ಭಾನುವಾರ, ಆಗಸ್ಟ್ 14, 2022
24 °C

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಗ -20

271. ಒಂದು ನಾಟಿಕಲ್ ಮೈಲಿ ಎಂದರೆ

ಎ) 2.562 ಕಿ.ಮೀ.

ಬಿ) 1.852 ಕಿ.ಮೀ.

ಸಿ) 1.652 ಕಿ.ಮೀ

ಡಿ) 0.852 ಕಿ.ಮೀ

272. 2011ರ ಜನಗಣತಿ ಪ್ರಕಾರ ಭಾರತದ ಹೆಚ್ಚು ಜನಸಂಖ್ಯೆ ಹೊಂದಿದ ರಾಜ್ಯಗಳಲ್ಲಿ ಕರ್ನಾಟಕ ______ ನೇ ಸ್ಥಾನದಲ್ಲಿದೆ.

ಎ) 05

ಬಿ) 06

ಸಿ) 08

ಡಿ) 07

273. ಭಾಕ್ರಾನಂಗಲ್ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?

ಎ) ಸಟ್ಲೆಜ್

ಬಿ) ಸಿಂಧೂ

ಸಿ) ಮಹಾನದಿ

ಡಿ) ನರ್ಮದಾ

274. ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಕೊನೆಯ ವಿದೇಶಿಯರು

ಎ) ಡಚ್ಚರು

ಬಿ) ಪೋರ್ಚುಗೀಸರು

ಸಿ) ಫ್ರೆಂಚರು

ಡಿ) ಬ್ರಿಟೀಷರು

275. ‘ಕ್ವಿಟ್ ಇಂಡಿಯಾ’ ಚಳವಳಿಯಲ್ಲಿ ಮುಸ್ಲಿಮರು ಭಾಗವಹಿಸಬಾರದು ಎಂದು ಹೇಳಿದವರು ಯಾರು?

ಎ) ರಹಮತ್ ಅಲಿ

ಬಿ) ಮೌಸಿನ್ ಉಲ್ ಮುಲ್ಕ್

ಸಿ) ಖಾನ್-ಅಬ್ದುಲ್ ಗಫಾರ್‌ ಖಾನ್‌

ಡಿ) ಮಹಮ್ಮದ್ ಅಲಿ ಜಿನ್ನಾ

276. ಇಟಲಿಯ ಕ್ರಾಂತಿವೀರ ಗ್ಯಾರಿಬಾಲ್ಡಿಯನ್ನು ತಮ್ಮ ಆದರ್ಶ ವ್ಯಕ್ತಿಯನ್ನಾಗಿ ಸ್ವೀಕರಿಸಿದ ಭಾರತೀಯ ಯಾರು?

ಎ) ವಲ್ಲಭಭಾಯಿ ಪಟೇಲ್

ಬಿ) ಬಾಲಗಂಗಾಧರ ತಿಲಕ್

ಸಿ) ಲಾಲಾ ಲಜಪತ್ ರಾಯ್

ಡಿ) ಬಿಪಿನ್ ಚಂದ್ರಪಾಲ್

277. ಅಖಿಲ ಭಾರತ ಮುಸ್ಲಿಂ ಲೀಗ್ ಸ್ಥಾಪನೆಯಾದ ವರ್ಷ?

ಎ) 1906

ಬಿ) 1907

ಸಿ) 1916

ಡಿ) 1921

278. ಕಾಂಗ್ರೆಸ್‌ನ ಯಾವ ಅಧಿವೇಶನದಲ್ಲಿ ‘ಪೂರ್ಣ ಸ್ವರಾಜ್’ ಸ್ಥಾಪನೆಯ ನಿರ್ಣಯ ಅಂಗೀಕರಿಸಲಾಯಿತು?

ಎ) ಕೋಲ್ಕತ್ತ ಅಧಿವೇಶನ

ಬಿ) ಬೆಳಗಾವಿ ಅಧಿವೇಶನ

ಸಿ) ಬಾಂಬೆ ಅಧಿವೇಶನ

ಡಿ) ಲಾಹೋರ್ ಅಧಿವೇಶನ

279. ಕರ್ನಾಟಕದ ಗಾಂಧಿ ಎಂದು ಪ್ರಸಿದ್ಧವಾದ ವ್ಯಕ್ತಿ ಯಾರು?

ಎ) ಮೈಲಾರ ಮಹಾದೇವಪ್ಪ

ಬಿ) ಆಲೂರು ವೆಂಕಟರಾಯ

ಸಿ) ಹರ್ಡೀಕರ್ ಮಂಜಪ್ಪ

ಡಿ) ಖಾನ್‌ ಅಬ್ದುಲ್‌ ಗಫಾರ್‌ ಖಾನ್

280. ಸಾಮಾನ್ಯವಾಗಿ ಬ್ರಿಟಿಷರು ಭಾರತೀಯರ ಸ್ವಾತಂತ್ರ್ಯದ ಎಲ್ಲ ಹೋರಾಟಗಳನ್ನು ______ಎಂದು ಬಿಂಬಿಸಿದರು.

ಎ) ಸ್ವಾತಂತ್ರ್ಯ ಸಮರ

ಬಿ) ಬಂಡಾಯ ಅಥವಾ ದಂಗೆ

ಸಿ) ದೇಶದ್ರೋಹದ ಚಟುವಟಿಕೆ

ಡಿ) ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ

281. ಶಾಹು ಮಹಾರಾಜ ಮತ್ತು
ಡಾ.ಬಿ.ಆರ್.ಅಂಬೇಡ್ಕರ್‌ ಅವರು ____________ ಅವರ ಬೋಧನೆಗಳಿಂದ ಪ್ರಭಾವಿತರಾಗಿದ್ದರು.

ಎ) ರಾಜಾರಾಂ ಮೋಹನ್ ರಾಯ್

ಬಿ) ವಿವೇಕಾನಂದ

ಸಿ) ಎಂ.ಜಿ.ರಾನಡೆ

ಡಿ) ಜ್ಯೋತಿಬಾ ಫುಲೆ

282. ಗಾಂಧೀಜಿ ಅಸಹಕಾರ ಚಳವಳಿಯನ್ನು _________ ನಲ್ಲಿ ನಡೆದ ಹಿಂಸಾತ್ಮಕ ಘಟನೆಯ ನಂತರ ಹಿಂಪಡೆದರು.

ಎ) ಜಲಿಯನ್‌ ವಾಲಾ ಬಾಗ್

ಬಿ) ಹಲಗಲಿ

ಸಿ) ಚಂಪಾರಣ್ಯ

ಡಿ) ಚೌರಿ ಚೌರಾ

283. 2ನೇ ಮಹಾಯುದ್ಧದಲ್ಲಿ ಅಮೆರಿಕ ಭಾಗವಹಿಸಲು ಕಾರಣ

ಎ) ಪೋಲೆಂಡ್ ಮೇಲೆ ಹಿಟ್ಲರನ ದಾಳಿ

ಬಿ) ಮಂಚೂರಿನಾವನ್ನು ಜಪಾನ್ ವಶಪಡಿಸಿಕೊಂಡಿದ್ದು

ಸಿ) ಪರ್ಲ್ ಹಾರ್ಬರ್ ಮೇಲೆ ಜಪಾನ್ ದಾಳಿ

ಡಿ) ಬ್ರಿಟನ್ ಮತ್ತು ಫ್ರಾನ್ಸ್‌ ಜರ್ಮನಿಯ ಮೇಲೆ ಯುದ್ಧ ಘೋಷಿಸಿದ್ದು

284. ಭಾರತದ ಒಟ್ಟು ಭೌಗೋಳಿಕ ವಿಸ್ತಾರದ _________ ರಷ್ಟು ಅರಣ್ಯ ಪ್ರದೇಶ ಇದೆ

ಎ) ಶೇ 21.2

ಬಿ) ಶೇ 24.3

ಸಿ) ಶೇ 33.3

ಡಿ) ಶೇ 35.6

285. ಇದು ದೇಶದ ನೈಸರ್ಗಿಕ ಸಂಪತ್ತನ್ನು ತೋರಿಸುತ್ತದೆ

ಎ) ಕೈಗಾರಿಕೆಗಳು

ಬಿ) ಬೆಳೆಗಳು

ಸಿ) ಅರಣ್ಯ

ಡಿ) ಮಾನವ ಸಂಪತ್ತು

ಭಾಗ 19ರ ಉತ್ತರಗಳು

256. ಡಿ, 257. ಡಿ, 258. ಎ, 259. ಎ, 260. ಎ, 261. ಸಿ, 262. ಬಿ, 263. ಡಿ, 264. ಎ, 265. ಬಿ, 266. ಬಿ, 267. ಡಿ, 268. ಸಿ, 269. ಎ, 270. ಡಿ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು