ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC ವಿದ್ಯಾರ್ಹತೆ: KSRTCಯಲ್ಲಿ 3745 ಡ್ರೈವರ್, ಕಂಡಕ್ಟರ್‌ ಹುದ್ದೆಗಳಿಗೆ ಅರ್ಜಿ

Last Updated 19 ಫೆಬ್ರುವರಿ 2020, 9:35 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ದರ್ಜೆ-3ರ ಮೇಲ್ವಿಚಾರಕೇತರ ವೃಂದದ ಚಾಲಕ ಮತ್ತು ಚಾಲಕ-ಕಂ-ನಿರ್ವಾಹಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪದವೃಂದ ಮತ್ತು ನೇಮಕಾತಿ ನಿಯಮಾವಳಿ 1982 ಮತ್ತು ತದನಂತರದ ತಿದ್ದುಪಡಿ ಆದೇಶಗಳ ಅನುಸಾರ ನೇರ ನೇಮಕಾತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ದಿನಾಂಕ 24-02-2020 ರಿಂದ ಸಲ್ಲಿಸಬಹುದು. 20-03-2020 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಅಭ್ಯರ್ಥಿಗಳು ಸಲ್ಲಿಸುವ ಎಲ್ಲಾ ದಾಖಲೆಗಳು/ಪ್ರಮಾಣಪತ್ರಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪಡೆದುಕೊಂಡಿರಬೇಕು ಮತ್ತುದಾಖಲಾತಿ ಪರಿಶೀಲನಾ ಸಮಯದಲ್ಲಿ ಕಡ್ಡಾಯವಾಗಿ ಹಾಜರುಪಡಿಸಬೇಕು.

ಹುದ್ದೆಗಳ ವಿವರ

*ಚಾಲಕ (ಡ್ರೈವರ್): 1200 ಹುದ್ದೆಗಳು

ಮೀಸಲಾತಿ: ಸಾಮಾನ್ಯ ವರ್ಗ–600, ಪ.ಜಾತಿ–183, ಪ.ಪಂಗಡ–36 ಪ್ರವರ್ಗ(1)–53, ಹಿಂದುಳಿದ ವರ್ಗ (ಒಬಿಸಿ)–329

*ಚಾಲಕ–ಕಂ– ನಿರ್ವಾಹ (ಕಂಡಕ್ಟರ್‌): 2545 ಹುದ್ದೆಗಳು

ಮೀಸಲಾತಿ: ಸಾಮಾನ್ಯ ವರ್ಗ–1274, ಪ.ಜಾತಿ–383, ಪ.ಪಂಗಡ–77 ಪ್ರವರ್ಗ(1)–102, ಹಿಂದುಳಿದ ವರ್ಗ (ಒಬಿಸಿ)–709

ವಿದ್ಯಾರ್ಹತೆ
1) ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಎಸ್.ಎಸ್.ಎಲ್.ಸಿ.ಗೆ ತತ್ಸಮಾನ ಎಂದು ಅಂಕಪಟ್ಟಿಯಲ್ಲಿ ನಮೂದಿಸಿರುವುದನ್ನು ಮಾತ್ರ ಪರಿಗಣಿಸಲಾಗುವುದು. (ಮುಕ್ತ ವಿಶ್ವವಿದ್ಯಾಲಯದಿಂದ ವಿತರಿಸಿರುವ ಹಾಗೂ ಗರಿಷ್ಠ 500 ಅಂಕಗಳ ಎಸ್.ಎಸ್.ಸಿ. ವಿದ್ಯಾರ್ಹತೆಯ ಅಂಕಪಟ್ಟಿಯನ್ನು ಪರಿಗಣಿಸಲಾಗುವುದಿಲ್ಲ.)

2)ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರುವ ಪ್ರಯಾಣಿಕರ/ಸರಕು ಸಾಗಾಣಿಕೆ ಭಾರೀ ವಾಹನ ಚಾಲನಾ ಪರವಾನಿಗೆ ಹೊಂದಿ 2 ವರ್ಷ ಪೂರ್ಣಗೊಂಡಿರಬೇಕು. ಜೊತೆಗೆ, ಕರ್ನಾಟಕ ಬ್ಯಾಡ್ಜ್ ಹೊಂದಿರಬೇಕು.

ದೇಹದಾಢ್ರ್ಯತೆ: ಅಭ್ಯರ್ಥಿಗಳು ಕನಿಷ್ಠ ಈ ಕೆಳಕಂಡ ದೇಹದಾಢ್ರ್ಯತೆ ಹೊಂದಿರಬೇಕು.
1) ಪುರುಷರು:ಎತ್ತರ–163 ಸೆ.ಮೀ, ತೂಕ–55 ಕೆಜಿ
2) ಮಹಿಳೆಯರು:ಎತ್ತರ–153 ಸೆ.ಮೀ, ತೂಕ–50 ಕೆಜಿ

ವಯೋಮಿತಿ:ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಈ ಕೆಳಕಂಡಂತೆವಯೋಮಿತಿ ಹೊಂದಿರತಕ್ಕದ್ದು.

1) ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 24 ವರ್ಷ, ಗರಿಷ್ಠ 35 ವರ್ಷ
2) ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ ಕನಿಷ್ಠ 24 ವರ್ಷ, ಗರಿಷ್ಠ 38 ವರ್ಷ
3) ಪ.ಜಾ/ಪ.ಪಂ/ಪ್ರವರ್ಗ-1 ಅಭ್ಯರ್ಥಿಗಳಿಗೆ ಕನಿಷ್ಠ 24 ವರ್ಷ, ಗರಿಷ್ಠ 40 ವರ್ಷ

ತರಬೇತಿ ಭತ್ಯೆ ಹಾಗೂ ವೇತನ ಶ್ರೇಣಿ:ಸಂಸ್ಥೆಯು ಪ್ರಕಟಿಸುವ ಅಂತಿಮ ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದು ಆಯ್ಕೆಗೊಂಡಅಭ್ಯರ್ಥಿಗಳನ್ನು ಎರಡು ವರ್ಷಗಳ ಕಾಲ ಕೆಲಸದ ಮೇಲಿನ ತರಬೇತಿಗೆನಿಯೋಜಿಸಲಾಗುವುದು. ತರಬೇತಿ ಅವಧಿಯಲ್ಲಿ ಚಾಲಕರಿಗೆ ರೂ 10,000/- ರಂತೆ ಹಾಗೂ ಚಾಲಕ-ಕಂ-ನಿರ್ವಾಹಕರಿಗೆ ರೂ. 9,100/- ರಂತೆ ಮಾಸಿಕ ತರಬೇತಿ ಭತ್ಯೆಯನ್ನು ನೀಡಲಾಗುವುದು.

ಎರಡು ವರ್ಷಗಳ ಕೆಲಸದ ಮೇಲಿನ ತರಬೇತಿ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದ ಚಾಲಕಮತ್ತು ಚಾಲಕ-ಕಂ-ನಿರ್ವಾಹಕರನ್ನು ನಿಯಮಾನುಸಾರ ಎರಡು ವರ್ಷಗಳ ಅವಧಿಗೆ ಖಾಯಂ ಪೂರ್ವ ಪರೀಕ್ಷಾರ್ಥ ಸೇವೆಯಲ್ಲಿ ನಿಯೋಜಿಸಲಾಗುವುದು. ಖಾಯಂ ಪೂರ್ವ ಪರೀಕ್ಷಾರ್ಥಸೇವಾವಧಿಯಲ್ಲಿ ವೇತನ ಶ್ರೇಣಿ ರೂ. 12400-19550 ರಂತೆ ವೇತನ ಹಾಗೂ ಇತರೆ ಭತ್ಯೆಗಳಿಗೆ ಅರ್ಹರಿರುತ್ತಾರೆ.

ಅರ್ಜಿ ಶುಲ್ಕ:ಸಾಮಾನ್ಯ/ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ₹ 500 ಹಾಗೂಪ.ಜಾತಿ, ಪ.ಪಂಗಡ. ಪ್ರವರ್ಗ-1, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹ 250 ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.

ಅರ್ಜಿಸಲ್ಲಿಸುವ ವಿಧಾನ
1) ಅರ್ಜಿಯನ್ನು ಕಡ್ಡಾಯವಾಗಿ ಆನ್‍ಲೈನ್ ಮುಖಾಂತರವೇ ಕ.ರ.ಸಾ ಸಂಸ್ಥೆಯ ವೆಬ್‍ಸೈಟ್ಮೂಲಕವೇ ಸಲ್ಲಿಸಬೇಕು.
2) ನಿಗದಿತ ಅವಧಿಯ ನಂತರ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
3) ಸಲ್ಲಿಸಿದ ಅರ್ಜಿಯನ್ನು ಯಾವುದೇ ಕಾರಣದಿಂದಲೂ ಆನ್‍ಲೈನ್‍ನಲ್ಲಿ ತಿದ್ದುಪಡಿ ಮಾಡಲು
ಅವಕಾಶವಿರುವುದಿಲ್ಲ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:20-03-2020

ವೆಬ್‌ಸೈಟ್‌:https://ksrtc.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT