ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

RRB: ಯಾವುದೇ ಪದವಿ ಪಾಸಾದವರಿಗೆ ರೈಲ್ವೆಯಲ್ಲಿ 8,113 ನಾನ್ ಟೆಕ್ನಿಕಲ್ ಹುದ್ದೆಗಳು

18 ರಿಂದ 36 ವರ್ಷ ವಯೋಮಾನದವರು ಅರ್ಜಿ ಸಲ್ಲಿಸಲು ಅರ್ಹರು. ಎಸ್‌.ಸಿ, ಎಸ್‌ಟಿ, ಒಬಿಸಿ, ಇತರೆ ಅಭ್ಯರ್ಥಿಗಳಿಗೆ ವಯೋಮಾನದಲ್ಲಿ ಸಡಿಲಿಕೆ ಇದೆ.
Published : 26 ಸೆಪ್ಟೆಂಬರ್ 2024, 0:40 IST
Last Updated : 26 ಸೆಪ್ಟೆಂಬರ್ 2024, 0:40 IST
ಫಾಲೋ ಮಾಡಿ
Comments

ಬೆಂಗಳೂರು: ರೈಲ್ವೆ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ರೈಲ್ವೆ ನೇಮಕಾತಿ ಮಂಡಳಿಗಳು (RRBs) ಇತ್ತೀಚೆಗೆ ಹೆಚ್ಚು ನೇಮಕಾತಿ ಪ್ರಕ್ರಿಯೆಗಳನ್ನು ಆರಂಭಿಸುತ್ತಿವೆ. ಇದೇ ವರ್ಷ ಪ್ರಾರಂಭಿಸಲಾಗಿರುವ 5,696 ಸಹಾಯಕ ಲೊಕೊ ಪೈಲಟ್, 7,386 ಜೂನಿಯರ್ ಎಂಜಿನಿಯರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸದ್ಯ ಪ್ರಗತಿಯಲ್ಲಿದೆ.

ಈ ಸಾಲಿಗೆ ಮತ್ತೊಂದು ದೊಡ್ಡ ನೇಮಕಾತಿ ಎಂದರೆ ‘ನಾನ್ ಟೆಕ್ನಿಕಲ್ ಗ್ರಾಜ್ಯುಯೇಟ್’ ವಿಭಾಗದ 8,113 ಹುದ್ದೆಗಳ ನೇಮಕಾತಿ.

ನಾನ್ ಟೆಕ್ನಿಕಲ್ ಗ್ರಾಜ್ಯುಯೇಟ್ ವಿಭಾಗದಲ್ಲಿ ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರವೈಸರ್, ಸ್ಟೇಷನ್ ಮಾಸ್ಟರ್, ಗೂಡ್ಸ್ ಟ್ರೈನ್ ಮ್ಯಾನೇಜರ್,  ಜೂನಿಯರ್ ಅಕೌಂಟ್ ಅಸಿಸ್ಟಂಟ್ ಕಮ್ ಟೈಪಿಸ್ಟ್ ಹಾಗೂ ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಎಂಬ ಐದು ಬಗೆಯ ಹುದ್ದೆಗಳಿವೆ.

<div class="paragraphs"><p></p></div>

ಈಗಾಗಲೇ ಈ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು ಅಕ್ಟೋಬರ್ 14 ಕಡೆಯ ದಿನ. ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಜೂನಿಯರ್ ಅಕೌಂಟ್ ಅಸಿಸ್ಟಂಟ್ ಹಾಗೂ ಸೀನಿಯರ್ ಕ್ಲರ್ಕ್ ಹುದ್ದೆಗಳಿಗೆ ಇಂಗ್ಲಿಷ್ ಅಥವಾ ಹಿಂದಿ ಕಂಪ್ಯೂಟರ್ ಟೈಪಿಂಗ್ ಕೌಶಲ ಇರಬೇಕು.

ಅರ್ಹ ಪುರುಷ, ಮಹಿಳೆ, ಲಿಂಗತ್ವ ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ₹500, ಎಸ್‌.ಸಿ/ಎಸ್‌ಟಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹250 ಶುಲ್ಕವಿದೆ.

18 ರಿಂದ 36 ವರ್ಷ ವಯೋಮಾನದವರು ಅರ್ಜಿ ಸಲ್ಲಿಸಲು ಅರ್ಹರು. ಎಸ್‌.ಸಿ, ಎಸ್‌ಟಿ, ಒಬಿಸಿ, ಇತರೆ ಅಭ್ಯರ್ಥಿಗಳಿಗೆ ವಯೋಮಾನದಲ್ಲಿ ಸಡಿಲಿಕೆ ಇದೆ.

ಎರಡು ಹಂತದ ಕಂಪ್ಯೂಟರ್ ಬೇಸ್ಡ್ ಟೆಸ್ಟ್ (ಸಿಬಿಟಿ) ಮತ್ತು ದಾಖಲಾತಿಗಳ ಪರಿಶೀಲನೆ ಮೂಲಕ ಭರ್ತಿ ಮಾಡಲಾಗುತ್ತದೆ. ಸಿಬಿಟಿ–1 ರಲ್ಲಿ 100 ಅಂಕಗಳಿಗೆ ಒಂದು ಪತ್ರಿಕೆ, ಸಿಬಿಟಿ–2 ನಲ್ಲಿ 120 ಅಂಕಗಳಿಗೆ ಒಂದು ಪತ್ರಿಕೆ ಮಾತ್ರ ಇರುತ್ತದೆ. ಸಿಬಿಟಿ–1ರಲ್ಲಿ ಪಾಸಾದವರು ಮಾತ್ರ ಸಿಬಿಟಿ–2ಕ್ಕೆ ಅರ್ಹತೆ ಪಡೆಯುತ್ತಾರೆ.

ದೇಶದಲ್ಲಿರುವ ಒಟ್ಟು 21 ರೈಲ್ವೆ ನೇಮಕಾತಿ ಮಂಡಳಿಗಳು ಒಟ್ಟಾರೆ ಹುದ್ದೆಗಳಲ್ಲಿನ ತಮ್ಮ ವ್ಯಾಪ್ತಿಯ ಹುದ್ದೆಗಳಿಗೆ ಸಂಬಂಧಿಸಿದಂತೆ ನೇಮಕಾತಿ ಪ್ರಕ್ರಿಯೆ ನಡೆಸುತ್ತವೆ. ಅಭ್ಯರ್ಥಿಗಳು ತಮ್ಮ ಇಷ್ಟದ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ, ಒಬ್ಬ ಅಭ್ಯರ್ಥಿ ಒಂದು ಕಡೆಗೆ ಮಾತ್ರ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಎಲ್ಲ ಮಂಡಳಿಗಳಿಗೂ ಅನ್ವಯವಾಗುವಂತೆ ಏಕೀಕೃತ ವಿವರಾಣಾತ್ಮಕ ಅಧಿಸೂಚನೆ (CEN) ಹೊರಡಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ರೈಲ್ವೆ ಮಂಡಳಿ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ವರ್ಗೀಕರಣ, ಪರೀಕ್ಷಾ ಪಠ್ಯಕ್ರಮ ಹಾಗೂ ಇತರೆ ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿಕೊಂಡು ಅರ್ಜಿ ಸಲ್ಲಿಸಬಹುದು.

ಅಂಡರ್ ಗ್ಯಾಜ್ಯುಯೇಟ್ಸ್‌ಗೆ 3,445 ಹುದ್ದೆ

ನಾನ್ ಟೆಕ್ನಿಕಲ್ ಅಂಡರ್ ಗ್ಯಾಜ್ಯುಯೇಟ್ ವಿಭಾಗದಲ್ಲಿ 3,445 ಹುದ್ದೆಗಳಿಗೂ RRBs ಕಡೆಯಿಂದ ನೇಮಕಾತಿ ನಡೆಯುತ್ತಿದೆ. ಟಿಕೆಟ್ ಕ್ಲರ್ಕ್ 2022, ಅಕೌಂಟ್ಸ್ ಕ್ಲರ್ಕ್ 361, ಜೂನಿಯರ್ ಕ್ಲರ್ಕ್ 990 ಮತ್ತು ಟ್ರೈನ್ಸ್ ಕ್ಲರ್ಕ್ ಎಂಬ 72 ಹುದ್ದೆಗಳಿವೆ. ಪಿಯುಸಿ ಪಾಸಾಗಿರುವ 18ರಿಂದ33ರ ವಯೋಮಾನ ಅರ್ಹ ಪುರುಷ, ಮಹಿಳೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 20 ಅರ್ಜಿ ಸಲ್ಲಿಸಲು ಕಡೆಯ ದಿನ. RRB ಬೆಂಗಳೂರು ವ್ಯಾಪ್ತಿಗೆ 60 ಹುದ್ದೆಗಳಿವೆ. ವೆಬ್‌ಸೈಟ್ www.rrbbnc.gov.in.

21 ರೈಲ್ವೆ ನೇಮಕಾತಿ ಮಂಡಳಿಗಳು

ಭಾರತೀಯ ರೈಲ್ವೆಯ 17 ವಲಯಗಳಲ್ಲಿ ಒಟ್ಟು 21 ರೈಲ್ವೆ ನೇಮಕಾತಿ ಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರು ಅಜ್ಮೀರ್ ಅಹಮದಾಬಾದ್ ಭೋಪಾಲ್ ಭುವನೇಶ್ವರ ಬಿಲಾಸ್‌ಪುರ ಚಂಡೀಗಢ ಚೆನ್ನೈ ಗೋರಖಪುರ ಗುವಾಹಟಿ ಜಮ್ಮು ಶ್ರೀನಗರ ಕೋಲ್ಕತ್ತ ಮಾಲ್ಡಾ ಮುಂಬೈ ಮುಜಾಫರ್‌ಪುರ ಪಟ್ನಾ ಪ್ರಯಾಗರಾಜ್ ರಾಂಚಿ ಸಿಕಂದರಾಬಾದ್ ಸಿಲಿಗುರಿ ತಿರುವನಂತಪುರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT