ಹಿಂದಿನ ಮುನ್ನೂರು ವರ್ಷಗಳ ಕೈಗಾರಿಕಾ ಕ್ರಾಂತಿಗಳೆಲ್ಲವನ್ನೂ ಮೀರಿಸುವಂತಹ ಬದಲಾವಣೆಯನ್ನು ಎ.ಐ (ಕೃತಕ ಜಾಣ್ಮೆ) ತಂತ್ರಜ್ಞಾನ ನಮ್ಮ ಮುಂದೆ ತರುತ್ತಿದೆ. ಕಂಪ್ಯೂಟರ್ ಮತ್ತು ಅಂತರ್ಜಾಲವನ್ನು ಬಳಸುವ ತಿಳಿವು ಎರಡು ದಶಕಗಳಿಂದ ಹೇಗೆ ಒಂದು ಮೂಲಭೂತವಾದ ಕೌಶಲ ಆಗಿದೆಯೋ ಎ.ಐ ಸಾಕ್ಷರತೆಯೂ ಇಪ್ಪತ್ತೊಂದನೆಯ ಶತಮಾನದ ಒಂದು ಅಡಿಪಾಯದ ಕೌಶಲ ಆಗುತ್ತಿದೆ. ಇದನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಇದನ್ನು ಬಳಸಿಕೊಂಡು ನಮ್ಮ ಬದುಕು ಹಾಗೂ ಉದ್ಯೋಗಗಳಲ್ಲಿ ಹೆಚ್ಚೆಚ್ಚು ಕ್ರಿಯಾಶೀಲವಾಗುವುದು ಈ ಹೊತ್ತಿನ ತುರ್ತು ಅಗತ್ಯಗಳಲ್ಲಿ ಒಂದು.

ಎ.ಐ ತಂತ್ರಜ್ಞಾನ ನಮ್ಮ ಉದ್ಯೋಗವನ್ನು ಕಸಿಯುತ್ತದೆ ಅನ್ನುವ ಆತಂಕದಲ್ಲೇ ದಿನಗಳೆಯುವ ಬದಲು, ಈ ವಲಯದಲ್ಲಿ ಸೃಷ್ಟಿಯಾಗಬಹುದಾದ ಹೊಸ ಉದ್ಯೋಗಗಳು, ಹೊಸ ಅವಕಾಶಗಳು ಯಾವ ರೀತಿಯವು ಎಂದು ಯೋಚಿಸುವ ಅಗತ್ಯ ಇಂದು ನಮ್ಮ ಮುಂದಿದೆ. ಈ ಕ್ಷಿಪ್ರ ಬದಲಾವಣೆಗೆ ನಮ್ಮ ವಿದ್ಯಾರ್ಥಿಗಳು, ಶಿಕ್ಷಣ ವ್ಯವಸ್ಥೆ ಮತ್ತು ಸರ್ಕಾರ ಎಲ್ಲವೂ ಸಜ್ಜಾಗಬೇಕಿದೆ.

ಪಿ.ಡಬ್ಲ್ಯು.ಸಿ ಸಂಸ್ಥೆಯು ಎ.ಐ ಕೌಶಲದ ಕುರಿತು ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯೊಂದರ ಪ್ರಕಾರ, ಇತರ ಉದ್ಯೋಗಗಳಿಗೆ ಹೋಲಿಸಿದರೆ ಎ.ಐ ಕೌಶಲ ಬೇಡುವ ಕೆಲಸಗಳ ಪ್ರಮಾಣ ದುಪ್ಪಟ್ಟು ವೇಗದಲ್ಲಿ ಬೆಳೆಯುತ್ತಿದೆ. ಎ.ಐ ಕೌಶಲ ಪಡೆದ ಅಭ್ಯರ್ಥಿಗಳು ಹೆಚ್ಚಿನ ಸಂಬಳವನ್ನು ಕೂಡ ಪಡೆಯುತ್ತಿದ್ದಾರೆ. ಜಾಗತಿಕವಾಗಿ ಇಂತಹದ್ದೊಂದು ಚಲನೆ ಕಂಡುಬರುತ್ತಿರುವಾಗ, ಜಗತ್ತಿನ ಎ.ಐ ಹಬ್ ಆಗಬೇಕು ಅನ್ನುವ ಆಸೆಯುಳ್ಳ ಭಾರತ ಇದರಲ್ಲಿ ಹಿಂದುಳಿಯಬಾರದು. ಇಲ್ಲಿನ ಪ್ರತಿಯೊಂದು ವೃತ್ತಿಯ ವೃತ್ತಿಪರರು ಈಗ ಎ.ಐ ಜಗತ್ತಿನ ವಾಸ್ತವಕ್ಕೆ, ಅದು ಬೇಡುವ ಹೊಸ ಕೌಶಲಗಳಿಗೆ ತಮ್ಮನ್ನು ತಾವು ಸಜ್ಜಾಗಿಸಿಕೊಳ್ಳಬೇಕಿದೆ.

‘ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ’ ಅನ್ನುತ್ತದೆ ಗಾದೆ. ಎ.ಐ ಕಾಲದಲ್ಲಿ ಅದನ್ನು ಸ್ವಲ್ಪ ಮುಂದುವರಿಸಿ ‘ಪ್ರಾಂಪ್ಟ್ ಬಲ್ಲವನಿಗೆ ಅಜ್ಞಾನವಿಲ್ಲ’ ಅನ್ನಬಹುದು. ಏನಿದು ಪ್ರಾಂಪ್ಟ್ ಅಂದರೆ? ಅಗಾಧ ಪ್ರಮಾಣದ ಮಾಹಿತಿಯನ್ನು ಉಣಬಡಿಸಿ ಸಿದ್ಧಪಡಿಸಲಾದ ಜಾಣ ಕಂಪ್ಯೂಟರ್ಗಳೇ ಎ.ಐ ತಂತ್ರಜ್ಞಾನದ ಮೂಲದಲ್ಲಿ ಇರುವುದು. ಇಂತಹ ಜಾಣ ಯಂತ್ರಗಳಿಂದ ನಮ್ಮ ದಿನನಿತ್ಯದ ಬದುಕಿನ ಯಾವುದೇ ಅಗತ್ಯಗಳಿಗೆ ಬೇಕಾದ ಮಾಹಿತಿ, ತಿಳಿವು ಪಡೆಯಬೇಕು ಅಂದರೆ ಈ ಎ.ಐ ಮಾದರಿಗಳಿಗೆ ಏನು ಕೇಳಬೇಕು, ಹೇಗೆ ಕೇಳಬೇಕು ಅನ್ನುವ ಕೌಶಲ ಮುಖ್ಯವಾಗುತ್ತದೆ. ಹೀಗೆ ಸರಿಯಾದ ರೀತಿಯಲ್ಲಿ ಅದಕ್ಕೆ ಪ್ರಶ್ನೆ ಕೇಳುವುದನ್ನು ಪ್ರಾಂಪ್ಟಿಂಗ್ ಎಂದು ಕರೆಯಬಹುದು.

ಚಾಟ್ ಜಿಪಿಟಿ, ಕ್ಲೌಡ್, ಜೆಮಿನಿಯಂತಹ ಎಲ್ಲ ಖ್ಯಾತ ಎ.ಐ ಮಾದರಿಗಳು ನಿಮ್ಮ ಸಹಾಯಕನಂತೆ ಕೆಲಸ ಮಾಡಲು ಸರಿಯಾದ ಪ್ರಾಂಪ್ಟ್ ಮೂಲಕ ಪ್ರಶ್ನೆ ಕೇಳುವುದು ಅತ್ಯಗತ್ಯ. ಎ.ಐ ಜಗತ್ತಿನ ಅತ್ಯಂತ ಮೂಲಭೂತ ಮತ್ತು ಸಾಮಾನ್ಯ ಕೌಶಲಗಳಲ್ಲಿ ಪ್ರಾಂಪ್ಟ್ ಎಂಜಿನಿಯರಿಂಗ್ ಇಂದು ಎಲ್ಲಕ್ಕೂ ಮೇಲಿದೆ. ಅಂತರ್ಜಾಲದಲ್ಲಿ ಹುಡುಕಿದರೆ, ಇದನ್ನು ಕಲಿಯಲು ಬೇಕಾದ ಮಾಹಿತಿ ದಂಡಿಯಾಗಿ ಸಿಗುತ್ತದೆ. ಇದು ಉತ್ತರ ಬಲ್ಲವರ ಕಾಲವಲ್ಲ, ಸರಿಯಾದ ಪ್ರಶ್ನೆ ಕೇಳಬಲ್ಲವರ ಕಾಲ ಎಂದು ಮನವರಿಕೆ ಮಾಡಿಕೊಂಡರೆ ಇದನ್ನು ಒಂದು ಸಾಧನದಂತೆ ಬಳಸಿಕೊಳ್ಳುವುದು ಸುಲಭವಾಗುತ್ತದೆ.

ಉದಯಿಸುತ್ತಿರುವ ಹೊಸ ಉದ್ಯೋಗ ಹೆಚ್ಚು ಕೌಶಲ ಬೇಡದ, ದಿನವೂ ಅದದೇ ರೀತಿಯಲ್ಲಿ ಮಾಡಲಾಗುವ ಕೆಲಸಗಳು ಎ.ಐ ಕೈಯಲ್ಲಿ ಆಟೊಮೇಟ್ ಆಗಿ ಕಣ್ಮರೆಯಾಗುವ ಸಾಧ್ಯತೆ ಈಗಾಗಲೇ ನಿಜವಾಗುತ್ತಿದೆ. ಹಾಗೋ ಹೀಗೋ ಒಂದು ಡಿಗ್ರಿ ಪಡೆದು, ಐ.ಟಿ– ಬಿ.ಟಿ ವಲಯದಲ್ಲಿ ಒಂದು ಕೆಲಸ ಹಿಡಿದು ಆರಾಮಾಗಿ ಸೆಟಲ್ ಆಗಬಹುದು ಅನ್ನುವ ನಂಬಿಕೆ ಇನ್ನು ಹೆಚ್ಚು ದಿನ ಬಾಳದು. ಎ.ಐ ಗಳಿಸಿಕೊಳ್ಳುತ್ತಿರುವ ಸಾಮರ್ಥ್ಯವು ಐ.ಟಿ, ಫೈನಾನ್ಸ್, ವೈದ್ಯಕೀಯ, ಕಾನೂನು ಸೇರಿದಂತೆ ಎಲ್ಲ ಬಗೆಯ ಜ್ಞಾನಾಧಾರಿತ ವಲಯದ ಕೆಲಸಗಳಲ್ಲೂ ಆಮೂಲಾಗ್ರವಾದ ಬದಲಾವಣೆ ತರುತ್ತಿದೆ. ಇಲ್ಲೆಲ್ಲ ಹೊಸ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುತ್ತಿದೆ.

ಎ.ಐ ಮಾದರಿಗಳಿಂದ ನಮಗೆ ಬೇಕಾದ ಉತ್ತರವನ್ನು ಪರಿಣಾಮಕಾರಿಯಾಗಿ ಪಡೆಯುವ ಪ್ರಾಂಪ್ಟ್ ಎಂಜಿನಿಯರ್ ಹುದ್ದೆಗೆ ಈಗ ಬಹಳಷ್ಟು ಬೇಡಿಕೆ ಇದೆ. ಅಂತೆಯೇ ಎ.ಐ ಬಳಸಿ ಹೊಸ ಸಾಫ್ಟ್ವೇರ್ ಉತ್ಪನ್ನಗಳನ್ನು ಸೃಷ್ಟಿಸುವುದು ಸುಲಭವಾಗಿರುವ ಕಾರಣಕ್ಕೆ ಎ.ಐ ಪ್ರಾಡಕ್ಟ್ ಮ್ಯಾನೇಜರ್, ಎ.ಐ ತರಬೇತುದಾರ ಮತ್ತು ವಿಮರ್ಶಕ, ಎ.ಐ ಮಾದರಿಗಳು ನೈತಿಕತೆಯ ಚೌಕಟ್ಟಿನಲ್ಲೇ ಕೆಲಸ ಮಾಡುವುದನ್ನು ಖಾತರಿಪಡಿಸುವ ಡೇಟಾ ಎತಿಸಿಸ್ಟ್ ತರಹದ ಹುದ್ದೆಗಳು ಈಗ ಹೆಚ್ಚುತ್ತಿವೆ. ಒಂದು ಸಂಸ್ಥೆ ತನ್ನ ಕಾರ್ಯಚಟುವಟಿಕೆಗಳಲ್ಲಿ ಎ.ಐ ಅನ್ನು ಇನ್ನೂ ಬಳಸದಿದ್ದಲ್ಲಿ, ಅಲ್ಲಿ ಎಲ್ಲೆಲ್ಲಿ ಎ.ಐ ವ್ಯವಸ್ಥೆಯನ್ನು ಹೊಂದಿಸಬಹುದು, ಯಾವ ರೀತಿಯಲ್ಲಿ ಸಂಸ್ಥೆಯ ಉತ್ಪಾದಕತೆ, ವ್ಯಾಪಾರ ಮತ್ತು ಲಾಭವನ್ನು ಹೆಚ್ಚಿಸಬಹುದು ಎಂದು ತಿಳಿಸುವ ಎ.ಐ ಕನ್ಸಲ್ಟಿಂಗ್ ಕೂಡ ಈಗ ಬಹಳಷ್ಟು ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ.

ಇನ್ನೊಂದೆಡೆ, ಎ.ಐ ಮಾದರಿಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗದ ಹಲವಾರು ಕ್ಷೇತ್ರಗಳಲ್ಲಿ, ಈಗಾಗಲೇ ಇರುವ ಕೆಲಸಗಳು ಮುಂದಿನ ಕೆಲ ವರ್ಷಗಳಲ್ಲಿ ಹೆಚ್ಚು ಬೇಡಿಕೆಯ ಮತ್ತು ಹೆಚ್ಚು ಸಂಪಾದನೆಯ ಕೆಲಸಗಳಾಗಿ ಬದಲಾವಣೆ ಹೊಂದಲಿವೆ. ಉದಾಹರಣೆಗೆ, ಅಡುಗೆ, ಮಕ್ಕಳು ಮತ್ತು ಹಿರಿಯರ ಆರೈಕೆ, ಪರಿಸರ ರಕ್ಷಣೆ, ದೈಹಿಕ ಮತ್ತು ಮಾನಸಿಕ ಆರೋಗ್ಯ, ಕಲಾತ್ಮಕವಾದ ಕರಕುಶಲ ವಸ್ತುಗಳು, ಕಲೆಯಂತಹ ಮನುಷ್ಯ ಸಂವೇದನೆಯುಳ್ಳ ವಿಷಯಗಳ ಸುತ್ತಲಿನ ಉದ್ಯೋಗಗಳು ಹೆಚ್ಚು ಬೇಡಿಕೆ ಪಡೆಯಲಿವೆ.

ಕ್ರಾಂತಿಗೆ ಸಜ್ಜಾಗೋಣ

ಹಿಂದಿನ 30 ವರ್ಷಗಳ ಜ್ಞಾನಾಧಾರಿತ ಹಾಗೂ ಜಾಗತೀಕರಣ ಗೊಂಡ ವ್ಯವಸ್ಥೆಯು ಹುಟ್ಟುಹಾಕಿದ ಹಲವಾರು ಕೆಲಸಗಳು ಇನ್ನು ಕೆಲ ಕಾಲದಲ್ಲಿ ಅಪ್ರಸ್ತುತಗೊಳ್ಳಲಿವೆ. ಈ ಅನಿಶ್ಚಿತವಾದ ಭವಿಷ್ಯಕ್ಕೆ ಮಕ್ಕಳನ್ನು ತಯಾರು ಮಾಡುವ ಒಂದು ದಾರಿಯೆಂದರೆ, ಅವರಲ್ಲಿ ಜಗತ್ತಿನ ಬಗ್ಗೆ ಒಂದು ಕುತೂಹಲದ ಪ್ರಜ್ಞೆ ಬೆಳೆಸುವುದು.

ತಂತ್ರಜ್ಞಾನ, ಹಣಕಾಸು ವ್ಯವಸ್ಥೆ, ವ್ಯಾಪಾರ-ಉದ್ದಿಮೆ, ಕಲೆ-ಸಂಸ್ಕೃತಿ ಎಲ್ಲದರ ಕುರಿತು ಒಟ್ಟಂದದಲ್ಲಿ ನೋಡುವ (ಆ್ಯಬ್ಸ್ಟ್ರ್ಯಾಕ್ಟ್ ಥಿಂಕಿಂಗ್) ಕಲೆಯನ್ನು ಮಕ್ಕಳಲ್ಲಿ ಪ್ರೋತ್ಸಾಹಿಸಬೇಕು. ಮುಂದಾಲೋಚನೆಯ ಕ್ರಮವನ್ನು ಹೆಚ್ಚಿಸುವ, ದೂರಗಾಮಿ ಪರಿಣಾಮಗಳನ್ನು ಯೋಚಿಸುವಂತೆ ಮಾಡುವ ಆಟಗಳಾದ ಚೆಸ್, ಒಗಟು ಬಿಡಿಸುವುದು, ಸುಡೊಕು, ಬೋರ್ಡ್ ಗೇಮ್ಸ್ನಂತಹವುಗಳನ್ನು ಪರಿಚಯಿಸಬೇಕು. ಜೊತೆಯಲ್ಲೇ, ಡಿಜಿಟಲ್ ಮತ್ತು ಎ.ಐ. ಸಾಕ್ಷರತೆಯನ್ನು ಶಾಲೆಯ ಮಟ್ಟದಲ್ಲೇ ಸಾಧ್ಯವಾಗಿಸಬೇಕು.

ಎಲ್ಲ ಬದಲಾವಣೆಗಳ ಅಡಿಪಾಯವಾಗಿರುವ ಗಣಿತ ಮತ್ತು ಭೌತವಿಜ್ಞಾನದಂತಹ ಮೂಲಭೂತ ವಿಷಯಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಹೆಚ್ಚುವಂತೆ ಮಾಡಬೇಕು. ಶಾಲೆಗಳು ಪಠ್ಯಪುಸ್ತಕ, ಮನೆಗೆಲಸ ಅನ್ನುವ ಬಾಯಿಪಾಠದ ದಾರಿ ಬಿಟ್ಟು, ನಿಜಕ್ಕೂ ತಿರುಳು ತಿಳಿವಳಿಕೆಯತ್ತ ಮಕ್ಕಳನ್ನು ಕರೆದೊಯ್ಯುವ ಕಲಿಮನೆಗಳಾಗಿ ಬದಲಾಗಬೇಕು. ಸರ್ಕಾರ ಇದಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಒದಗಿಸುವುದು, ಕನ್ನಡದಂತಹ ಭಾಷೆಯಲ್ಲೂ ಈ ಎ.ಐ . ಮಾದರಿಗಳು ಚೆನ್ನಾಗಿ ಕೆಲಸ ಮಾಡುವಂತಹ ಪ್ರಯತ್ನಗಳಿಗೆ ಸಂಪನ್ಮೂಲ ಒದಗಿಸುವುದು, ಎ.ಐ . ಮಾದರಿಗಳ ಶಕ್ತಿ ಬೆಳೆಸಿ, ಸ್ವಂತ ಉದ್ಯಮ ಮಾಡಲು ಹೊರಡುವ ಪ್ರತಿಭೆಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ಮೂಲಕ ಈ ಕ್ರಾಂತಿಗೆ ನಮ್ಮ ರಾಜ್ಯವನ್ನು ಸಜ್ಜಾಗಿಸುವ ಕೆಲಸಕ್ಕೆ ಮುಂದಾಳತ್ವ ವಹಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.