ಬೆಂಗಳೂರು: ಮತ್ತೆ ರೈಲ್ವೆ ಇಲಾಖೆಯಲ್ಲಿ ಡಿ–ಗ್ರೂಪ್ ಹುದ್ದೆಗಳ ನೇಮಕಾತಿಗೆ ಚಾಲನೆ ಸಿಕ್ಕಿದೆ. ದೇಶದ ಬೃಹತ್ ಇಲಾಖೆಯಲ್ಲಿ ಕೆಲಸ ಮಾಡಬೇಕೆಂದು ಕನಸು ಕಂಡಿರುವ ಅನೇಕ ಯುವಕ–ಯುವತಿಯರಿಗೆ ಇದೊಂದು ಉತ್ತಮ ಅವಕಾಶ.

ರೈಲ್ವೆ ಇಲಾಖೆಯ ವಿವಿಧ ರೈಲ್ವೆ ವಲಯಗಳ ವ್ಯಾಪ್ತಿಯಲ್ಲಿ ಖಾಲಿ ಇರುವ ಒಟ್ಟು 22,195 ‘ಡಿ–ಗ್ರೂಪ್’ (ಲೆವಲ್ –1 ಸಿಪಿಸಿ) ಹುದ್ದೆಗಳ ಭರ್ತಿಗೆ ಅರ್ಹ ಯುವಕ, ಯುವತಿ ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಂದ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಆನ್ಲೈನ್ ಅರ್ಜಿ ಸಲ್ಲಿಸಲು ಜನವರಿ 31ರಿಂದ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಕಡೆಯ ದಿನ ಮುಂದಿನ ತಿಂಗಳು ಮಾರ್ಚ್ 2. ಆನ್ಲೈನ್ ಮಾತ್ರ ಅರ್ಜಿ ಸಲ್ಲಿಸಬೇಕು. ಲೆವಲ್ –1 ಸಿಪಿಸಿ ಅಥವಾ ಡಿ–ಗ್ರೂಪ್ ಎಂದರೆ ಇವು ರೈಲ್ವೆ ಇಲಾಖೆಯ ವಿವಿಧ ವಿಭಾಗಳಲ್ಲಿನ ಸುಮಾರು 14 ತರಹದ ಸಹಾಯಕ ರೀತಿಯ ಹುದ್ದೆಗಳು.

ವಯೋಮಿತಿ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು. ಗರಿಷ್ಠ 33 ವರ್ಷ. ಮೀಸಲು ವರ್ಗದವರಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ಶೈಕ್ಷಣಿಕ ಅರ್ಹತೆ

10 ನೇ ತರಗತಿ ಪಾಸಾದವರು, ಐಟಿಐ ಪಾಸಾದವರು, ನ್ಯಾಷನಲ್ ಅಪ್ರೆಂಟಿಷಿಪ್ ಸರ್ಟಿಫಿಕೆಟ್ ( National Apprenticeship Certificate–NAC) ಹೊಂದಿದವರು ಅರ್ಜಿ ಸಲ್ಲಿಸಲು ಅರ್ಹ.

ಶುಲ್ಕ

ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದವರಿಗೆ, ಒಬಿಸಿಗಳಿಗೆ, EWSಗಳಿಗೆ ₹500 ಶುಲ್ಕ. ಮಹಿಳಾ ಅಭ್ಯರ್ಥಿಗಳಿಗೆ, ಎಸ್ಸಿ/ಎಸ್ಟಿ, ಅಲ್ಪಸಂಖ್ಯಾತ, ಲಿಂಗತ್ವ ಅಲ್ಪಸಂಖ್ಯಾತರಿಗೆ ₹250.

ಪರೀಕ್ಷೆ ಹೇಗಿರಲಿದೆ? ಆಯ್ಕೆ ಪ್ರಕ್ರಿಯೆ ಏನು?

ರೈಲ್ವೆ ‘ಡಿ–ಗ್ರೂಪ್’ ಹುದ್ದೆಗಳಿಗೆ ಈ ಸಾರಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ನಡೆಸಲಾಗುತ್ತಿದೆ. ಪರೀಕ್ಷೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ.

ಮೊದಲಿಗೆ ಯಶಸ್ವಿಯಾಗಿ ಅರ್ಜಿ ಸಲ್ಲಿಸಿದವರಿಗೆ ಆಯಾ ಆರ್ಆರ್ಬಿಗಳ (ರೈಲ್ವೆ ನೇಮಕಾತಿ ಮಂಡಳಿಗಳು) ವ್ಯಾಪ್ತಿಯಲ್ಲಿ ಸಿಬಿಟಿ ಪರೀಕ್ಷೆ ಇರಲಿದೆ.

ಈ ಪರೀಕ್ಷೆಯಲ್ಲಿ ನಾಲ್ಕು ವಿಭಾಗಗಳಾಗಿ ನೂರು ಅಂಕಗಳಿಗೆ ನೂರು ಪ್ರಶ್ನೆಗಳಿರಲಿವೆ. ಸಾಮಾನ್ಯ ವಿಜ್ಞಾನಕ್ಕೆ 25, ಬೇಸಿಕ್ ಗಣಿತ 25, ಸಾಮಾನ್ಯ ಜ್ಞಾನ/ಸಾಮಾನ್ಯ ಗ್ರಹಿಕೆ 30, ಪ್ರಚಲಿತ ವಿದ್ಯಮಾನಗಳ ವಿಭಾಗಕ್ಕೆ 20 ಪ್ರಶ್ನೆಗಳಿರಲಿವೆ.

ಸಿಬಿಟಿ ಪರೀಕ್ಷೆಯ ಮೆರಿಟ್ ಆಧಾರದ ಮೇಲೆ 1:3 ಅನುಪಾತದ ಮೇಲೆ ದೈಹಿಕ ಪರೀಕ್ಷೆಗೆ ಕರೆಯಲಾಗುತ್ತದೆ. ದೈಹಿಕ ಪರೀಕ್ಷೆಯಲ್ಲಿ ಪಾಸಾದವರಿಗೆ 1:1 ಅನುಪಾತದ ಮೇಲೆ ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆಗಳ ಪರಿಶೀಲನೆಗೆ ಕರೆಯಲಾಗುತ್ತದೆ. ಇವೆಲ್ಲ ಪರೀಕ್ಷೆಗಳ ತರುವಾಯ ಮೀಸಲು ನಿಯಮ ಹಾಗೂ ಮೆರಿಟ್ ಆಧಾರದ ಮೇಲೆ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.

ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯಕ್ಕೆ ಕೇವಲ 90 ಹುದ್ದೆ!

ಕರ್ನಾಟಕದಲ್ಲಿ ಶೇ 90 ರಷ್ಟು ರೈಲ್ವೆ ಜಾಲವನ್ನು ಹೊಂದಿರುವ ಹುಬ್ಬಳ್ಳಿಯಲ್ಲಿರುವ ನೈರುತ್ಯ ರೈಲ್ವೆ ವಲಯಕ್ಕೆ ಕೇವಲ 90 ಡಿ–ಗ್ರೂಪ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಚೆನ್ನೈನ ದಕ್ಷಿಣ ರೈಲ್ವೆಗೆ 1,036 ಹುದ್ದೆಗಳು ಹಾಗೂ ಸಿಕಂದರಾಬಾದ್ನ ದಕ್ಷಿಣ ಮಧ್ಯ ರೈಲ್ವೆ ವಲಯಕ್ಕೆ 1,012 ಹುದ್ದೆಗಳಿವೆ. ಪಶ್ಚಿಮ ರೈಲ್ವೆ ವಲಯಕ್ಕೆ ಅತಿ ಹೆಚ್ಚು 3,166 ಹುದ್ದೆಗಳಿವೆ. ಅಭ್ಯರ್ಥಿಗಳು ತಮ್ಮಿಷ್ಟದ ರೈಲ್ವೆ ವಲಯಕ್ಕೆ ಅರ್ಜಿ ಸಲ್ಲಿಸಬಹುದು.

21 ರೈಲ್ವೆ ನೇಮಕಾತಿ ಮಂಡಳಿಗಳು

ಭಾರತೀಯ ರೈಲ್ವೆಯ 17 ವಲಯಗಳಲ್ಲಿ ಒಟ್ಟು 21 ರೈಲ್ವೆ ನೇಮಕಾತಿ ಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರು, ಅಜ್ಮೀರ್, ಅಹಮದಾಬಾದ್, ಭೋಪಾಲ್, ಭುವನೇಶ್ವರ, ಬಿಲಾಸ್ಪುರ, ಚಂಡೀಗಢ, ಚೆನ್ನೈ, ಗೋರಖಪುರ, ಗುವಾಹಟಿ, ಜಮ್ಮು ಶ್ರೀನಗರ, ಕೋಲ್ಕತ್ತ, ಮಾಲ್ಡಾ, ಮುಂಬೈ, ಮುಜಾಫರ್ಪುರ, ಪಟ್ನಾ, ಪ್ರಯಾಗರಾಜ್, ರಾಂಚಿ, ಸಿಕಂದರಾಬಾದ್, ಸಿಲಿಗುರಿ ಹಾಗೂ ತಿರುವನಂತಪುರ.

ಎಲ್ಲಿ ಅರ್ಜಿ ಸಲ್ಲಿಸುವುದು?

ಆಸಕ್ತರು ಕೇಂದ್ರಿಕೃತ ವಿವರವಾದ ಅಧಿಸೂಚನೆಯನ್ನು ಪರಿಶೀಲಿಸಿ ಫೆಬ್ರುವರಿ 2ರೊಳಗೆ ಅರ್ಜಿ ಸಲ್ಲಿಸಬೇಕು. ಅಧಿಸೂಚನೆಗೆ CEN, ಅರ್ಜಿ ಸಲ್ಲಿಸಲು ವೆಬ್ಸೈಟ್  ಕ್ಲಿಕ್ಕಿಸಿ. ಆರ್ಆರ್ಬಿ ಬೆಂಗಳೂರು ವೆಬ್ಸೈಟ್

.'ವಾಷಿಂಗ್ಟನ್ ಪೋಸ್ಟ್'ನಲ್ಲಿ ಭಾರಿ ಉದ್ಯೋಗ ಕಡಿತ: ಶಶಿ ತರೂರ್ ಪುತ್ರನಿಗೂ ಕೊಕ್!.ಕೇಂದ್ರ ಬಜೆಟ್ | ರಾಮನಗರ: ಹೂಡಿಕೆ–ಉದ್ಯೋಗ ಸೃಷ್ಟಿಗೆ ಪೂರಕ ಬಜೆಟ್; ಪ್ರಶಾಂತ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.