ಶುಕ್ರವಾರ, ಜನವರಿ 27, 2023
17 °C

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಗ–34

451. ಉತ್ತರ ಪ್ರದೇಶದ ರಾಜಧಾನಿ ಯಾವುದು?
ಎ) ಅಲಹಾಬಾದ್‌
ಬಿ) ವಾರಾಣಸಿ
ಸಿ) ನೋಯ್ಡಾ
ಡಿ) ಲಖನೌ

452. ಇವುಗಳಲ್ಲಿ ಯಾವುದು ದ್ರಾವಿಡ ಭಾಷೆ ಅಲ್ಲ?
ಎ) ತೆಲುಗು
ಬಿ) ಮರಾಠಿ
ಸಿ) ತುಳು
ಡಿ) ಕನ್ನಡ

453. ನ್ಯೂಜಿಲ್ಯಾಂಡ್ ದೇಶದ ರಾಜಧಾನಿ ಯಾವುದು?
ಎ) ರಿಯೋ ಡಿ ಜನೈರೋ
ಬಿ) ಸಿಡ್ನಿ
ಸಿ) ಅಡಿಲೇಟ್
ಡಿ) ವೆಲಿಂಗ್ಟನ್

454) ಶ್ರೀಹರಿಕೋಟಾ ಯಾವ ಕಾರಣಕ್ಕಾಗಿ ಪ್ರಸಿದ್ಧವಾಗಿದೆ?
ಎ) ಕ್ರಿಕೆಟ್ ಕ್ರೀಡಾಂಗಣ
ಬಿ) ಧಾರ್ಮಿಕ ಸ್ಥಳ
ಸಿ) ಬಾಹ್ಯಾಕಾಶ ಕೇಂದ್ರ
ಡಿ) ರಾಜಕೀಯ ಚಟುವಟಿಕೆಗಳಿಗೆ

455) ಎಫ್-16 ಎಂಬುದು
ಎ) ಯುದ್ಧವಿಮಾನ
ಬಿ) ನೌಕಾನೆಲೆ
ಸಿ) ಶಿಖರ
ಡಿ) ಮೇಲಿನ ಯಾವುದೂ ಅಲ್ಲ

456) ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಈ ಕೆಳಗಿನ ಯಾವ ಉದ್ದೇಶಗಳಿಗಾಗಿ ಪ್ರಾರಂಭಿಸಲಾಗಿದೆ?
ಎ) ಬಿಪಿಎಲ್ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕ ಒದಗಿಸುವುದು
ಬಿ) ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸುವುದು
ಸಿ) ಹೆಣ್ಣು ಮಕ್ಕಳನ್ನು ಸೇನೆಗೆ ಸೇರಿಸಿಕೊಳ್ಳುವುದು
ಡಿ) ನಗರಗಳ ಸೌಂದರ್ಯ ಹೆಚ್ಚಿಸುವುದು

457) ಚಂಪಾರಣ್ಯ ಸತ್ಯಾಗ್ರಹದ ನಾಯಕತ್ವ ವಹಿಸಿದ್ದವರು
ಎ) ಸರ್ದಾರ್ ಪಟೇಲ್
ಬಿ) ಮಹಾತ್ಮ ಗಾಂಧಿ
ಸಿ) ಜವಾಹರಲಾಲ್ ನೆಹರು
ಡಿ) ಲಾಲ್ ಬಹದ್ದೂರ್ ಶಾಸ್ತ್ರಿ

458) ಈ ವಾದ್ಯವು ತಾಳ ವಾದ್ಯವಾಗಿದೆ
ಎ) ಮೃದಂಗ
ಬಿ) ತಂಬೂರಿ
ಸಿ) ಪಿಟೀಲು
ಡಿ) ವೀಣೆ

459) ಭಾರತೀಯ ಸರ್ವೋಚ್ಛ ನ್ಯಾಯಾಲಯದ ಕೇಂದ್ರ ಕಚೇರಿ ಇರುವುದು
ಎ) ನವದೆಹಲಿ
ಬಿ) ಬೆಂಗಳೂರು
ಸಿ) ಧಾರವಾಡ
ಡಿ) ಕೋಲ್ಕತ್ತ

460) ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರಾವಧಿ
ಎ) 5 ವರ್ಷಗಳು
ಬಿ) 6 ವರ್ಷಗಳು
ಸಿ) 4 ವರ್ಷಗಳು
ಡಿ) 3 ವರ್ಷಗಳು

461) ಗ್ರಾಮೀಣ ಮಹಿಳೆಯರ ವಿಕಾಸಕ್ಕಾಗಿ ಕರ್ನಾಟಕ ಸರ್ಕಾರ ಜಾರಿಗೆ ತಂದ ಕಾರ್ಯಕ್ರಮ ಯಾವುದು?
ಎ) ಲೋಕಾಯುಕ್ತ
ಬಿ) ಸ್ತ್ರೀಶಕ್ತಿ
ಸಿ) ಸಾಕ್ಷರಭಾರತ
ಡಿ) ಕುಟುಂಬ ಕಲ್ಯಾಣ ಕಾರ್ಯಕ್ರಮ

462) ‘ಮಾವಿನ ಕೊಯ್ಲು’ ಎಂಬ ಹೆಸರಿನ ಮಳೆ ಯಾವ ತಿಂಗಳಿನಲ್ಲಿ ಬರುತ್ತದೆ?
ಎ) ಡಿಸೆಂಬರ್‌
ಬಿ) ಎಪ್ರಿಲ್
ಸಿ) ಜೂನ್‌
ಡಿ) ಸೆಪ್ಟೆಂಬರ್

463) ವೈದ್ಯರೊಬ್ಬರು ಸರಿಯಾಗಿ ಬೆಳವಣಿಗೆಯಾಗದ ಮೂಳೆಗಳುಳ್ಳ ಮಗುವನ್ನು ಬೆಳಗಿನ ಬಿಸಿಲಿನಲ್ಲಿ ಓಡಾಡಿಸಲು ಸಲಹೆ ನೀಡುತ್ತಾರೆ. ಏಕೆಂದರೆ ಮಗುವಿನ ಸರಿಯಾದ ಬೆಳವಣಿಗೆಗೆ ಈ ಕೆಳಗಿನ ಒಂದು ವಿಕಿರಣ ಸಹಾಯ ಮಾಡುತ್ತದೆ. ಅದು ಯಾವುದು?
ಎ) ಕ್ಷ-ಕಿರಣ
ಬಿ) ಅವಕೆಂಪು ಕಿರಣ
ಸಿ) ನೇರಳಾತೀತ ಕಿರಣ
ಡಿ) ಗಾಮಾ ಕಿರಣ

464) ಇಂಧನ ಉಳಿತಾಯಕ್ಕೆ ಈ ಕೆಳಗಿನ ಯಾವ ಅಭ್ಯಾಸ ಸೂಕ್ತವಲ್ಲ?
ಎ) ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವುದು
ಬಿ) ಕಡಿಮೆ ದೂರವನ್ನು ಕ್ರಮಿಸಲು ಮೋಟಾರ್ ಸೈಕಲ್‌ಅನ್ನು ಬಳಸುವುದು
ಸಿ) ಕಡಿಮೆ ದೂರವನ್ನು ಕ್ರಮಿಸಲು ಸೈಕಲ್‌ಅನ್ನು ಬಳಸುವುದು
ಡಿ) ಕಡಿಮೆ ದೂರವನ್ನು ನಡೆದುಕೊಂಡು ಕ್ರಮಿಸುವುದು

465) ಕಾರ್ಬೊರೇಟರ್‌ ಕಾರ್ಯವೆಂದರೆ
ಎ) ಪೆಟ್ರೋಲ್‌ಅನ್ನು ಮಾತ್ರ ಎಂಜಿನ್‌ಗೆ ಪ್ರವೇಶಿಸುವಂತೆ ಮಾಡುತ್ತದೆ
ಬಿ) ಗಾಳಿಯನ್ನು ಮಾತ್ರ ಎಂಜಿನ್‌ಗೆ ಪ್ರವೇಶಿಸುವಂತೆ ಮಾಡುತ್ತದೆ
ಸಿ) ಪೆಟ್ರೋಲ್ ಮತ್ತು ಗಾಳಿಯ ಮಿಶ್ರಣವನ್ನು ಎಂಜಿನ್‌ಗೆ ಪ್ರವೇಶಿಸುವಂತೆ ಮಾಡುತ್ತದೆ
ಡಿ) ಡೀಸೆಲ್ ಮತ್ತು ಪೆಟ್ರೋಲ್ ಮಿಶ್ರಣವನ್ನು ಎಂಜಿನ್‌ಗೆ ಪ್ರವೇಶಿಸುವಂತೆ ಮಾಡುತ್ತದೆ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು