ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Exam 2023: ಪರೀಕ್ಷೆ ದಿಕ್ಸೂಚಿ - ಸಮಾಜ ವಿಜ್ಞಾನ

Last Updated 12 ಮಾರ್ಚ್ 2023, 21:45 IST
ಅಕ್ಷರ ಗಾತ್ರ

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ:

1) ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊಟ್ಟಮೊದಲ ಯುರೋಪಿಯನ್ನರು ಪೋರ್ಚುಗೀಸರಾದರೆ ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು ಯಾರು?
ಉತ್ತರ:- ಪೋರ್ಚುಗೀಸರು

2) ಪೋರ್ಚುಗೀಸರ ಮೊಟ್ಟಮೊದಲ ವೈಸರಾಯ್ ಆಗಿ ಯಾರು ಭಾರತಕ್ಕೆ ಬಂದನು.?
ಉತ್ತರ:- ಫ್ರಾನ್ಸಿಸ್ಕೊ ಡಿ ಆಲ್ಮೇಡ

3) ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳಾವುವು?
ಉತ್ತರ: ಭಾರತ ಸರ್ಕಾರವು ತ್ವರಿತಗತಿಯಲ್ಲಿ ಏರುತ್ತಿರುವ ಜನಸಂಖ್ಯೆಯನ್ನು ತಡೆಗಟ್ಟಲು ಹಲವಾರು ಕ್ರಮಗಳನ್ನು ರೂಪಿಸಿ ಕಾರ್ಯಗತಗೊಳಿಸಿದೆ, ಅವುಗಳಲ್ಲಿ ಕುಟುಂಬ ಯೋಜನೆ, ಮಹಿಳಾ ಕಲ್ಯಾಣ ಯೋಜನೆ, ಶಿಶು ಮರಣ ತಡೆಗಟ್ಟುವುದು, ಕ್ಷೇತ್ರ ಯೋಜನೆಗಳು, ಪ್ರಚಾರ ಜಾಹೀರಾತು, ಕುಟುಂಬ ಯೋಜನಾ ಶಿಬಿರಗಳು, ಗ್ರಾಮೀಣ ಪ್ರದೇಶಗಳಲ್ಲಿ ಅತಿಹೆಚ್ಚು ಪ್ರಚಾರವನ್ನು ಮಾಡಿ ಜನರಲ್ಲಿ ಅರಿವು ಮೂಡಿಸುವಲ್ಲಿ ಈ ಕಾರ್ಯಕ್ರಮಗಳು ಮುಂದುವರಿದಿದೆ

4) ಯೂರೋಪಿಯನ್ ರಾಷ್ಟ್ರಗಳಲ್ಲಿ ಭಾರತದ ಯಾವೆಲ್ಲಾ ವಸ್ತುಗಳಿಗೆ ಬಹಳ ಬೇಡಿಕೆಯಿತ್ತು?
ಉತ್ತರ:- ಭಾರತದ ಸಾಂಬಾರ ಪದಾರ್ಥಗಳಾದ ಮೆಣಸು, ದಾಲ್ಚಿನಿ, ಏಲಕ್ಕಿ, ಶುಂಠಿ ಮೊದಲಾದ ವಸ್ತುಗಳಿಗೆ ಯೂರೋಪಿನಲ್ಲಿ ಬಹಳ ಬೇಡಿಕೆಯಿತ್ತು.

5) ಭಾರತವು ಯಾವ ಯಾವ ಅಕ್ಷಾಂಶ ಮತ್ತು ರೇಖಾಂಶಗಳ ನಡುವೆ ಹರಡಿಕೊಂಡಿದೆ?
ಉತ್ತರ:- ಭಾರತದ ಪ್ರಧಾನ ಭೂಭಾಗವು 80. 4’ ದಿಂದ 370.6’ ಉತ್ತರ ಅಕ್ಷಾಂಶ ಹಾಗೂ 68o.7’ ರಿಂದ 97o.25’ ಪೂರ್ವ ರೇಖಾಂಶಗಳ ನಡುವೆ ವಿಸ್ತರಿಸಿದೆ.

6) ಭಾರತದ ದಕ್ಷಿಣದ ತುತ್ತತುದಿ ಯಾವುದು?
ಉತ್ತರ:- ನಿಕೋಬಾರ್ ದ್ವೀಪದಲ್ಲಿರುವ ‘ಇಂದಿರಾ ಪಾಯಿಂಟ್’

7) ಭಾರತದ ಉತ್ತರದ ತುತ್ತತುದಿ ಯಾವುದು?
ಉತ್ತರ:- ಜಮ್ಮು ಮತ್ತು ಕಾಶ್ಮೀರದ ಇಂದಿರಾಕೋಲ್ ಭಾರತದ ಅತ್ಯಂತ ಉತ್ತರ ತುದಿಯಾಗಿದೆ.

8) ಹಿಮಾಚಲ/ ಮಧ್ಯ ಹಿಮಾಲಯದ ಬಗ್ಗೆ ಬರೆಯಿರಿ.
ಉತ್ತರ:- ಹಿಮಾಚಲ(ಮಧ್ಯ ಹಿಮಾಲಯ)ವು ಮಹಾ ಹಿಮಾಲಯ ಮತ್ತು ಶಿವಾಲಿಕ್ ಬೆಟ್ಟಗಳ ನಡುವೆ ಸುಮಾರು 3600 ಮೀ. ಗಳಿಂದ 4500 ಮೀ. ಗಳಷ್ಟು ಸರಾಸರಿ ಎತ್ತರವನ್ನು ಹೊಂದಿವೆ. ಇವು 60 ರಿಂದ 80 ಕಿ.ಮೀ ಅಗಲವಾಗಿವೆ. ಇಲ್ಲಿ ಅನೇಕ ಸಮಾನಾಂತರ ಪರ್ವತ ಶ್ರೇಣಿಗಳಿವೆ. ಉದಾಹರಣೆಗೆ ಪೀರ್‌ಪಂಜಾಲ, ಮಹಾಭಾರತ ಶ್ರೇಣಿ, ನಾಗತಿಬ್ಬ, ಮಸ್ಸೋರಿ ಇತ್ಯಾದಿ. ಕಂಗ್ರಾ, ಕುಲು ಇವು ಪ್ರಸಿದ್ಧ ಕಣಿವೆಗಳಾಗಿವೆ. ಶಿಮ್ಲಾ, ಮಸ್ಸೂರಿ, ನೈನಿತಾಲ್, ರಾಣಿಖೇಟ್, ಚಕ್ರಾತ ಮತ್ತು ಡಾರ್ಜಿಲಿಂಗ್ ಮೊದಲಾದ ಗಿರಿಧಾಮಗಳಿವೆ.

9) ಭಾರತದ ಭೂಸ್ವರೂಪಗಳಲ್ಲಿ ಅತಿಪುರಾತನವಾದದ್ದು ಯಾವುದು?
ಉತ್ತರ:- ಪರ್ಯಾಯ ಪ್ರಸ್ಥಭೂಮಿ

10) ಯಾವುದನ್ನು ಭಂಗರ್ ಮಣ್ಣು ಎಂದು ಕರೆಯುವರು?
ಉತ್ತರ:- ಪುರಾತನ ಕಾಲದಲ್ಲಿ ಸಂಚಯಿತವಾಗಿರುವ ಮೆಕ್ಕಲು ಮಣ್ಣಿನ ವಲಯವನ್ನು ಭಂಗರ್ ಎಂದು ಕರೆಯುವರು.

11) ಭಾರತದಲ್ಲಿರುವ ಲಗೂನ್ ಅಥವಾ ಉಪ್ಪು ನೀರಿನ ಸರೋವರಗಳು ಯಾವುವು?
ಉತ್ತರ:- ಒಡಿಸ್ಸಾದ ಚಿಲ್ಕಾ, ತಮಿಳುನಾಡಿನ ‘ಪುಲಿಕಾಟ್’ ಸರೋವರಗಳು

12) ಭಾರತದಲ್ಲಿ ಅತಿಹೆಚ್ಚು ಮಳೆ ಬಿಳುವ ಪ್ರದೇಶಗಳನ್ನು ತಿಳಿಸಿ.

ಉತ್ತರ:- ಪಶ್ಚಿಮ ಘಟ್ಟ ಪ್ರದೇಶಗಳಾದ ಕರಾವಳಿ ಕರ್ನಾಟಕ, ಮಹಾರಾಷ್ಟ್ರ, ಕೇರಳ ಹಾಗೂ ಈಶಾನ್ಯ ಭಾರತದ ಪ್ರದೇಶದಲ್ಲಿ ಬರುವ ಆಸ್ಸಾಂ, ಮೇಘಾಲಯ

13) ಭಾರತದಲ್ಲಿ ಕಂಡುಬರುವ ಮಣ್ಣನ್ನು ಎಷ್ಟು ವಿಧಗಳಗಿ ವಿಂಗಡಿಸಲಾಗಿದೆ, ಅವು ಯಾವುವು?
ಉತ್ತರ:- ಭಾರತದಲ್ಲಿ ಕಂಡು ಬರುವ ಮಣ್ಣನ್ನು ಆರು ಪ್ರಮುಖ ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ (1) ಮೆಕ್ಕಲು ಮಣ್ಣು (2) ಕಪ್ಪು ಮಣ್ಣು (3) ಕೆಂಪು ಮಣ್ಣು (4) ಜಂಬಿಟ್ಟಿಗೆ ಮಣ್ಣು (5) ಮರುಭೂಮಿ ಮಣ್ಣು ಮತ್ತು (6) ಪರ್ವತ ಮಣ್ಣು

14). ಹೈದರಾಬಾದ್ ಭಾರತದ ಒಕ್ಕೂಟದಲ್ಲಿ ವಿಲೀನವಾದ ಬಗೆ ಹೇಗೆ?
ಉತ್ತರ: ಹೈದರಾಬಾದ್ ಸಂಸ್ಥಾನವು ನಿಜಾಮನ ಅಧೀನದಲ್ಲಿತ್ತು. ಆತನು ಸ್ವತಂತ್ರವಾಗಿ ಉಳಿಯುವ ಉದ್ದೇಶದಿಂದ ಭಾರತಕ್ಕೆ ಸೇರಲು ನಿರಾಕರಿಸಿದನು. ಇದೇ ಸಂದರ್ಭದಲ್ಲಿ ಕಮ್ಯುನಿಸ್ಟರ ನೇತೃತ್ವದಲ್ಲಿ ತೆಲಂಗಾಣ ರೈತರ ಸಶಸ್ತç ಹೋರಾಟವು ನಿಜಾಮ ಮತ್ತು ಜಮೀನ್ದಾರರ ವಿರುದ್ಧ ನಡೆಯುತ್ತಿತ್ತು. ನಿಜಾಮನ ಕ್ರೂರ ಪಡೆಯಾದ ರಜಾಕಾರರ ವಿರುದ್ಧ ಜನತೆಯಲ್ಲಿ ವ್ಯಾಪಕ ಪ್ರತಿರೋಧವಿತ್ತು. ಆಗ ಭಾರತ ಸರ್ಕಾರ ಸೈನ್ಯವನ್ನು ಕಳುಹಿಸಿ ನಿಜಾಮನನ್ನು ಸೋಲಿಸಿ ಹೈದರಾಬಾದ್ ಸಂಸ್ಥಾನವನ್ನು 1948ರಲ್ಲಿ ಭಾರತದೊಂದಿಗೆ ವಿಲೀನಗಿಳಿಸಿಕೊಳ್ಳಲಾಯಿತು.

15). ಅಪ್ಪಿಕೋ ಚಳವಳಿಯ ಉದ್ದೇಶಗಳೇನು?
ಉತ್ತರ: ಮರಗಳ ಕಳ್ಳ ಸಾಗಾಣಿಕೆ ತಪ್ಪಿಸುವುದು, ಗಿಡಮರಗಳನ್ನು ಬೆಳೆಸುವುದು ಹಾಗೂ ಪರಿಸರ ಮಹತ್ವದ ಬಗ್ಗೆ ಸಾಮಾನ್ಯ ಜನರಿಗೆ ಅರಿವು ಮೂಡಿಸುವುದು ಅಪ್ಪಿಕೋ ಚಳವಳಿಯ ಉದ್ದೇಶ.

16). ಪರ್ಯಾಯ ಪ್ರಸ್ಥಭೂಮಿಯು ಆರ್ಥಿಕವಾಗಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ, ಏಕೆ?
ಉತ್ತರ: ಪರ್ಯಾಯ ಪ್ರಸ್ಥಭೂಮಿಯು ಆರ್ಥಿಕವಾಗಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದೆ ಏಕೆಂದರೆ ಇಲ್ಲಿ ಅಪಾರವಾದ ಖನಿಜ ಸಂಪನ್ಮೂಲಗಳಿವೆ. ಇಲ್ಲಿನ ನದಿಗಳು ಜಲಪಾತಗಳಿಂದ ಕೂಡಿರುವುದರಿಂದ ಜಲ ವಿದ್ಯುಚ್ಛಕ್ತಿಯ ಉತ್ಪಾದನೆಗೆ ಅನುಕೂಲವಾಗಿವೆ.

17) ಅರಣ್ಯಗಳ ಸಂರಕ್ಷಣೆಯ ವಿಧಾನಗಳನ್ನು ತಿಳಿಸಿ.
ಉತ್ತರ: ಅರಣ್ಯ ಸಂರಕ್ಷಣಾ ವಿಧಾನಗಳು: (1) ಕಾಡ್ಗಿಚ್ಚು ಉಂಟುಮಾಡುವ ಘರ್ಷಿತ ಮರಗಳನ್ನು ತೆಗೆಯುವುದು. (2) ಅರಣ್ಯದ ಮರಗಳಿಗೆ ತಗಲುವ ರೋಗಗಳನ್ನು ನಿಯಂತ್ರಿಸುವುದು. (3) ಅರಣ್ಯಗಳಲ್ಲಿ ಸಾಕು ಪ್ರಾಣಿಗಳ ಮೇಯಿಸುವಿಕೆಯನ್ನು ನಿಯಂತ್ರಿಸುವುದು (4)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT