ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆಯಲ್ಲಿ 5,696 ಸಹಾಯಕ ಲೊಕೊ ಪೈಲಟ್ ಹುದ್ದೆಗಳು;ನೇಮಕಾತಿ ಪ್ರಕ್ರಿಯೆ ಹೇಗಿದೆ?

Published 24 ಜನವರಿ 2024, 23:30 IST
Last Updated 24 ಜನವರಿ 2024, 23:30 IST
ಅಕ್ಷರ ಗಾತ್ರ

ರೈಲ್ವೆ ಇಲಾಖೆಯ ‘ರೈಲ್ವೆ ನೇಮಕಾತಿ ಮಂಡಳಿಗಳಿಂದ‘ (RRBs) 5,696 ಸಹಾಯಕ ಲೊಕೊ ಪೈಲಟ್‌ಗಳ (ALP) ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಅರ್ಹ ಪುರುಷ, ಮಹಿಳೆ, ಲಿಂಗತ್ವ ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಬಹುದು.

ದೇಶದಲ್ಲಿರುವ ಒಟ್ಟು 21 ರೈಲ್ವೆ ನೇಮಕಾತಿ ಮಂಡಳಿಗಳು ಒಟ್ಟಾರೆ ಹುದ್ದೆಗಳಲ್ಲಿನ ತಮ್ಮ ವ್ಯಾಪ್ತಿಯ ಹುದ್ದೆಗಳಿಗೆ ಸಂಬಂಧಿಸಿದಂತೆ ನೇಮಕಾತಿ ಪ್ರಕ್ರಿಯೆ ನಡೆಸುತ್ತವೆ. ಅಭ್ಯರ್ಥಿಗಳು ತಮ್ಮ ಇಷ್ಟದ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಒಬ್ಬ ಅಭ್ಯರ್ಥಿ ಒಂದು ಕಡೆಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹ.


ಈ ಹುದ್ದೆಗಳಿಗೆ ನೇಮಕಾತಿಯು ಬಹು ಹಂತದಲ್ಲಿ ನಡೆಯಲಿದೆ. ವಿಶೇಷಚೇತನ (ಅಂಗವಿಕಲ) ಅಭ್ಯರ್ಥಿಗಳಿಗೆ ಹುದ್ದೆಗಳು ಮೀಸಲು ಇರುವುದಿಲ್ಲ. ಆರ್‌ಆರ್‌ಬಿ ಬೆಂಗಳೂರಲ್ಲಿ 473 ಸಹಾಯಕ ಲೊಕೊ ಪೈಲಟ್‌ ಹುದ್ದೆಗಳಿವೆ. ಇದಕ್ಕಾಗಿ ಎಲ್ಲ ಮಂಡಳಿಗಳಿಗೂ ಅನ್ವಯವಾಗುವಂತೆ ಏಕೀಕೃತ ವಿವರಾಣಾತ್ಮಕ ಅಧಿಸೂಚನೆ (CEN) ಹೊರಡಿಸಲಾಗಿದೆ.

ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ
ಈಗಾಗಲೇ ಜನವರಿ 20 ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಫೆಬ್ರುವರಿ 19 ಕಡೆಯ ದಿನ. ಜನರಲ್, ಒಬಿಸಿ ಅವರಿಗೆ ₹500, ಎಸ್‌.ಸಿ/ಎಸ್‌ಟಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹250 ಅರ್ಜಿ ಶುಲ್ಕವಿದೆ.


ವಿದ್ಯಾರ್ಹತೆ ಏನಿದೆ?
ಮೆಟ್ರಿಕುಲೇಷನ್ (ಎಸ್‌ಎಸ್‌ಎಲ್‌ಸಿ) ಜೊತೆಗೆ ಐಟಿಐ ಮಾಡಿದವರು (ಆಯ್ದ ಕ್ಷೇತ್ರಗಳಲ್ಲಿ) ಅಥವಾ ಮೆಟ್ರಿಕುಲೇಷನ್ ಜೊತೆಗೆ ಮೂರು ವರ್ಷದ ಡಿಪ್ಲೊಮಾ, ಎಂಜಿನಿಯರಿಂಗ್ ಪದವಿ (ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್‌, ಆಟೊಮೊಬೈಲ್ ಎಂಜನಿಯರಿಂಗ್ ಮಾತ್ರ) ಮಾಡಿದವರು ಅರ್ಜಿ ಸಲ್ಲಿಸಲು ಅರ್ಹ. ಆರಂಭಿಕ ವೇತನ ₹19,900.


ವಯೋಮಾನ
18 ರಿಂದ 30 ವರ್ಷ ವಯೋಮಾನದವರು ಅರ್ಜಿ ಸಲ್ಲಿಸಲು ಅರ್ಹರು. ಎಸ್‌.ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅವರಿಗೆ 3 ವರ್ಷ ವಯೋಮಾನದಲ್ಲಿ ಸಡಿಲಿಕೆ ಇದೆ. ನಿವೃತ್ತ ಸೈನಿಕರಿಗೂ ನಿಯಮಾನುಸಾರ ಸಡಿಲಿಕೆ ಇದೆ.


ನೇಮಕಾತಿ ಪ್ರಕ್ರಿಯೆ ಹೇಗಿದೆ?
ಈ ನೇಮಕಾತಿಯು ಸ್ವಲ್ಪ ಕಠಿಣ ಹಾಗೂ ದೀರ್ಘ ಹಂತದ ಪ್ರಕ್ರಿಯೆಯನ್ನು ಹೊಂದಿರುತ್ತದೆ. ಒಟ್ಟು 3 ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ. ಆ ನಂತರ ನಿಗದಿಪಡಿಸಿದ ವೈದ್ಯಕೀಯ ಮಾನದಂಡಗಳನ್ನು ಅಭ್ಯರ್ಥಿಗಳು ಪೂರೈಸಬೇಕಾಗುತ್ತದೆ.


CBT–1: ಮೊದಲಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ–1 (CBT-1) ನಡೆಯಲಿದೆ. ಇದರಲ್ಲಿ 75 ಅಂಕಗಳಿಗೆ 75 ನಿಮಿಷದ ಒಂದೇ ಪತ್ರಿಕೆ ಇರುತ್ತದೆ. ತಲಾ ಮೂರು ತಪ್ಪು ಉತ್ತರಗಳಿಗೆ ಒಂದು ಅಂಕ ಕಳೆಯಲಾಗುತ್ತದೆ. ಮುಂದಿನ ಹಂತಕ್ಕೆ ಹೋಗಬೇಕಾದರೆ ಇದರಲ್ಲಿ ಕನಿಷ್ಠ ಅಂಕಗಳನ್ನು ಪಡೆಯಲೇಬೇಕು. ಇದರ ಅಂಕಗಳನ್ನು ಮೆರಿಟ್ ಪಟ್ಟಿಗೆ ಪರಿಗಣಿಸುವುದಿಲ್ಲ. ಕೇವಲ ಅರ್ಹತಾ ಪರೀಕ್ಷೆ ಇದಾಗಿರುತ್ತದೆ.


CBT–2: ಇದರಲ್ಲಿ 2.30 ಗಂಟೆಯ 175 ಪ್ರಶ್ನೆಗಳ ಎರಡು ಪತ್ರಿಕೆ ಇರುತ್ತವೆ. ಇದಕ್ಕೂ ಕೂಡ ನೆಗಟಿವ್ ಮಾರ್ಕ್ಸ್‌ ಇರುತ್ತವೆ. ಈ ಪರೀಕ್ಷೆಯಲ್ಲಿನ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳು 1:15 ರಲ್ಲಿ ಮುಂದಿನ ಹಂತಕ್ಕೆ ಹೋಗುತ್ತಾರೆ.


CABT: ಕಂಪ್ಯೂಟರ್ ಬೇಸ್ಡ್‌ ಆಪ್ಟಿಟ್ಯೂಡ್ ಟೆಸ್ಟ್‌ ಇದು ಮೂರನೇ ಹಂತವಾಗಿದ್ದು ವಿವರಣಾತ್ಮಕವಾಗಿರುತ್ತದೆ. ಇದಕ್ಕೆ ದೃಷ್ಟಿ ತಪಾಸಣೆಯ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ.


ಸಿಬಿಟಿ–2, ಸಿಎಬಿಟಿ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ಆರ್‌ಆರ್‌ಬಿಗಳು ವೇಟೇಜ್ ಆಧಾರದ ಮೇಲೆ ಆಯ್ಕೆ ಪಟ್ಟಿ ಪ್ರಕಟಿಸುತ್ತವೆ. ಸಿಬಿಟಿ–1, ಸಿಬಿಟಿ–2 ಪರೀಕ್ಷೆಗಳು ಇಂಗ್ಲಿಷ್, ಹಿಂದಿ, ಕನ್ನಡ ಸೇರಿದಂತೆ ಇತರ ಆಯ್ದ ಪ್ರಾದೇಶಿಕ ಭಾಷೆಗಳಲ್ಲಿ ಇರುತ್ತವೆ. ಸಿಎಬಿಟಿ ಇಂಗ್ಲಿಷ್ ಹಿಂದಿಯಲ್ಲಿ ಮಾತ್ರ ಇರುತ್ತದೆ.


ಆಸಕ್ತ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ಮಂಡಳಿಯ ವೆಬ್‌ಸೈಟ್‌ಗಳಿಗೆ ಹೋಗಿ (ಬೆಂಗಳೂರು– www.rrbbnc.gov.in) ಹುದ್ದೆಗಳ ವರ್ಗೀಕರಣ, ಪರೀಕ್ಷಾ ಪಠ್ಯಕ್ರಮ ಹಾಗೂ ಇತರೆ ಹೆಚ್ಚಿನ ಮಾಹಿತಿಗೆ ಸಂಪೂರ್ಣ ಅಧಿಸೂಚನೆ (CEN) ನೋಡಿಕೊಂಡು ಅರ್ಜಿ ಸಲ್ಲಿಸಬೇಕು.

21 ರೈಲ್ವೆ ನೇಮಕಾತಿ ಮಂಡಳಿಗಳು
ಭಾರತೀಯ ರೈಲ್ವೆಯ 17 ವಲಯಗಳಲ್ಲಿ ಒಟ್ಟು 21 ರೈಲ್ವೆ ನೇಮಕಾತಿ ಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರು, ಅಜ್ಮೀರ್, ಅಹಮದಾಬಾದ್, ಭೋಪಾಲ್, ಭುವನೇಶ್ವರ, ಬಿಲಾಸ್‌ಪುರ, ಚಂಡೀಗಢ, ಚೆನ್ನೈ, ಗೋರಖಪುರ, ಗುವಾಹಟಿ, ಜಮ್ಮು , ಶ್ರೀನಗರ, ಕೋಲ್ಕತ್ತ, ಮಾಲ್ಡಾ, ಮುಂಬೈ, ಮುಜಾಫರ್‌ಪುರ, ಪಟ್ನಾ, ಪ್ರಯಾಗರಾಜ್, ರಾಂಚಿ, ಸಿಕಂದರಾಬಾದ್, ಸಿಲಿಗುರಿ, ತಿರುವನಂತಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT