಕೊಂಡಂತೆ ಆಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಿ. ಕೃಷ್ಣಪ್ಪ, ಯುಜಿಸಿಯ ಆಶಯದಂತೆ ಕುವೆಂಪು ವಿಶ್ವವಿದ್ಯಾಲಯದ ದೂರಶಿಕ್ಷಣ ವಿಭಾಗದಲ್ಲಿ ಕಲಿಕಾರ್ಥಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಪ್ರಾರಂಭದಿಂದಲೂ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ತಾಂತ್ರಿಕತೆಯ ಬಳಕೆಯನ್ನೂ ಮಾಡಿಕೊಳ್ಳಲಾಗಿದೆ ಎಂದರು.

ಇಗ್ನೋ ಪ್ರಾಧ್ಯಾಪಕ ಪ್ರೊ.ಪಿ.ಕೆ. ಬಿಸ್ವಾಸ್ ಉಪಸ್ಥಿತರಿದ್ದರು. ಕುವೆಂಪು ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶಕ ಪ್ರೊ.ಎಂ. ವೆಂಕಟೇಶ್ವರಲು ಪ್ರಾಸ್ತಾವಿಕ ಮಾತನಾಡಿದರು. ವಿಶೇಷಾಧಿಕಾರಿ ಡಾ.ಎ. ಮೋಹನ್ರಾಮ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.