ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಬಯಸುವವರು, ಕೆಲಸದ ನಿಮಿತ್ತ ಹೋಗಬೇಕಾದವರು ಎಲ್ಲರೂ ತಮ್ಮ ಅಗತ್ಯಕ್ಕೆ ತಕ್ಕಂತೆ, ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರದಲ್ಲಿ ವಿದೇಶಿ ಭಾಷೆಗಳನ್ನು ಕಲಿಯಬಹುದು
14 ಭಾಷೆ, ಕೈಗೆಟಕುವ ಶುಲ್ಕ
ಜಪನೀಸ್, ಫ್ರೆಂಚ್ ಸೇರಿದಂತೆ ಒಟ್ಟು 14 ಭಾಷೆಗಳಲ್ಲಿ ಕಲಿಯಬಹುದು. ಉದ್ಯೋಗ ಕ್ಷೇತ್ರದಲ್ಲೂ ಒಳ್ಳೆಯ ಅವಕಾಶಗಳಿದ್ದು, ಈ ಎಲ್ಲ ಕೋರ್ಸ್‌ಗಳಿಗೆ ಕನಿಷ್ಠ ₹ 6 ಸಾವಿರದಿಂದ ಗರಿಷ್ಠ ₹ 30 ಸಾವಿರ ಶುಲ್ಕ ನಿಗದಿ ಮಾಡಲಾಗಿದೆ
ನಾಗರಿಕ ಸೇವಾ ಪರೀಕ್ಷೆಗಳಲ್ಲೂ ವಿದೇಶಿ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ವಿದೇಶಾಂಗ ಸೇವೆಗೆ ಸೇರಿದರೆ ಬೇರೆ ದೇಶಗಳಲ್ಲಿ ರಾಯಭಾರಿಗಳಾಗಿ ಕೆಲಸ ಮಾಡಲು ಸುಲಭವಾಗುತ್ತದೆ. ಇದಲ್ಲದೆ ದೇಶದ ಪ್ರಮುಖ ನಗರಗಳಲ್ಲಿ ವಿದೇಶಗಳ ಕಾನ್ಸುಲೆಟ್ ಕಚೇರಿಗಳಿವೆ. ಅಂತಹ ಕಡೆ ಕಾರ್ಯನಿರ್ವಹಿಸಲು ವಿದೇಶಿ ಭಾಷೆಗಳ ಕಲಿಕೆ ನೆರವಿಗೆ ಬರಲಿದೆ
ಪ್ರೊ. ಜ್ಯೋತಿ ವೆಂಕಟೇಶ್, ನಿರ್ದೇಶಕಿ , ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರ , ಬೆಂಗಳೂರು ನಗರ ವಿ.ವಿ.