ಮಂಗಳವಾರ, ಸೆಪ್ಟೆಂಬರ್ 28, 2021
21 °C
ತಿಂಗಳು ಪೂರ್ತಿ ನಡೆಯುವ ವರ್ಚುವಲ್‌ ಉದ್ಯೋಗ ಮೇಳಕ್ಕೆ ಚಾಲನೆ

ಮೊದಲ ದಿನ ಸಾವಿರ ಜನರಿಗೆ ಉದ್ಯೋಗಾವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೌಶಲ ಅಭಿವೃದ್ಧಿ ನಿಗಮವು ಒಂದು ತಿಂಗಳವರೆಗೆ ಹಮ್ಮಿಕೊಂಡಿರುವ ವರ್ಚುವಲ್‌ ಉದ್ಯೋಗ ಮೇಳದಲ್ಲಿ ಮೊದಲ ದಿನವೇ ಸಾವಿರ ಅಭ್ಯರ್ಥಿಗಳು ಉದ್ಯೋಗಾವಕಾಶ ಪಡೆದರು.

ನಗರದಲ್ಲಿ ಶುಕ್ರವಾರ ಸಾಂಕೇತಿಕವಾಗಿ ಕೆಲವು ಯುವಕ–ಯುವತಿಯರಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಉಪಮುಖ್ಯಮಂತ್ರಿ, ಕೌಶಲ ಅಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ‘ಮೇಳದಲ್ಲಿ ಭಾಗವಹಿಸಿದ್ದ 5 ಸಾವಿರ ಯುವಕ–ಯುವತಿಯರ ಪೈಕಿ ಒಂದು ಸಾವಿರ ಜನರಿಗೆ ಮೊದಲೇ ದಿನವೇ ಉದ್ಯೋಗ ಸಿಕ್ಕಿದ್ದು ಸಂತಸದ ಸಂಗತಿ. ಉದ್ಯೋಗಾಂಕ್ಷಿಗಳು ಮತ್ತು ಉದ್ಯೋಗದಾತ ಕಂಪನಿಗಳ ಜತೆ ನಿಗಮವು ಸೇತುವೆಯಾಗಿ ಕೆಲಸ ಮಾಡುತ್ತಿದೆ’ ಎಂದರು.

‘ನಿಗಮವು ಸ್ಕಿಲ್‌ ಕನೆಕ್ಟ್‌ ಹೆಸರಿನ https://skillconnect.kaushalkar.com/ ಪೋರ್ಟಲ್‌ ತೆರೆದಿದ್ದು, ಅದರಲ್ಲಿಯೂ ಉದ್ಯೋಗಾಂಕ್ಷಿಗಳು ನೋಂದಣಿ ಮಾಡಿಕೊಳ್ಳಬಹುದಾಗಿದೆ’ ಎಂದು ಮಾಹಿತಿ ನೀಡಿದರು.

‘ಐದು ಲಕ್ಷ ಭಾರತೀಯರಿಗೆ ಉದ್ಯೋಗಾವಕಾಶ ನೀಡಲು ಜಪಾನ್‌ ಮುಂದೆ ಬಂದಿದ್ದು, ಈ ಬಗ್ಗೆ ಭಾರತ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿದೆ. ಬ್ರಿಟನ್‌ಗೆ 1,000 ಶುಶ್ರೂಷಕರನ್ನು ಕಳಿಸುವ ಬಗ್ಗೆಯೂ ಒಪ್ಪಂದ ಆಗಿದೆ’ ಎಂದರು.

ಮೇಳದಲ್ಲಿ ಭಾಗವಹಿಸಿರುವ ಕಂಪನಿಗಳು:

ಎಚ್‌ಜಿಎಸ್‌, ಆದಿತ್ಯ ಬಿರ್ಲಾ, ಸನ್‌ಸೆರಾ ಎಂಜಿನಿಯರಿಂಗ್‌, ಐಬಿಎಂ ಇಂಡಿಯಾ, ವಿಪ್ರೊ, ಟೀಮ್‌ ಲೀಸ್‌, ರಿಲಯನ್ಸ್‌ನ ಏಳು ಸಹ ಕಂಪನಿಗಳು, ಅಫ್ರಿಮ್‌ ಡಾಟಾ ಸರ್ವೀಸ್‌, ಡ್ರೀಮ್‌ ಆರ್ಬಿಟ್‌, ಹಿಂದುಜಾ, ವಿಸ್ಟ್ರಾನ್‌, ಫ್ಲಿಪ್‌ಕಾರ್ಟ್‌, ಡಿಎಚ್‌ಎಲ್‌, ಅಲ್‌ ಲಾಜಿಸ್ಟಿಕ್ಸ್‌, ಮೆಡಿಝಿನಿಕಾ, ಮೆಶೋ, ಗ್ರಾಸ್‌ರೂಟ್ಸ್‌ ಬಿಪಿಒ, ಇಂಡಿಯನ್‌ ಮನಿ, ನವತಾ ರೋಡ್‌  ಟ್ರಾನ್ಸ್‌ಪೋರ್ಟ್‌, ಲ್ಯಾಂಡ್‌ಮಾರ್ಕ್‌, ಐಟಿಸಿ, ಕ್ವೆಸ್‌ ಕಾರ್ಪ್‌, ಸ್ಟ್ರೆಪರಾವಾ ಇಂಡಿಯಾ ಸೇರಿ ಇಪ್ಪತ್ತಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಿದ್ದವು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು