ಹಿಮನದಿಗಳ ಸಂರಕ್ಷಣಾ ವರ್ಷ

*ವಿಶ್ವಸಂಸ್ಥೆಯು 2025 ಅನ್ನು ಅಂತರರಾಷ್ಟ್ರೀಯ ಹಿಮನದಿಗಳ ಸಂರಕ್ಷಣಾ ವರ್ಷವೆಂದು ಘೋಷಿಸಿದೆ.

*ಈ ಉಪಕ್ರಮವು ಪರಿಸರ ವ್ಯವಸ್ಥೆಯಲ್ಲಿ ಹಿಮನದಿಗಳು ವಹಿಸುವ ಪ್ರಮುಖ ಪಾತ್ರ ಮತ್ತು ಹವಾಮಾನ ಕ್ರಮದ ತುರ್ತು ಅಗತ್ಯದ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿದೆ.

*ವಿಶ್ವದ ಸುಮಾರು ಶೇ 70ರಷ್ಟು ಸಿಹಿನೀರನ್ನು ಸಂಗ್ರಹಿಸುವ ಹಿಮನದಿಗಳು ಹವಾಮಾನ ಬದಲಾವಣೆ ಹಾಗೂ ಜಾಗತಿಕ ಉಷ್ಣತೆ ಏರಿಕೆಯಿಂದ ತ್ವರಿತ ಕರಗುವಿಕೆಗೆ ಈಡಾಗುತ್ತಿದ್ದು, ಅವುಗಳಲ್ಲಿನ ನೀರಿನ ಮಟ್ಟ ಕರಗಿ ಸಮುದ್ರ ಮಟ್ಟ ಏರಿಕೆಗೆ ಕಾರಣವಾಗುತ್ತಿದೆ. ಇದರಿಂದ ಕರಾವಳಿ ಜನಸಂಖ್ಯೆಗೂ ಅಪಾಯಕ್ಕೆ ಕಾರಣವಾಗಿದೆ.

*ಹಿಮನದಿಗಳು ಹಿಮದಿಂದ ರೂಪುಗೊಂಡ ದೊಡ್ಡ ಮಂಜುಗಡ್ಡೆಯ ದ್ರವ್ಯರಾಶಿಗಳಾಗಿವೆ. ಅವುಗಳ ಅಡಿಯಲ್ಲಿ ನೀರು ಹರಿಯುತ್ತಿರುತ್ತದೆ ಗುರುತ್ವ ಬಲದಿಂದ ಸೂಕ್ಷ್ಮ ಚಲನೆಗೆ ಈಡಾಗುತ್ತವೆ.

*‘ರಾಂಡೋಲ್ಫ್ ಗ್ಲೇಸಿಯರ್ ಇನ್ವೆಂಟರಿ’ ಅಂದಾಜಿನ ಪ್ರಕಾರ ವಿಶ್ವಾದ್ಯಂತ ಸುಮಾರು 2,75,000 ಹಿಮನದಿಗಳಿವೆ.

ಈ ಹಿಮನದಿಗಳು ಜಾಗತಿಕ ಜಲಚಕ್ರದ ರಕ್ಷಣೆಗೆ, ನಿರಂತರ ಚಲನೆಗೆ ಮತ್ತು ವಿವಿಧ ಪರಿಸರ ವ್ಯವಸ್ಥೆಗಳು ಮತ್ತು ಮಾನವ ಸಮುದಾಯಗಳನ್ನು ಬೆಂಬಲಿಸಲು ಅಗತ್ಯವಾಗಿವೆ.

*ಜಾಗತಿಕ ತಾಪಮಾನ ಹೆಚ್ಚಿದಂತೆ ಹಿಮನದಿಗಳು ಕರಗುವುದರಿಂದ ಹಿಮನದಿ ಸರೋವರಗಳು ರಚನೆಯಾಗಿ ಅವುಗಳ ಸ್ಫೋಟಕ ಪ್ರವಾಹಗಳಿಗೆ (GLOF) ಕಾರಣವಾಗಬಹುದು.

*GLOF ಗಳು ವಿಧ್ವಂಸಕವಾಗಿದ್ದು, ಅಪಾರ ಪ್ರಮಾಣದ ಜೀವ ಹಾನಿ ಹಾಗೂ ಆಸ್ತಿ ಹಾನಿಗೆ ಕಾರಣವಾಗಬಹುದು.

*ಭೂಮಿಯ ‘ಮೂರನೇ ಧ್ರುವ’ ಎಂದು ಕರೆಯಲ್ಪಡುವ ‘ಹಿಂದೂ ಕುಶ್ ಹಿಮಾಲಯ ಪ್ರದೇಶ’ ಧ್ರುವ ಪ್ರದೇಶಗಳನ್ನು ಹೊರತುಪಡಿಸಿ ಅತಿ ಹೆಚ್ಚು ಹಿಮನದಿಗಳನ್ನು ಹೊಂದಿರುವ ಖ್ಯಾತಿ ಹೊಂದಿದೆ.

*ಈ ಪ್ರದೇಶವು ಸಿಂಧೂ ಮತ್ತು ಗಂಗಾ ಸೇರಿ ಪ್ರಮುಖವಾದ ಹತ್ತು ನದಿಗಳ ನೀರಿನ ಮೂಲವಾಗಿದೆ. ಸುಮಾರು 1.3 ಶತಕೋಟಿಗೂ ಹೆಚ್ಚು ಜನರು ಈ ನದಿಗಳನ್ನು ಕುಡಿಯುವ ನೀರು, ಕೃಷಿ ಮತ್ತು ಶಕ್ತಿಗಾಗಿ ಅವಲಂಬಿಸಿದ್ದಾರೆ.

*ಭಾರತೀಯ ಹಿಮಾಲಯ ಪ್ರದೇಶದಲ್ಲಿ ಸುಮಾರು 9,575 ಹಿಮನದಿಗಳು ಇವೆ. ಆದರೆ ಹೆಚ್ಚುತ್ತಿರುವ ತಾಪಮಾನ ಮತ್ತು ಹಿಮಪಾತ ಕುಸಿತದಿಂದ ಅವುಗಳ ಅಸ್ತಿತ್ವಕ್ಕೆ ಕುತ್ತೊದಗಿಬಂದಿದೆ.

*ಪಶ್ಚಿಮ ಹಿಮಾಲಯದ ಹಿಮನದಿಗಳು ವೇಗವಾಗಿ ಕರಗುತ್ತಿದ್ದರೆ, ಕಾರಕೋರಂ ಪ್ರದೇಶದಲ್ಲಿನ ಹಿಮನದಿಗಳು 1970 ರ ದಶಕದಿಂದ ಸ್ಥಿರವಾಗಿವೆ. ಈ ವಿದ್ಯಮಾನವನ್ನು ‘ಕಾರಕೋರಂ ಅಸಂಗತತೆ’ (Karakoram Anomaly) ಎಂದು ಕರೆಯಲಾಗುತ್ತದೆ.

*‘ಕಾರಕೋರಂ ಅಸಂಗತತೆ’ಯನ್ನು ಪರಿಗಣಿಸಿದಾಗ ಹಿಮನದಿಗಳು ಹವಾಮಾನ ಬದಲಾವಣೆಯ ಹೊರತಾಗಿಯೂ ಅವುಗಳು ಇರುವ ಎತ್ತರ, ಸ್ಥಳಾಕೃತಿ ಮತ್ತು ಶಿಲಾಖಂಡರಾಶಿಗಳ ಹೊದಿಕೆಯಂಥ ಹವಾಮಾನೇತರ ಅಂಶಗಳಿಂದಲೂ ಪ್ರಭಾವಕ್ಕೆ ಒಳಗಾಗುತ್ತವೆ ಎಂಬ ನಿರ್ಣಯಕ್ಕೆ ಬರಲಾಗಿದೆ.

*ಹಿಮಾಲಯದ ಹಿಮನದಿಗಳ ತೀವ್ರಗತಿಯ ಕರಗುವಿಕೆಯು ಲಕ್ಷಾಂತರ ಜನರಿಗೆ ಸಿಹಿನೀರಿನ ಲಭ್ಯತೆಗೆ ಕುತ್ತು ತಂದೊಡ್ಡಿದೆ. ಹಿಮಪಾತ ಕಡಿಮೆಯಾಗುವುದರಿಮದ ಕೃಷಿಯ ಮೇಲೂ ಋಣಾತ್ಮಕ ಪರಿಣಾಮ ಬೀರುತ್ತದೆ. ಇದು ಸಾಮಾಜಿಕ ಹಾಗೂ ಆರ್ಥಿಕ ಸವಾಲುಗಳಿಗೆ ಕಾರಣವಾಗುತ್ತದೆ.

*ಹಿಮನದಿಗಳು, ಹಿಮನದಿ ಸರೋವರಗಳಾಗಿ ಬದಲಾಗುವ ಪ್ರಕ್ರಿಯೆ GLOF ಅಪಾಯವನ್ನು ಹೆಚ್ಚಿಸುತ್ತದೆ. ಇದರಿಂದ ಜಲವಿದ್ಯುತ್ ಯೋಜನೆಗಳು ಸೇರಿದಂತೆ ಮೂಲಸೌಕರ್ಯಗಳು ಹಾಗೂ ಜನ ಮತ್ತು ಜಾನುವಾರು ಸಮುದಾಯಗಳು ಅಪಾಯಕ್ಕೆ ಸಿಲುಕುತ್ತವೆ.

*ಈ ರೀತಿಯ ಸವಾಲುಗಳನ್ನು ಎದುರಿಸಲು ವಿಶ್ವಸಂಸ್ಥೆಯು 2025 ರಿಂದ 2034 ರವರೆಗೆ ‘ಕ್ರಯೋಸ್ಫಿಯರಿಕ್ ವಿಜ್ಞಾನಕ್ಕಾಗಿ ದಶಕದ ಕ್ರಿಯೆ’ ಎಂಬ ಜಾಗತಿಕ ಮೇಲ್ವಿಚಾರಣೆ ಹಾಗೂ ಸಂಶೋಧನೆ ಆಯೋಜಿಸುವ ಗುರಿಯನ್ನು ಹೊಂದಿದೆ.

*ಭಾರತ ಕೂಡ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಪರಿಹರಿಸಲು ಹಾಗೂ ಹಿಮಾಲಯ ಪರಿಸರ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ‘ರಾಷ್ಟ್ರೀಯ ಯೋಜನೆ’ ಪ್ರಾರಂಭಿಸಿದೆ.

ವಿಶ್ವ ತೇವಭೂಮಿ ದಿನ 2025

*ಪ್ರತಿ ವರ್ಷ ಫೆಬ್ರವರಿ 2 ರಂದು ವಿಶ್ವ ತೇವಭೂಮಿ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಜೌಗು ಪ್ರದೇಶಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.

*ಈ ವರ್ಷದ ವಿಶ್ವ ತೇವಭೂಮಿ ದಿನವನ್ನು ‘ನಮ್ಮ ಸಾಮಾನ್ಯ ಭವಿಷ್ಯಕ್ಕಾಗಿ ತೇವಭೂಮಿಗಳನ್ನು ರಕ್ಷಿಸೋಣ’ ಎಂಬ ಧ್ಯೇಯವಾಕ್ಯದಡಿ ಆಚರಿಸಲಾಯಿತು.

*ಭಾರತ ಈಚೆಗೆ ನಾಲ್ಕು ಹೊಸ ರಾಮ್ಸರ್ ತಾಣಗಳನ್ನು ತೇವ ಭೂಮಿಗಳ ಪಟ್ಟಿಗೆ ಸೇರಿಸಿದೆ. ಈ ತಾಣಗಳೆಂದರೆ; ಜಾರ್ಖಂಡ್ನ ಉಧ್ವಾ ಸರೋವರ, ತಮಿಳುನಾಡಿನ ತೀರ್ಥಂಗಲ್ ಮತ್ತು ಸಕ್ಕರಕೊಟ್ಟೈ ಮತ್ತು ಸಿಕ್ಕಿಂನ ಖೇಚಿಯೋಪಲ್ರಿ ಜೌಗು ಪ್ರದೇಶಗಳು.

*ಜೌಗು ಪ್ರದೇಶಗಳು ನೀರು ಶಾಶ್ವತವಾಗಿ ಅಥವಾ ಕಾಲೋಚಿತವಾಗಿ ಮಣ್ಣನ್ನು ಆವರಿಸುವ ಪ್ರದೇಶಗಳಾಗಿದ್ದು, ಅವುಗಳಲ್ಲಿ ಜೌಗು ಪ್ರದೇಶಗಳು ಮತ್ತು ಸರೋವರಗಳು ಸೇರಿವೆ. ಜೀವವೈವಿಧ್ಯಗಳ ಸಂರಕ್ಷಣೆ, ಪ್ರವರ್ಧಮಾನಕ್ಕೆ ಜೌಗು ಪ್ರದೇಶಗಳು ನಿರ್ಣಾಯಕ.

*ಜೌಗು ಪ್ರದೇಶಗಳು ವಲಸೆ ಹಕ್ಕಿಗಳು ಮತ್ತು ಜಲಚರಗಳು ಸೇರಿ ಹಲವು ಜಾತಿಗಳಿಗೆ ಆವಾಸಸ್ಥಾನಗಳನ್ನು ಒದಗಿಸುತ್ತವೆ. ನೀರಿನ ಸಂರಕ್ಷಣೆಗೂ ಸಹಾಯ ಮಾಡುತ್ತವೆ. ಅವು ಅಂತರ್ಜಲವನ್ನು ಮರುಪೂರಣಗೊಳಿಸುತ್ತವೆ ಮತ್ತು ಪ್ರವಾಹವನ್ನು ನಿಯಂತ್ರಿಸುತ್ತವೆ.

*ಹೆಚ್ಚುವರಿಯಾಗಿ, ಸ್ಥಳೀಯ ಮೀನುಗಾರಿಕೆ ಬೆಂಬಲಿಸುತ್ತವೆ. ಇಂಗಾಲದ ಸಿಂಕ್ಗಳಾಗಿ ಕಾರ್ಯನಿರ್ವಹಿಸುತ್ತವೆ, ತಾವು ಬಿಡುಗಡೆ ಮಾಡುವುದಕ್ಕಿಂತ ಹೆಚ್ಚಿನ ಇಂಗಾಲವನ್ನು ಹೀರಿಕೊಳ್ಳುತ್ತವೆ.

*‘ರಾಮ್ಸರ್ ಸಮಾವೇಶ’ 1971 ರಲ್ಲಿ ಇರಾನ್ನ ರಾಮ್ಸರ್ನಲ್ಲಿ ಸ್ಥಾಪಿಸಲಾಯಿತು. ಇದು ಜೌಗು ಪ್ರದೇಶಗಳನ್ನು ಸಂರಕ್ಷಿಸುವತ್ತ ಗಮನಹರಿಸಿದ ಅಂತರರಾಷ್ಟ್ರೀಯ ಒಪ್ಪಂದವಾಗಿದೆ.

*ಈ ಸಮಾವೇಶವು ನೈಸರ್ಗಿಕ ಮತ್ತು ಕೃತಕ ಜೌಗು ಪ್ರದೇಶಗಳನ್ನು ಗುರುತಿಸುತ್ತದೆ. ರಾಮ್ಸರ್ ತಾಣಗಳು ಅವುಗಳ ಪರಿಸರ ಮಹತ್ವಕ್ಕಾಗಿ ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆಯುತ್ತವೆ. ಜೀವವೈವಿಧ್ಯತೆ ಮತ್ತು ಪರಿಸರ ವ್ಯವಸ್ಥೆಯ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಅವುಗಳನ್ನು ರಕ್ಷಿಸಲಾಗುತ್ತದೆ.

*ಭಾರತ 89 ರಾಮ್ಸರ್ ತಾಣಗಳನ್ನು ಹೊಂದಿದೆ. ತಮಿಳುನಾಡಿನಲ್ಲಿ ಅತಿ ಹೆಚ್ಚು, 20 ರಾಮ್ಸರ್ ತಾಣಗಳಿವೆ. ಪಂಜಾಬ್ 6 ಪ್ರಮುಖ ಜೌಗು ಪ್ರದೇಶಗಳಿಗೆ ನೆಲೆಯಾಗಿದೆ, ಇದರಲ್ಲಿ ಉತ್ತರ ಭಾರತದಲ್ಲಿ ಅತಿ ದೊಡ್ಡದಾದ ‘ಹರಿಕೆ ಪಟ್ಟನ್’ ಸೇರಿದೆ. ಇತರ ಪ್ರಮುಖ ಜೌಗು ಪ್ರದೇಶಗಳಲ್ಲಿ ಕಾಂಜ್ಲಿ, ರೋಪರ್ ಮತ್ತು ನಂಗಲ್ ಸೇರಿವೆ. ಈ ಜೌಗು ಪ್ರದೇಶಗಳು ಮೀನು, ಆಮೆ ಮತ್ತು ಪಕ್ಷಿಗಳು ಸೇರಿ ವಿವಿಧ ವನ್ಯಜೀವಿಗಳ ಜೀವನ ಬೆಂಬಲಿಸುತ್ತವೆ.

*ಜೌಗು ಪ್ರದೇಶಗಳು ಮಾನವ ಚಟುವಟಿಕೆಗಳಿಂದ, ಅಕ್ರಮ ಮರಳು ಗಣಿಗಾರಿಕೆಯಿಂದ, ಕಾರ್ಖಾನೆಗಳಿಂದ ಬರುವ ಕೈಗಾರಿಕಾ ತ್ಯಾಜ್ಯ ಗಳಿಂದ, ಕೀಟನಾಶಕಗಳ ಬಳಕೆಯಿಂದ, ಹವಾಮಾನ ಬದಲಾವಣೆಗಳಿಂದ, ತಾಪಮಾನ ಏರಿಕೆಯಿಂದ ಬೆದರಿಕೆಗಳನ್ನು ಎದುರಿಸುತ್ತಿವೆ.

ಜಾಗತಿಕ ನೀರಿನ ಅಂತರ ವರದಿ

*ಇತ್ತೀಚಿನ ಅಧ್ಯಯನಗಳು ಜಾಗತಿಕ ನೀರಿನ ಅಂತರದ ಬಗ್ಗೆ ಆತಂಕಕಾರಿ ಮುನ್ಸೂಚನೆಗಳನ್ನು ಬಹಿರಂಗಪಡಿಸಿವೆ. 2025ರ ಹೊತ್ತಿಗೆ, ವಾರ್ಷಿಕವಾಗಿ ಅಂದಾಜು 458 ಶತಕೋಟಿ ಘನ ಮೀಟರ್ ನೀರಿನ ಅಂತರ ಪತ್ತೆಯಾಗಿದೆ.

*ಈ ಅಂತರ ನವೀಕರಿಸಬಹುದಾದ ನೀರಿನ ಲಭ್ಯತೆ ಮತ್ತು ನೀರಿನ ಬಳಕೆಯ ನಡುವಿನ ವ್ಯತ್ಯಾಸ ಉಲ್ಲೇಖಿಸುತ್ತವೆ, ಇದು ಆರೋಗ್ಯಕರ ಜಲಚರ ಪರಿಸರವನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದೆ.

*ಹವಾಮಾನ ಬದಲಾವಣೆ ತೀವ್ರಗೊಳ್ಳುತ್ತಿದ್ದಂತೆ, ನೀರಿನ ಅಂತರ ಹೆಚ್ಚಾಗುವ ನಿರೀಕ್ಷೆ ಇದೆ. 1.5 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆ ಸನ್ನಿವೇಶದಲ್ಲಿ, ಈ ಅಂತರಗಳು ಶೇ 6ರಷ್ಟು ಹೆಚ್ಚಬಹುದು. 3 ಡಿಗ್ರಿ ಸೆಲ್ಸಿಯಸ್ನಲ್ಲಿ ಈ ಅಂಕಿ–ಅಂಶ ಶೇ 15 ರಷ್ಟು ತಲುಪಲಿವೆ.

*ನೀರಿನ ಅಂತರಗಳು ನೀರಿನ ಕೊರತೆಯ ನಿರ್ಣಾಯಕ ಸೂಚಕ ಗಳಾಗಿವೆ. ನವೀಕರಿಸಬಹುದಾದ ನೀರಿನ ಮೂಲಗಳು ಮತ್ತು ಬಳಕೆಯ ಅಗತ್ಯಗಳನ್ನು ಆಧರಿಸಿ ಅವುಗಳನ್ನು ಲೆಕ್ಕಹಾಕಲಾಗುತ್ತದೆ.

*ನೀರಿನ ಅಂತರಗಳು ಜಾಗತಿಕವಾಗಿ ಏಕರೂಪವಾಗಿಲ್ಲ ಮತ್ತು ಪ್ರದೇಶಗಳಲ್ಲಿ ಬದಲಾಗುತ್ತವೆ. ಭವಿಷ್ಯದಲ್ಲಿ ಪ್ರತಿ ಖಂಡವು ನೀರಿನ ಲಭ್ಯತೆಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಇವು ಬಹಿರಂಗಪಡಿಸಿವೆ.

*ಪೂರ್ವ ಅಮೆರಿಕ ಸಂಯುಕ್ತ ಸಂಸ್ಥಾನಗಳು, ಮೆಡಿಟರೇನಿಯನ್ ಪ್ರದೇಶಗಳು ಮತ್ತು ಭಾರತದ ಕೆಲವು ಭಾಗಗಳು ತೀವ್ರ ಹವಾಮಾನ ಪರಿಸ್ಥಿತಿಗಳನ್ನು ಅನುಭವಿಸುವ ನಿರೀಕ್ಷೆ ಇದೆ.

*ಭಾರತ ಮತ್ತು ಚೀನಾದಂತಹ ದೇಶಗಳು ನೀರಿನ ಅಂತರದಲ್ಲಿ ಅತಿದೊಡ್ಡ ಹೆಚ್ಚಳವನ್ನು ಕಾಣುವ ನಿರೀಕ್ಷೆಯಿದೆ. ಉದಾಹರಣೆಗೆ, 1.5 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಯಿಂದ ಭಾರತ ವರ್ಷಕ್ಕೆ ಹೆಚ್ಚುವರಿಯಾಗಿ 11.1 ಘನ ಕಿ.ಮೀ. ಎದುರಿಸಬೇಕಾಗುತ್ತದೆ.

*ಆಶ್ಚರ್ಯಕರವಾಗಿ, ಸೌದಿ ಅರೇಬಿಯಾದಂಥ ಕೆಲವು ಪ್ರದೇಶಗಳು ಆರಂಭದಲ್ಲಿ ನೀರಿನ ಕೊರತೆ ಕಡಿಮೆ ಮಾಡಬಹುದು, ಆದರೆ, ಹೆಚ್ಚಿನ ತಾಪಮಾನ ಸನ್ನಿವೇಶಗಳಲ್ಲಿ ತೀವ್ರ ಏರಿಕೆಯ ನಿರೀಕ್ಷೆ ಇದೆ.

*ನೀರಿನ ಅಂತರದಿಂದ ಗಂಗಾ–ಬ್ರಹ್ಮಪುತ್ರ ಜಲಾನಯನ ಪ್ರದೇಶಗಳಲ್ಲಿ ಹೆಚ್ಚು ಪರಿಣಾಮ ಬೀರುತ್ತದೆ. ಇದೇ ರೀತಿಯ ಸ್ಥಿತಿ ಸಿಂಧೂ ಮತ್ತು ಮಿಸ್ಸಿಸ್ಸಿಪ್ಪಿ–ಮಿಸೌರಿ ನದಿ ವ್ಯವಸ್ಥೆಗಳಲ್ಲೂ ಇದೆ.

*ನೀರಿನ ಅಂತರವನ್ನು ನಿವಾರಿಸಲು ನೀರಿನ ಸಂಗ್ರಹಣೆಯನ್ನು ಹೆಚ್ಚಿಸುವುದು ಮತ್ತು ಉಪ್ಪುನೀರಿನ ನಿರ್ಮೂಲನ ತಂತ್ರಗಳನ್ನು ಬಳಸುವುದು, ಸಂಸ್ಕರಿಸಿದ ತ್ಯಾಜ್ಯ ನೀರನ್ನು ಮರುಬಳಕೆ ಮಾಡುವುದು, ಕೊರತೆ ಇರುವ ಪ್ರದೇಶಗಳಿಗೆ ಹೆಚ್ಚುವರಿ ನೀರು ಇರುವ ಪ್ರದೇಶಗಳಿಂದ ನೀರನ್ನು ವರ್ಗಾಯಿಸುವುದು ಈ ರೀತಿಯ ಕ್ರಮಗಳನ್ನು ಅನುಸರಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.