ಶನಿವಾರ, ಸೆಪ್ಟೆಂಬರ್ 18, 2021
21 °C

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಗ– 9

111. ವಿವಿಧೋದ್ದೇಶ ನದಿ ಕಣಿವೆ ಯೋಜನೆಯ ಉದ್ದೇಶ ಏನಾಗಿರುತ್ತದೆ?

ಎ) ನೀರಾವರಿ ಸೌಲಭ್ಯವನ್ನು ಒದಗಿಸುವುದು

ಬಿ) ಜಲ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವುದು

ಸಿ) ನದಿಗಳ ಪ್ರವಾಹವನ್ನು ನಿಯಂತ್ರಿಸುವುದು

ಡಿ) ಮೇಲ್ಕಂಡ ಎಲ್ಲವೂ

112. ಉತ್ಖನನ ಸಂದರ್ಭದಲ್ಲಿ ದೊರೆತ ಪುರಾತತ್ವ ಪಳೆಯುಳಿಕೆಗಳನ್ನು ಯಾವ ವಿಧಾನಗಳಿಂದ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿ ಅವುಗಳ ಕಾಲ ಮತ್ತು ಪ್ರಾಚೀನತೆಯನ್ನು ನಿರ್ಧರಿಸಲಾಗುತ್ತದೆ?

ಎ) ಕಾರ್ಬನ್ 14 ಮತ್ತು ಪೊಟ್ಯಾಷಿಯಂ

ಬಿ) ಕಾರ್ಬನ್ 25 ಮತ್ತು ಯುರೇನಿಯಂ

ಸಿ) ಸೋಡಿಯಂ ಮತ್ತು ಪೊಟ್ಯಾಷಿಯಂ

ಡಿ) ಲೇಸರ್ ಥೆರಪಿ ಮತ್ತು ಸ್ಕ್ಯಾನಿಂಗ್

113. ಗಾನಯೋಗಿ ಪಂಚಾಕ್ಷರಿ ಗವಾಯಿ ಅವರು ಯಾವ ಸಂಗೀತ ಪರಂಪರೆಗೆ ಸೇರಿದವರು?

ಎ) ಕಿರಾಣೆ ಘರಾಣೆ

ಬಿ) ಕರ್ನಾಟಕ ಸಂಗೀತ

ಸಿ) ಹಿಂದೂಸ್ತಾನಿ ಸಂಗೀತ

ಡಿ) ಕವ್ವಾಲಿ ಮತ್ತು ಗಜಲ್

114. ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ:

ಎ) ಚಾಂದ್‌ ಬರ್ದಾಯಿ    1) ವಿಕ್ರಮಾಂಕದೇವಚರಿತ

ಬಿ) ಬಿಲ್ಹಣ                   2) ಅರ್ಥಶಾಸ್ತ್ರ

ಸಿ) ಕಲ್ಹಣ                    3) ಪೃಥ್ವೀರಾಜರಾಸೋ

ಡಿ) ಕೌಟಿಲ್ಯ                 4) ರಾಜತರಂಗಿಣಿ

ಎ) ಎ-1, ಬಿ-2, ಸಿ-3, ಡಿ-4

ಬಿ) ಎ-2, ಬಿ-4, ಸಿ-1, ಡಿ-3

ಸಿ) ಎ-3, ಬಿ-4, ಸಿ-2, ಡಿ-1

ಡಿ) ಎ-3, ಬಿ-1, ಸಿ-4, ಡಿ-2

115. ಈ ಕೆಳಗಿನ ಯಾವ ಪ್ರದೇಶವು ಕರ್ನಾಟಕದ ನವಶಿಲಾಯುಗ ತಾಣವಲ್ಲ?

ಎ) ಬಾದಾಮಿ ಬಿ) ಮಸ್ಕಿ

ಸಿ) ರಾಯಚೂರು ದೋ-ಆಬ್ ಡಿ) ಬಳ್ಳಾರಿ

116. ಸರಣಿ ಪೂರ್ಣಗೊಳಿಸಿ

0, 7, 26, 63, 124, 215, ….?

ಎ) 246 ಬಿ) 242

ಸಿ) 342 ಡಿ) 346

117. 10 ಜನರು 20 ಮನೆಗಳನ್ನು 30 ದಿನಗಳಲ್ಲಿ ನಿರ್ಮಿಸಿದರೆ, 5 ಜನರು 10 ಮನೆಗಳನ್ನು ನಿರ್ಮಿಸಲು ಎಷ್ಟು ದಿನ ಬೇಕಾಗುವುದು?

ಎ) 15 ದಿನಗಳು

ಬಿ) 10 ದಿನಗಳು

ಸಿ) 20 ದಿನಗಳು

ಡಿ) 30 ದಿನಗಳು

118. ‘X’ ಎಂಬಾತನು ಗಣಿತದಲ್ಲಿ ಪಡೆದ ಅಂಕಗಳ ಮೂರನೇ ಒಂದು ಭಾಗದಷ್ಟು ಅಂಕಗಳನ್ನು ಹಿಂದಿ ಭಾಷೆಯಲ್ಲಿ ಪಡೆದಿರುತ್ತಾನೆ. ಅವನು ಈ ಎರಡೂ ವಿಷಯಗಳನ್ನು ಸೇರಿಸಿ ಗಳಿಸಿದ ಒಟ್ಟು ಅಂಕಗಳು 120 ಆಗಿದ್ದಲ್ಲಿ, ಆತನು ಹಿಂದಿ ಭಾಷೆಯಲ್ಲಿ ಪಡೆದ ಅಂಕಗಳೆಷ್ಟು?

ಎ) 30 ಬಿ) 50

ಸಿ) 40 ಡಿ) 60

119. ಬಿಟ್ಟ ಸ್ಥಳ ಬರ್ತಿ ಮಾಡಿ. 3X3=18, 4X4=32, 5X5=50 ಆದರೆ, 6X6= …..?

ಎ) 36 ಬಿ) 72

ಸಿ) 12 ಡಿ) 24

120. ಸಾಂಕೇತಿಕ ಭಾಷೆಯಲ್ಲಿ A ಯು C, C ಯು E ಮತ್ತು D ಯು F ಆದರೆ X ಏನಾಗುತ್ತದೆ?

ಎ) Y ಬಿ) W

ಸಿ) Z ಡಿ) V

121. ಅಮೆರಿಕದ ಖಾಸಗಿ ಬಾಹ್ಯಾಕಾಶ ಸಂಸ್ಥೆ ಯಾವುದು?

ಎ) ಜಾಕ್ಸಾ ಬಿ) ರೂಪೋಸ್ಕೋಸ್‌

ಸಿ) ನಾಸಾ ಡಿ) ಸ್ಪೇಸ್‌ ಎಕ್ಸ್‌

122. UNESCO ವಿಸ್ತೃತ ರೂಪವೇನು?

ಎ) United Nations Educational, Scientific and Cultural Organization

ಬಿ) United Nations Economical, Sericultural and Creative Organization

ಸಿ) United Nations Electronical, Social and Chemical Organization

ಡಿ) United Nations Emotional, Socialogical and Crime Organization

123. ವಿಮಾನಗಳಲ್ಲಿ ಕಂಡುಬರುವ ‘Black Box’ ನ ನಿಜವಾದ ಬಣ್ಣ ಯಾವುದು?

ಎ) ಬಿಳಿ ಬಿ) ಹಸಿರು

ಸಿ) ಕಿತ್ತಳೆ ಬಣ್ಣ ಡಿ) ಕಪ್ಪು

124. ಚೀನಾ ದೇಶದ ಅಧಿಕೃತ ಭಾಷೆ ಯಾವುದು?

ಎ) ಸ್ಪ್ಯಾನಿಷ್ ಬಿ) ಮ್ಯಾಂಡರಿನ್‌

ಸಿ) ಇಂಗ್ಲಿಷ್ ಡಿ) ನೇಪಾಳಿ

125. ನೊವಾಕ್ ಜೋಕೋವಿಚ್‌ ಯಾವ ಕ್ರೀಡೆಗೆ ಸಂಬಂಧಪಟ್ಟಿದ್ದಾರೆ?

ಎ) ಟೆನಿಸ್ ಬಿ) ಕ್ರಿಕೆಟ್

ಸಿ) ಫುಟ್‌ಬಾಲ್ ಡಿ) ಹಾಕಿ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು