ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಲ್ ಸ್ಟ್ಯಾಕ್‌ ಡೆವಲಪರ್‌ವೃತ್ತಿ ಅವಕಾಶ ವಿಪುಲ

Last Updated 1 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಕಾ ರ್ಪೊರೇಟ್ ಮತ್ತು ಸ್ಟಾರ್ಟ್ಅಪ್ ಕ್ಷೇತ್ರಗಳಲ್ಲಿ ಸದ್ಯಕ್ಕೆ ಫುಲ್ ಸ್ಟ್ಯಾಕ್ ಡೆವಲಪರ್‌ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಅವಕಾಶಗಳು ಲಭ್ಯವಾಗುತ್ತಿವೆ. ತಂತ್ರಜ್ಞಾನ ಕಂಪನಿಗಳು ಹೆಚ್ಚಿನ ವೆಚ್ಚ ಮತ್ತು ಸಮಯ ಉಳಿಸಲು ಸಣ್ಣ, ಸಣ್ಣ ತಂಡಗಳತ್ತ ಹೆಚ್ಚು ಗಮನ ನೀಡುತ್ತಿರುವುದು ಕಳೆದ ಒಂದು ವರ್ಷದಿಂದ ಫುಲ್ ಸ್ಟ್ಯಾಕ್ ಡೆವಲಪರ್‌ಗಳಿಗೆ ಬೇಡಿಕೆ ಜಾಸ್ತಿಯಾಗಲು ಕಾರಣ. ಸ್ಟಾರ್ಟ್ಅಪ್‌ಗಳು ಮಾತ್ರವಲ್ಲ, ಮುಖ್ಯವಾಹಿನಿಯ ಐಟಿ ಉದ್ಯಮದ ಉತ್ಪನ್ನ ಆಧಾರಿತ ಕಂಪನಿಗಳಲ್ಲಿ ಕೂಡ ಇಂತಹ ಉದ್ಯೋಗಗಳಿಗೆ ಹೆಚ್ಚಿನ ಬೇಡಿಕೆ ಇದೆ. ಉದ್ಯಮದ ವರದಿಗಳ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಇಂತಹ ಬಹುಬಗೆಯ ಕೌಶಲಗಳನ್ನು ಹೊಂದಿರುವ ವೃತ್ತಿಪರರಿಗೆಶೇ 30ರಷ್ಟು ಬೇಡಿಕೆ ಹೆಚ್ಚಿದೆ.

ದತ್ತಾಂಶ, ಸರ್ವರ್, ಸಿಸ್ಟಮ್ ಎಂಜಿನಿಯರಿಂಗ್ ಮತ್ತು ಗ್ರಾಹಕರಿಗೆ ಸಂಬಂಧಿಸಿದ ಎಲ್ಲ ಕೆಲಸ ಕಾರ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಕುಶಲ ತಂತ್ರಜ್ಞರೇ ಫುಲ್ ಸ್ಟ್ಯಾಕ್ ಡೆವಲಪರ್. ಮಾಹಿತಿ ತಂತ್ರಜ್ಞಾನ ಕಂಪನಿಯಲ್ಲಿ ಈ ತಂತ್ರಜ್ಞರ ಕೆಲಸವೆಂದರೆ ಯಾವುದೇ ಎಂಜಿನಿಯರಿಂಗ್ ತಂಡದ ಕೆಲಸ ಕಾರ್ಯಗಳಿಗೆ ಹೊಸ ಮೌಲ್ಯವನ್ನು ಸೇರ್ಪಡೆ ಮಾಡುವುದು. ಇಂತಹ ತಂತ್ರಜ್ಞರು ವೈವಿಧ್ಯಮಯ ಕೌಶಲ ಮತ್ತು ಸ್ವತಂತ್ರವಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುವುದರಿಂದ ಯಾವುದೇ ಒಂದು ಯೋಜನೆಯಲ್ಲಿ ಕೆಲಸ ಮಾಡುವಾಗ ಕಾರ್ಯಾಚರಣೆಯ ವೆಚ್ಚ ಕಡಿಮೆ ಮಾಡಲು ಸಾಧ್ಯ.

ಫುಲ್ ಸ್ಟ್ಯಾಕ್ ವೆಬ್ ಡೆವಲಪರ್‌ಗಳ ಕಾರ್ಯವೇನು?

ತಂತ್ರಜ್ಞಾನಗಳ ನೆರವು ಪಡೆದು ಮತ್ತು ವಿಶೇಷ ಪರಿಣತಿಯ ಮೂಲಕ ಉತ್ಪನ್ನವೊಂದನ್ನು ಮೊದಲಿನಿಂದ ಕೊನೆಯವರೆಗೆ ಸಮಗ್ರವಾಗಿ ತಯಾರಿಸುವುದು ಅಥವಾ ನಿಗದಿಪಡಿಸಿದ ಕೆಲಸ - ಕಾರ್ಯಗಳನ್ನು ಹೆಚ್ಚು ವ್ಯವಸ್ಥಿತವಾಗಿ ನಿರ್ವಹಿಸುವ ಪರಿಣತಿ ಇವರಿಗಿರುತ್ತದೆ. ಒಂದು ನಿರ್ದಿಷ್ಟ ಯೋಜನೆಯನ್ನು ಕಾರ್ಯಗತಗೊಳಿಸಲು ಅಗತ್ಯವಾದ ಬಹಳಷ್ಟು ತಂತ್ರಜ್ಞಾನಗಳನ್ನು ಫುಲ್ ಸ್ಟ್ಯಾಕ್‌ ವಿವರಿಸುತ್ತದೆ. ಈ ಬಗೆಯ ಡೆವಲಪರ್‌ಗೆ ಮೂರು ಹಂತದ ಅಪ್ಲಿಕೇಷನ್ ಸಿಸ್ಟಮ್ ಮಾದರಿಯ ಸಂಪೂರ್ಣ ಮಾಹಿತಿ ಇರುತ್ತದೆ. ಅಪ್ಲಿಕೇಷನ್ ಅಥವಾ ಉತ್ಪನ್ನದ ಫ್ರಂಟ್‌ಎಂಡ್ ಮತ್ತು ಬ್ಯಾಕ್‌ಎಂಡ್ ಘಟಕಗಳನ್ನು ನಿರ್ಮಿಸಲು ಬೇಕಾದ ಎಲ್ಲಾ ತಾಂತ್ರಿಕ ಭಾಷೆಗಳನ್ನು ಕೂಡ ಈ ತಂತ್ರಜ್ಞರು ಅರಿತಿರುತ್ತಾರೆ.

ಸ್ಟ್ಯಾಕ್‌ ಡೆವಲಪರ್‌ಗೆ ಈ ಕೆಳಕಂಡ ಪ್ರೋಗ್ರಾಮಿಂಗ್ ಜ್ಞಾನ ಅಗತ್ಯ...

1. ಪ್ರಸ್ತುತಿ ಹಂತ: ಇದು ಬಳಕೆದಾರರ ಸಂಪರ್ಕ ಸಾಧನದ ಜತೆ ವ್ಯವಹರಿಸುವ ಅಪ್ಲಿಕೇಷನ್‌ನ ಪ್ರಮುಖ ಭಾಗವಾಗಿದೆ. ಫುಲ್ ಸ್ಟ್ಯಾಕ್ ಡೆವಲಪರ್ ಎಚ್‌ಟಿಎಂಎಲ್5, ಸಿಎಸ್‌ಎಸ್3 ಮತ್ತು ಜಾವಾಸ್ಕ್ರಿಪ್ಟ್‌ನಂತಹ ತಂತ್ರಜ್ಞಾನಗಳಲ್ಲಿ ವಿಶೇಷ ಪರಿಣತಿ ಹೊಂದಿರಬೇಕು. ಆ್ಯಂಗುಲರ್ ಮತ್ತು ರಿಯಾಕ್ಟ್ ಜೆಎಸ್- ನಂತಹ ಫ್ರೇಮ್‌ವರ್ಕ್ಸ್ ಬಗ್ಗೆ ಸಂಪೂರ್ಣ ತಿಳಿವಳಿಕೆ ಹೊಂದಿರುವುದು ಅವಶ್ಯಕ.

2. ಬ್ಯುಸಿನೆಸ್ ಲಾಜಿಕ್ ಹಂತ: ಇದು ದತ್ತಾಂಶ (ಡೇಟಾ) ಊರ್ಜಿತಗೊಳಿಸುವುದರ ಜತೆ ವ್ಯವಹರಿಸುವ ಯಾವುದೇ ಅಪ್ಲಿಕೇಷನ್‌ನ ಬ್ಯಾಕ್‌ಎಂಡ್ ಭಾಗವಾಗಿದೆ. ಡೆವಲಪರ್‌ಗಳು ಪಿಎಚ್‌ಪಿ, ಪೈಥಾನ್, ಜಾವಾ ಮುಂತಾದ ತಂತ್ರಜ್ಞಾನಗಳ ಬಗ್ಗೆ ಜ್ಞಾನವನ್ನು ಹೊಂದಿರಬೇಕು. ಜಾಂಗೊ, ಫ್ಲಾಸ್ಕ್ ಮತ್ತು ಇತರ ತಾಂತ್ರಿಕ ತಿಳಿವಳಿಕೆಯೂ ಹೆಚ್ಚುವರಿ ಪರಿಣತಿ ನೀಡುತ್ತದೆ.

3. ಡೇಟಾಬೇಸ್ ಹಂತ: ಇದು ಅಪ್ಲಿಕೇಷನ್‌ನ ಡೇಟಾಬೇಸ್ ನಿರ್ವಹಣಾ ಘಟಕವಾಗಿದ್ದು, ಅಪ್ಲಿಕೇಷನ್ ಡೇಟಾಗೆ ಪ್ರವೇಶ ಕಲ್ಪಿಸುತ್ತದೆ. ಡೆವಲಪರ್‌ಗಳು ಈ ಉದ್ದೇಶಕ್ಕಾಗಿ ವ್ಯಾಪಕವಾಗಿ ಬಳಸಲಾಗುವ ಎಂವೈಎಸ್‌ಕ್ಯುಎಲ್, ಮೊಂಗೊಡಿಬಿ, ಓರಾಕಲ್, ಎಸ್‌ಕ್ಯುಎಲ್‌ಸರ್ವರ್ ನಂತಹ ವಿವಿಧ ಡಿಬಿಎಂಎಸ್ ತಂತ್ರಜ್ಞಾನಗಳ ಬಗ್ಗೆ ಜ್ಞಾನ ಹೊಂದಿರಬೇಕು. ವಾರ್ನಿಷ್, ಮೆಮ್‌ಕ್ಯಾಚ್ಡ್, ರೆಡಿಸ್‌ನಂತಹ ಕ್ಯಾಷಿಂಗ್ ಕಾರ್ಯವಿಧಾನಗಳ ಹೆಚ್ಚುವರಿ ಜ್ಞಾನವು ಬೇಕಾಗುತ್ತದೆ.

ಫುಲ್ ಸ್ಟ್ಯಾಕ್ ಡೆವಲಪರ್‌ಗಳ ಪರಿಣತಿ ಹೆಚ್ಚಿಸಲು ಸಹಾಯ ಮಾಡುವ ಇತರ ತಾಂತ್ರಿಕ ಕೌಶಲಗಳು ಹೀಗಿವೆ:

l ಮೂಲ ವಿನ್ಯಾಸ ಮಾಡುವ ಸಾಮರ್ಥ್ಯ ಮತ್ತು ಸರ್ವರ್‌ಗಳನ್ನು ನಿರ್ವಹಿಸುವ ಜ್ಞಾನ ಅಗತ್ಯ.

l ಲಿನಕ್ಸ್‌ನಲ್ಲಿನ ಉತ್ತಮ ಅನುಭವವು ಸರ್ವರ್‌ಗಳನ್ನು ನಿರ್ವಹಿಸಲು ನೆರವಿಗೆ ಬರುತ್ತದೆ.

l ಇತ್ತೀಚಿನ ಕೋಡ್ ಅನ್ನು ಹೇಗೆ ಪಡೆಯುವುದು, ಕೋಡ್‌ನ ಭಾಗಗಳನ್ನು ನವೀಕರಿಸುವುದು ಹೇಗೆ ಮತ್ತು ಯಾವುದೇ ಸಮಸ್ಯೆ ಇಲ್ಲದೆ ಇತರ ಡೆವಲಪರ್‌ಗಳ ಕೋಡ್‌ನಲ್ಲಿ ಬದಲಾವಣೆಗಳನ್ನು ಮಾಡುವುದು ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳಲು ಫುಲ್ ಸ್ಟ್ಯಾಕ್ ಡೆವಲಪರ್‌ಗಳಿಗೆ ಗಿಟ್‌ನ ತಿಳಿವಳಿಕೆಯು ಸಹಾಯ ಮಾಡುತ್ತದೆ.

l ಅಂತರ್ಜಾಲ ತಾಣಗಳ ಸೇವೆಗಳ ಅಥವಾ ಎಪಿಐ ತಿಳಿವಳಿಕೆ.

l ಆರ್‌ಇಎಸ್‌ಟಿ ಮತ್ತು ಎಸ್‌ಒಎಪಿ ಸೃಷ್ಟಿಸುವ ಮತ್ತು ಅವುಗಳನ್ನು ಬಳಸುವ ಜ್ಞಾನ

l ಗುಣಮಟ್ಟದ ಯುನಿಟ್ ಪರೀಕ್ಷೆಗಳನ್ನು ಬರೆಯುವ ಸಾಮರ್ಥ್ಯ

l ದಾಖಲೆಗಳು ಮತ್ತು ಅವುಗಳನ್ನು ಸರಿಯಾದ ಪ್ರಮಾಣದಲ್ಲಿ ನಿಯೋಜಿಸಲು ಸ್ವಯಂಚಾಲಿತ ಪ್ರಕ್ರಿಯೆಗಳ ತಿಳಿವಳಿಕೆ

l ಪ್ರತಿಯೊಂದು ಹಂತವು ತನ್ನದೇ ಆದ ದೋಷಗಳನ್ನು ಹೊಂದಿರುವುದರಿಂದ ಸುರಕ್ಷತಾ ಕ್ರಮಗಳ ಕಾಳಜಿಗಳ ಅರಿವು

ಅರ್ಹತೆ: ಪಿಯುಸಿ ಉತ್ತೀರ್ಣರಾದವರು ಈ ಕೋರ್ಸ್‌ಗಳನ್ನು ಮಾಡಿಕೊಳ್ಳಬಹುದು.

ಪರಿಣತ ಫುಲ್ ಸ್ಟ್ಯಾಕ್ ಡೆವಲಪರ್‌ಗಳಿಗೆ ವಾರ್ಷಿಕ ಸಂಬಳವು ವರ್ಷಕ್ಕೆ ಸರಾಸರಿ ₹6.25 ಲಕ್ಷದಿಂದ ₹14.22 ಲಕ್ಷದವರೆಗೆ ಇರುತ್ತದೆ.

(ಲೇಖಕರು: ಮಸಾಯ್ ಸ್ಕೂಲ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT