ನಮ್ಮ ಶಾಲೆಯಲ್ಲಿರುವ ಬಹುತೇಕ ಮಕ್ಕಳು ಜಾಣ ಮಕ್ಕಳು. ಪರೀಕ್ಷಾ ಕೊಠಡಿಯಲ್ಲಿ ಗಾಬರಿಯಾಗುತ್ತಾರೆ. ಕೈ ಬೆವೆತು, ಬರೆಯಲಾಗದೆ ಕಕ್ಕಾಬಿಕ್ಕಿಯಾಗುತ್ತಾರೆ. ಕಾರಣವೇನು? ಪರಿಹಾರವೇನು?

ಹೌದು. ಇದು ಪರೀಕ್ಷಾ ಭಯ. ಪರೀಕ್ಷೆ ಬರೆಯಲು ಕುಳಿತಿರುವ ಎಲ್ಲರಲ್ಲೂ ಈ ಆತಂಕ ಇರುತ್ತದೆ. ಅದರ ಪ್ರಮಾಣ ಮಾತ್ರ ಕೆಲವರಲ್ಲಿ ಹೆಚ್ಚು, ಇನ್ನು ಹಲವರಲ್ಲಿ ಕಡಿಮೆ ಇರುತ್ತದೆ. ಕಡಿಮೆ ಇದ್ದರೆ ಅದು ಆತಂಕ. ಹೆಚ್ಚಾದಾಗ ಅದು ಭಯ. ಪರೀಕ್ಷಾಭಯದಿಂದ ಕೆಲವರಿಗೆ ಅಂಗೈ ಬೆವರುತ್ತದೆ. ಗಂಟಲು ಒಣಗುತ್ತದೆ. ವಾಂತಿಯಾಗುತ್ತದೆ. ಹೊಟ್ಟೆ ನೋಯುತ್ತದೆ. ಮೈ, ಕೈ ಕಾಲು ನಡುಗುತ್ತದೆ. ಉಸಿರಾಟದಲ್ಲಿ ಏರುಪೇರಾಗುತ್ತದೆ. ತಲೆನೋವು ಹೆಚ್ಚಾಗುತ್ತದೆ. ಎಚ್ಚರ ತಪ್ಪುತ್ತದೆ. ಕೆಲವರಿಗೆ ಪರೀಕ್ಷೆಯ ಹಿಂದಿನ ದಿನ ಜ್ವರ ಬರುತ್ತದೆ. ವಾಂತಿ, ಭೇದಿಯಾಗುತ್ತದೆ. ಹೀಗೆ ತಹರೇವಾರಿ ತೊಂದರೆಗಳಾಗುತ್ತವೆ.

ಇಂಥ ಸಮಸ್ಯೆಯಿಂದ ಬಳಲುವ ಬಹುತೇಕರಿಗೆ ಇದಕ್ಕೆ ಕಾರಣ ಗೊತ್ತಿರುವುದಿಲ್ಲ. ಪರೀಕ್ಷೆ ಬರೆಯುವ ಆತಂಕದಿಂದಾಗಲೀ, ಭಯದಿಂದಾಗಲಿ ಹೀಗಾಗುತ್ತದೆ ಎನ್ನುವುದು ಅವರಿಗಾಗಲೀ, ಅವರ ಪಾಲಕರಿಗಾಗಲೀ ಗೊತ್ತಾಗುವುದಿಲ್ಲ. ಮಕ್ಕಳು ಪರೀಕ್ಷೆಯ ಕೊಠಡಿಯಲ್ಲಿ ವಿಚಲಿತರಾಗಿ ತೊಂದರೆ ಅನುಭವಿಸುತ್ತಾರೆ. ಪರೀಕ್ಷೆಯ ದಿನವೇ ಅವರು ಋಣಾತ್ಮಕವಾದ ಫಲಿತಾಂಶವನ್ನು ಪಡೆದುಕೊಳ್ಳುತ್ತಾರೆ.

ಪರೀಕ್ಷಾ ಭಯಕ್ಕೆ ಹಲವು ಕಾರಣಗಳಿವೆ. ಸರಿಯಾಗಿ ಓದಿಕೊಳ್ಳದೇ ಇರುವುದು, ಶಿಸ್ತಿನಿಂದ ತಯಾರಿಯನ್ನು ಮಾಡದೇ ಇರುವುದು ಮುಖ್ಯ ಕಾರಣ. ಹಿಂದಿನ ಪರೀಕ್ಷೆಯ ಫಲಿತಾಂಶವೂ ಪ್ರಭಾವ ಬೀರಬಲ್ಲದು. ಯಾವುದೋ ವಿಷಯವನ್ನು ತಯಾರಿ ಮಾಡಿಕೊಂಡು ಬಂದು, ಬೇರೆ ಯಾವುದೋ ವಿಷಯದ ಪಶ್ನೆ ಪತ್ರಿಕೆಯನ್ನು ಎದುರಿಸುವುದು ಮಗದೊಂದು ಕಾರಣ.

‘ನನಗೆ ತಿಳಿಯೋದಿಲ್ಲ, ನನಗೆ ನೆನಪಿರೋದಿಲ್ಲ, ನಾನು ಚೆನ್ನಾಗಿಯೇ ಓದಿದ್ದೇನೆ. ಆದರೆ, ಪರೀಕ್ಷಾ ಕೊಠಡಿಯಲ್ಲಿ ನನಗೆ ಎಲ್ಲವೂ ಮರೆತುಹೋಗುತ್ತದೆ, ನಾನು ಜಾಣನಲ್ಲ, ನನಗೆ ನೆನಪಿನ ಶಕ್ತಿ ಇಲ್ಲ, ನನ್ನ ಗ್ರಹಗತಿ ಚೆನ್ನಾಗಿಲ್ಲ, ನಾನು ಪಾಸಾಗುವುದಿಲ್ಲ, ನನಗೆ ಮಾಟವಾಗಿದೆ, ನನಗೆ ಶಾಪವನ್ನು ಹಾಕಿದ್ದಾರೆ..…’ ಹೀಗೆಯೇ ಅವರು ತಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಅಂಶಗಳನ್ನು ಹೇಳಿಕೊಂಡಿರುತ್ತಾರೆ. ಅವರ ಸುಪ್ತ ಮನಸ್ಸು ಹಾಗೆಯೇ ಪ್ರೋಗ್ರಾಮ್ ಆಗಿರುತ್ತದೆ. ಇವೇ ನೂರೆಂಟು ಕಾರಣಗಳನ್ನು ಪಟ್ಟಿ ಮಾಡಬಹುದು.

ಕೆಲವರಿಗೆ ಕೆಲವು ವಿಷಯಗಳ ಉಪನ್ಯಾಸಕರು ಇಷ್ಟ ಇರುವುದಿಲ್ಲ. ಇನ್ನು ಕೆಲವರಿಗೆ ಮನೆಯಲ್ಲಿ ಪಾಲಕರಿಂದ ಮಾನಸಿಕವಾಗಿ ಗಾಸಿಯಾಗಿರುತ್ತದೆ. ಇಂಥ ಕಾರಣಗಳಿಂದಲೂ ಪರೀಕ್ಷಾ ಕೋಣೆಯಲ್ಲಿ ವಿದ್ಯಾರ್ಥಿಗಳು ಭಯಭೀತರಾಗುತ್ತಾರೆ. ಇಂಥ ಕೆಲವರಿಗೆ ಪರೀಕ್ಷೆ ಮುಗಿದ ಕೂಡಲೇ ಎಲ್ಲವೂ ಸರಿಯಾಗಿಬಿಡುತ್ತದೆ.

ನಿಮಗೆ ಸೋಜಿಗ ಎನ್ನಿಸಬಹುದು, ಕೆಲವು ವಿದ್ಯಾರ್ಥಿಗಳು ಬೇಕೂಂತಲೇ ಆತಂಕವನ್ನು ಹೆಚ್ಚಿಸಿಕೊಳ್ಳುತ್ತಾರೆ. ಸರಿಯಾದ ಉತ್ತರಗಳನ್ನು ಬರೆಯದೇ ಹೊರಗೆ ಬರುತ್ತಾರೆ. ಅವರು ನಪಾಸಾಗಬೇಕೂಂತಲೇ ಹೀಗೆ ಮಾಡುತ್ತಾರೆ! ಅವರ ಒಳಮನಸ್ಸಿನ ಯಾವುದೋ ಆಸೆ ಈಡೇರಿದ ಖುುಷಿಯನ್ನು ಅನುಭವಿಸುತ್ತಾರೆ. ತಾನು ನಪಾಸಾಗುವ ಮೂಲಕ, ಯಾರನ್ನೋ ಸೋಲಿಸಿದಂತೆ ಬೀಗುತ್ತಾರೆ.

ಮೊದಲಿನಿಂದಲೂ ಪ್ರತಿದಿನವೂ ಇಂತಿಷ್ಟು ಹೊತ್ತಿನಂತೆ, ಶಿಸ್ತಿನಿಂದ ಅಭ್ಯಾಸವನ್ನು ಮಾಡುವುದು. ತಿಳಿಯದ ವಿಷಯವನ್ನು ಸಂಬಂಧಿಸಿದ ಶಿಕ್ಷಕರನ್ನು ಕೇಳಿ ತಿಳಿದುಕೊಳ್ಳುವುದು. ಓದುವವರ ಗೆಳೆತನವನ್ನು ಮಾಡುವುದು. ಅಂದಿನ ಕೆಲಸವನ್ನು ಅಂದೇ ಮಾಡುವುದು. ಹದಿಹರೆಯದ ಮಾನಸಿಕ ಏರುಪೇರಿಗಾಗಲೀ, ಕಾಡುವ ಒಂದಿಷ್ಟು ಪ್ರಶ್ನೆಗಳಿಗೆ ಉತ್ತರವನ್ನು ಪಾಲಕರಲ್ಲಾಗಲೀ, ಶಿಕ್ಷಕರಲ್ಲಾಗಲೀ ಕೇಳಿಕೊಳ್ಳುವುದು. ಮನಸ್ಸು ಗಾಬರಿಯಾದರೆ, ಆತಂಕಗೊಂಡರೆ, ಶಾಲೆಯಲ್ಲಾಗಲೀ, ತರಗತಿಯಲ್ಲಾಗಲೀ, ಹೊರಗೆ ಎಲ್ಲಿಯಾದರೂ ಅವಮಾನವಾದರೆ ಅದರ ಬಗ್ಗೆ ಪಾಲಕರಿಗೆ ತಿಳಿಸುವುದು. ಸ್ಕ್ರೀನ್ ಟೈಮನ್ನು ಸಾಧ್ಯವಾದಷ್ಟೂ ಕಡಿಮೆ ಮಾಡುವುದು.

ವಿದ್ಯಾರ್ಥಿಗಳಲ್ಲಿನ ಪರೀಕ್ಷಾಭಯ ಮುಂದೆ ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕೊಂಡು ತೊಂದರೆ ಉಂಟುಮಾಡಬಲ್ಲದು. ಎಳವೆಯಲ್ಲಿಯೇ ಗುಣಪಡಿಸಿಕೊಳ್ಳುವುದ ಸೂಕ್ತ.

ಲೇಖಕರು: ಡಾ. ಡಿ. ಎಂ. ಹೆಗಡೆ, ಸಮಾಲೋಚಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.