ಶಿರಸಿ: ನಗರದ ಸರ್ಕಾರಿ ಉರ್ದು ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಶಗುಫ್ತಾ ಅಂಜುಮ್ (625) ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಪೂರ್ಣಾಂಕ ಪಡೆದು ಸಾಧನೆ ತೋರಿದ್ದಾರೆ.

ಬಿಹಾರ ಮೂಲದ ಶಗುಫ್ತಾ ಐದು ವರ್ಷಗಳಿಂದ ಶಿರಸಿಯ ಸರ್ಕಾರಿ ಉರ್ದು ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಈಕೆ ಬಿಹಾರದಲ್ಲಿ ಮೌಲ್ವಿಯಾಗಿ ಕಾರ್ಯನಿರ್ವಹಿಸಿದ್ದ ಮೌಲಾನಾ ಅವರ ಪುತ್ರಿಯಾಗಿದ್ದಾಳೆ. ಕೆಲಸದ ನಿಮಿತ್ತ ನಗರದ ಹೊರವಲಯವಾದ ಟಿಪ್ಪು ನಗರದಲ್ಲಿ ವಾಸವಿರುವ ಕುಟುಂಬದ ಜತೆ ಇದ್ದು, ನಗರದ ಸರ್ಕಾರಿ ಉರ್ದು ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಳು.

ಈ ಕುರಿತು ಮಾತನಾಡಿದ ಶಗುಫ್ತಾ, 'ನನಗೆ ಶಾಲೆಯ ಶಿಕ್ಷಕ ವೃಂದದಿಂದ ಸಾಕಷ್ಟು ಬೆಂಬಲ ಸಿಕ್ಕಿದೆ. ರಂಜಾನ್ ಸಮಯದಲ್ಲಿಯೂ ವಿಶೇಷ ತರಗತಿ ತೆಗೆದುಕೊಂಡು ಮಾರ್ಗದರ್ಶನ ನೀಡಲಾಗಿತ್ತು. ಕಠಿಣ ಪರಿಶ್ರಮವೇ ಸಾಧನೆಗೆ ಮೂಲ. ನಾನು ಭವಿಷ್ಯದಲ್ಲಿ ವೈದ್ಯೆಯಾಗುವ ಆಸೆ ಹೊಂದಿದ್ದೇನೆ' ಎಂದರು.

'ಆರಂಭದಿಂದಲೂ ಶೈಕ್ಷಣಿಕವಾಗಿ ಉತ್ತಮ ಸಾಧನೆ ತೋರುತ್ತಿದ್ದ ಶಗುಫ್ತಾ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಕೂಡ ಉತ್ತಮ ರ್ಯಾಂಕ್ ಪಡೆಯುವ ವಿಶ್ವಾಸ ಇತ್ತು. ಆಕೆಯ ಪರಿಶ್ರಮದ ಫಲವಾಗಿ ಪೂರ್ಣಾಂಕ ಬಂದಿದೆ' ಎಂಬುದು ಶಾಲೆ ಮುಖ್ಯಶಿಕ್ಷಕ ಆನಂದ ಕೊರವರ ಮಾತು.
.SSLC Result 2025: ಶೇ 66.14 ರಷ್ಟು ಫಲಿತಾಂಶ; ಬಾಲಕಿಯರೇ ಮೇಲುಗೈ.SSLC Results 2025: ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.