ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಪಿ, ಕೆಪಿಎಸ್‌ಸಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ಮಾದರಿ ಪ್ರಶ್ನೋತ್ತರ

ಸಾಮಾನ್ಯ ಜ್ಞಾನ
Last Updated 18 ಜನವರಿ 2023, 21:45 IST
ಅಕ್ಷರ ಗಾತ್ರ

ಕೆಎಸ್‌ಪಿ, ಕೆಪಿಎಸ್‌ಸಿ ಗ್ರೂಪ್‌ ‘ಸಿ’ ಸೇರಿದಂತೆ ವಿವಿಧ ಇಲಾಖೆಗಳ ಹುದ್ದೆಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿದ್ದು, ಈ ಪರೀಕ್ಷೆಗಳಲ್ಲಿರುವ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.

1) SUVAS ಎಂಬ ತಂತ್ರಾಂಶ ಯಾವುದಕ್ಕೆ ಸಂಬಂಧಿಸಿದೆ?

ಎ) ಕೇಂದ್ರ ಸಹಕಾರ ಸಚಿವಾಲಯ
ಬಿ) ಸುಪ್ರೀಂ ಕೋರ್ಟ್ ತೀರ್ಪುಗಳ ಭಾಷಾಂತರ
ಸಿ) ಕೇಂದ್ರ ಗೃಹ ಸಚಿವಾಲಯ
ಡಿ) ಕೇಂದ್ರ ಕ್ರೀಡಾ ಸಚಿವಾಲಯ

ಉತ್ತರ: ಬಿ

2) ವಿಶ್ವಸಂಸ್ಥೆ ಸಾಮಾಜಿಕ ಮತ್ತು ಆರ್ಥಿಕ ಮಂಡಳಿಯಿಂದ ಯಾವ ದೇಶವನ್ನು ವಿಶ್ವ ಸಂಸ್ಥೆ ಬಿಟ್ಟು ಬಿಟ್ಟಿದೆ?

ಎ) ಆಸ್ಟ್ರೇಲಿಯಾ ಬಿ) ಪಾಕಿಸ್ತಾನ ಸಿ) ಇರಾನ್ ಡಿ) ಮ್ಯಾನ್ಮಾರ್

ಉತ್ತರ: ಸಿ

3) ಕೆಳಗಿನ ಹೇಳಿಕೆಗಳನ್ನು ಗಮನಿಸಿ

ಎ) ಜಗದ್ಗುರು ಆದಿ ಶಂಕರಾಚಾರ್ಯರು ಸನಾತನ ಧರ್ಮ ಪ್ರಚಾರಕ್ಕಾಗಿ ದೇಶದ ನಾಲ್ಕು ದಿಕ್ಕುಗಳಲ್ಲಿ ಪೀಠಗಳನ್ನು ಸ್ಥಾಪಿಸಿದ್ದರು. ಉತ್ತರದ ಪೀಠವು ಅಥರ್ವ ವೇದಕ್ಕೆ ಸಂಬಂಧಿಸಿದ್ದಾಗಿದೆ. ಇದು ಉತ್ತರಾಖಂಡ ರಾಜ್ಯದ ಜೋಶಿಮಠದಲ್ಲಿದೆ.

ಬಿ) ದೇವಾಲಯಗಳ ನಾಡು ಉತ್ತರಾಖಂಡದ ಜೋಶಿಮಠದಲ್ಲಿ ರಸ್ತೆಗಳು 8–10 ಅಡಿಯಷ್ಟು ಅಗಲ ಬಿರುಕು ಬಿಟ್ಟಿವೆ. ನೂರಾರು ಮನೆಯ ಗೋಡೆಗಳು ಬಿರುಕು ಕಂಡಿವೆ. ಹೊಟೆಲ್‌ಗಳ ಗೋಡೆಗಳಲ್ಲೂ ಬಿರುಕನ್ನು ಕಂಡಿವೆ. ದುರ್ಲಬವಾದ ಪರ್ವತದ ಕೆಳಗೆ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ತಪೋವನ ವಿಷ್ಣುಗಢ ಜಲವಿದ್ಯುತ್ ಯೋಜನೆಗಾಗಿ ಸುರಂಗ ನಿರ್ಮಾಣ ಮತ್ತು ಕಟ್ಟಡ ನಿರ್ಮಾಣ ಮೊದಲಾದ ಕಾಮಗಾರಿ ಮಾಡುತ್ತಿರುವ ಕಾರಣ ಜೋಶಿಮಠ ಮತ್ತು ಅದರ ಸುತ್ತಮುತ್ತ ಬಿರುಕು ಕಾಣಲು ಕಾರಣವಾಗಿದೆ ಎಂದು ಊಹಿಸಲಾಗಿದೆ.

ಸಿ) ಜೋಶಿಮಠದಲ್ಲಿ 1970ರ ದಶಕದಲ್ಲಿಯೂ ಪ್ರಾಕೃತಿಕ ಅನಾಹುತಗಳು ಕಂಡಿದ್ದವು. ಗಢವಾಲ್ ಕಮಿಷನರ್ ಮಹೇಶ್ ಚಂದರ್ ಮಿಶ್ರಾ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯು ತನ್ನ ವರದಿಯನ್ನು 1978ರಲ್ಲಿ ಸರ್ಕಾರಕ್ಕೆ ಸಲ್ಲಿಸಿತ್ತು.

ಉತ್ತರ ಸಂಕೇತಗಳು:
ಎ) ಎಲ್ಲಾ ಹೇಳಿಕೆಗಳು ಸರಿಯಾಗಿವೆ ಬಿ) ಎ ಮತ್ತು ಬಿ ಹೇಳಿಕೆ ಸರಿಯಾಗಿವೆ.
ಸಿ) ಎ ಮತ್ತು ಸಿ ಹೇಳಿಕೆಗಳು ತಪ್ಪಾಗಿವೆ ಡಿ) ಎ ಮತ್ತು ಸಿ ಹೇಳಿಕೆ ಮಾತ್ರ ಸರಿಯಾಗಿದೆ.

ಉತ್ತರ: ಎ

4) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸಾವರಿನ್ ಗ್ರೀನ್ ಬಾಂಡ್ ಅನ್ನು ಆರ್‌ಬಿಐ ಬಿಡುಗಡೆ ಮಾಡಲಿದೆ. ಪರಿಸರ ಸ್ನೇಹಿ ಯೋಜನೆಗಳಿಗೆ ಅಗತ್ಯವಾದ ಹಣಕಾಸಿನ ನೆರವು ನೀಡುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗ್ರೀನ್ ಬಾಂಡ್‌ಗಳನ್ನು ಬಿಡುಗಡೆ ಮಾಡಲಿದೆ.

2) ಗ್ರೀನ್ ಬಾಂಡ್‌ಗಳ ಬಿಡುಗಡೆಯಿಂದ ಬರುವ ಹಣವನ್ನು ಆರ್ಥಿಕತೆ ಮೇಲೆ ಇಂಗಾಲದ ಪರಿಣಾಮಗಳನ್ನು ಕಡಿಮೆ ಮಾಡುವ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತದೆ.

3) ಮಾಲಿನ್ಯ ನಿಯಂತ್ರಣಕ್ಕೆ ಉತ್ತೇಜನ ನೀಡುವ ಸಾರ್ವಜನಿಕ ವಲಯದ ಯೋಜನೆಗಳಿಗೆ ನಿಧಿಯನ್ನು ಒದಗಿಸಲಿರುವ ಸಾವರಿನ್ ಗ್ರೀನ್ ಬಾಂಡ್‌ಗಳು 5 ವರ್ಷ, 10 ವರ್ಷದ ಅವಧಿಯನ್ನು ಹೊಂದಿವೆ.

ಉತ್ತರ ಸಂಕೇತಗಳು:

ಎ) 1 ಮತ್ತು 3 ಮಾತ್ರ ಸರಿಯಾಗಿವೆ ಬಿ) 2 ಮತ್ತು 3 ಮಾತ್ರ ಸರಿಯಾಗಿವೆ
ಸಿ) 1 ರಿಂದ 3 ರವರೆಗಿನ ಎಲ್ಲವೂ ಸರಿಯಾಗಿವೆ ಡಿ) ಯಾವ ಹೇಳಿಕೆಯೂ ಸರಿಯಾಗಿಲ್ಲ

ಉತ್ತರ: ಸಿ

5) ಫೋನ್ ಪೇ ಕಂಪನಿಯ ಪ್ರಧಾನ ಕಚೇರಿಯನ್ನು ಸಿಂಗಾಪುರದಿಂದ ಎಲ್ಲಿಗೆ ಸ್ಥಳಾಂತರಿಸಲು ವಾಲ್ ಮಾರ್ಟ್ ಕಂಪನಿಯು ನಿಶ್ಚಯಿಸಿದೆ?

ಎ) ಬೆಂಗಳೂರು ಬಿ) ನವದೆಹಲಿ
ಸಿ) ಶಾಂಘೈ ಡಿ) ಮುಂಬೈ

ಉತ್ತರ: ಎ

6) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಬೆಂಗಳೂರಿನಲ್ಲಿ ತಾಜ್ಯದಿಂದ ಜೈವಿಕ ಅನಿಲ ಉತ್ಪಾದನಾ ಘಟಕ ಸ್ಥಾಪನೆಗೆ ಗೇಲ್- ಗ್ಯಾಸ್ ಲಿಮಿಟೆಡ್ ಕಂಪನಿ(GAIL) ಮುಂದಾಗಿದ್ದು, ಅದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

2) ಗೇಲ್ ಕಂಪನಿಗೆ ಪ್ರತಿದಿನ 300 ಟನ್ ಹಸಿ ತ್ಯಾಜ್ಯವನ್ನು ಪೂರೈಸುವ ಜವಾಬ್ದಾರಿಯನ್ನು ಬಿಬಿಎಂಪಿ ವಹಿಸಿಕೊಂಡಿದೆ.

3) ಬಿಬಿಎಂಪಿ ವ್ಯಾಪ್ತಿಯಲ್ಲಿ ನಗರದಲ್ಲಿ ನಿತ್ಯ 4500 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇದರಲ್ಲಿ ಶೇ 50ಕ್ಕಿಂತ ಕಡಿಮೆ ತ್ಯಾಜ್ಯ ಸಂಸ್ಕರಿಸಲಾಗುತ್ತದೆ.

ಉತ್ತರ ಸಂಕೇತಗಳು:
ಎ) 1 ಮತ್ತು 3 ಮಾತ್ರ ಸರಿಯಾಗಿವೆ ಬಿ) 1 ಮತ್ತು 2 ಮಾತ್ರ ಸರಿಯಾಗಿವೆ
ಸಿ) 1 ರಿಂದ 3ರವರೆಗಿನ ಎಲ್ಲವೂ ಸರಿಯಾಗಿವೆ ಡಿ) 3 ಮಾತ್ರ ಸರಿಯಾಗಿದೆ.

ಉತ್ತರ: ಸಿ

7) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಭಾರತದಲ್ಲಿ ಕ್ಯಾಂಪಸ್ ಸ್ಥಾಪಿಸಲು ವಿದೇಶಿ ವಿಶ್ವವಿದ್ಯಾಲಯಗಳು ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್(ಯುಜಿಸಿ) ಒಪ್ಪಿಗೆ ಪಡೆಯಬೇಕಾಗುತ್ತದೆ. ಆರಂಭಿಕ ಒಪ್ಪಿಗೆಯು ಕೇವಲ 10 ವರ್ಷಕ್ಕೆ ಮಾತ್ರ ಸೀಮಿತವಾಗಲಿದೆ.

2) ಭಾರತದಲ್ಲಿ ಕ್ಯಾಂಪಸ್ ಸ್ಥಾಪಿಸುವ ವಿದೇಶಿ ವಿಶ್ವವಿದ್ಯಾಲಯಗಳು ಪೂರ್ಣಕಾಲಿಕ ಪ್ರೋಗ್ರಾಂ ಅಥವಾ ಕೋರ್ಸ್‌ಗಳನ್ನು ಭೌತಿಕವಾಗಿ ನೀಡಬಹುದೇ ಹೊರತು ಆನ್‌ಲೈನ್ ಅಥವಾ ದೂರ ಶಿಕ್ಷಣ ವಿಧಾನದಲ್ಲಿ ಕೋರ್ಸ್‌ಗಳನ್ನು ಒದಗಿಸುವಂತೆ ಇಲ್ಲ

ಉತ್ತರ ಸಂಕೇತಗಳು
ಎ) 1 ನೇ ಹೇಳಿಕೆ ಮಾತ್ರ ಸರಿಯಾಗಿದೆ.
ಬಿ) ಹೇಳಿಕೆ 2 ಮಾತ್ರ ಸರಿಯಾಗಿದೆ
ಸಿ) 1 ಮತ್ತು 2 ಎರಡೂ ಹೇಳಿಕೆಗಳು ಸರಿಯಾಗಿವೆ.
ಡಿ) ಯಾವ ಹೇಳಿಕೆಯೂ ಸರಿಯಾಗಿಲ್ಲ.

ಉತ್ತರ:ಸಿ

8) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಪ್ರತಿ ವರ್ಷ ಡಿಸೆಂಬರ್ 22 ಅನ್ನು ‘ರಾಷ್ಟ್ರೀಯ ಗಣಿತ ದಿನ’ ಎಂದು ಆಚರಿಸುತ್ತಾರೆ. ಗಣಿತ ಕ್ಷೇತ್ರದ ಮಹಾಪ್ರತಿಭೆ ಶ್ರೀನಿವಾಸ ರಾಮಾನಜುನ್‌ ಅವರ ಜನ್ಮದಿನ ಡಿಸೆಂಬರ್ 22 ಅನ್ನು ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತಿದೆ. ರಾಮಾನುಜನ್‌ ಅವರು ಡಿ.22, 1887ರಲ್ಲಿ ಜನಸಿದ್ದರು. 2012ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಮಾನುಜನ್‌ ಜನ್ಮ ದಿನವನ್ನೇ ರಾಷ್ಟ್ರೀಯ ಗಣಿತದ ದಿನವಾಗಿ ಆಚರಿಸಲು ಕರೆ ನೀಡಿದ್ದರು.

2) ಟ್ರಿನಿಟಿ ಕಾಲೇಜಿನಲ್ಲಿ ಫೆಲೊ ಆಗಿ ಆಯ್ಕೆಯಾದ ಮೊದಲ ಭಾರತೀಯ ಪ್ರತಿಭೆ ಶ್ರೀನಿವಾಸ್ ರಾಮಾನುಜನ್ ಆಗಿದ್ದರು. ರಾಯಲ್ ಸೊಸೈಟಿಯ ಕಿರಿಯ ಫೆಲೊ ಕೂಡಾ ಆಗಿದ್ದರು.

ಉತ್ತರ ಸಂಕೇತಗಳು
ಎ) 2ನೇ ಹೇಳಿಕೆ ಸರಿಯಾಗಿದೆ ಬಿ) 1 ಮತ್ತು 2 ಎರಡೂ ಹೇಳಿಕೆಗಳೂ ಸರಿಯಾಗಿವೆ.
ಸಿ) ಹೇಳಿಕೆ 1 ಮಾತ್ರ ಸರಿಯಾಗಿದೆ. ಡಿ) ಯಾವ ಹೇಳಿಕೆಯೂ ಸರಿಯಾಗಿಲ್ಲ.

ಉತ್ತರ: ಬಿ

9) ನವೆಂಬರ್ 8, 2016ರಲ್ಲಿ ₹500, ₹1,000 ನೋಟುಗಳನ್ನು ಅಮಾನ್ಯ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 50ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆ ನಡೆಸಲಾಗಿತ್ತು. 5 ಜನ ನ್ಯಾಯಾಧೀಶರನ್ನು ಒಳಗೊಂಡ ಸಂವಿಧಾನ ಪೀಠವು 4:1 ಬಹುಮತದ ತೀರ್ಪಿನಲ್ಲಿ ಕೇಂದ್ರ ಸರ್ಕಾರದ ನಿಲುವನ್ನು ಎತ್ತಿ ಹಿಡಿದಿದೆ. ಅಂದರೆ ಕೇಂದ್ರ ಸರ್ಕಾರವು ನೋಟು ಅಮಾನ್ಯಗೊಳಿಸಿದ್ದನ್ನು ಎತ್ತಿ ಹಿಡಿದಿವೆ.

2) 1978ರ ಕಾಯ್ದೆಯ ಪ್ರಕಾರ ಈ ಹಿಂದೆ ನೋಟು ಅಮಾನ್ಯೀಕರಣ ಮಾಡಿದಾಗ ಕೇವಲ 6 ದಿನಗಳ ಅವಧಿಯನ್ನು ನೀಡಲಾಗಿತ್ತು. ಆದರೆ ಈ ಸಲ ನೋಟು ಬದಲಾವಣೆಗೆ 62 ದಿನ ನೀಡಲಾಗಿತ್ತು.

ಉತ್ತರ ಸಂಕೇತಗಳು
ಎ) ಹೇಳಿಕೆ 1 ಮಾತ್ರ ತಪ್ಪಾಗಿದೆ
ಬಿ) ಹೇಳಿಕೆ 2 ಮಾತ್ರ ತಪ್ಪಾಗಿದೆ

ಸಿ) ಎರಡೂ ಹೇಳಿಕೆಗಳು ಮಾತ್ರ ತಪ್ಪಾಗಿವೆ
ಡಿ) ಯಾವ ಹೇಳಿಕೆಯೂ ತಪ್ಪಾಗಿಲ್ಲ
ಉತ್ತರ: ಬಿ

(ಮಾಹಿತಿ: Spardha Bharati UPSC ಯೂಟ್ಯೂಬ್ ಚಾನೆಲ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT