ಗುರುವಾರ , ಏಪ್ರಿಲ್ 2, 2020
19 °C

ಗಣಿತದ ಬಗ್ಗೆ ಭಯ ಸಲ್ಲದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

 ವಿದ್ಯಾರ್ಥಿಗಳು ಗಣಿತ ವಿಷಯದ ಬಗ್ಗೆ ಬಹಳ ಭಯಪಡುವ ಅಗತ್ಯವಿಲ್ಲ. ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಈ ಕೆಳಗೆ ನೀಡಿರುವ ಟಿಪ್ಸ್‌ಗಳನ್ನು ಪಾಲಿಸಿ.

* ಸಮರೂಪ ತ್ರಿಭುಜಗಳ ಮೇಲೆ ನಾಲ್ಕು ಪ್ರಮೇಯಗಳಿವೆ. ಅವುಗಳಲ್ಲಿ ಒಂದಂತೂ ಬರುತ್ತದೆ. ಅದರಲ್ಲಿ ಮುಖ್ಯವಾಗಿ ತೇಲ್ಸನ ಪ್ರಮೇಯ, ಕೋನ ಕೋನ ನಿರ್ಧಾರಕ ಗುಣ ಪ್ರಮೇಯ, ತ್ರಿಭುಜಗಳ ವಿಸ್ತೀರ್ಣದ ಮೇಲೆ ಪ್ರಮೇಯ ಹಾಗೂ ಪೈಥಾವರ್ಸನ ಪ್ರಮೇಯ. ಈ ನಾಲ್ಕಕ್ಕೆ ಸಿದ್ಧವಾಗಿರಬೇಕು.

* ವೃತ್ತಗಳ ಮೇಲೆ 2 ಪ್ರಮೇಯಗಳಿವೆ. 2ನೇ ಪ್ರಮೇಯ (ವೃತ್ತಕ್ಕೆ ಬಾಹ್ಯ ಬಿಂದುವಿನಿಂದ ಎರಡು ಸ್ಪರ್ಶಕಗಳು ಸಮನಾಗಿರುತ್ತವೆ). ಇದು ಪರೀಕ್ಷೆಯಲ್ಲಿ ಬರುವ ಸಾಧ್ಯತೆ ಇದೆ.

* 12 ಅಂಕಗಳಿಗೆ ರಚನೆಗಳು ಬರುತ್ತವೆ. 4 ಅಂಕದ್ದು 1, 3 ಅಂಕದ್ದು 2 ಹಾಗೂ 2 ಅಂಕದ ಒಂದು ಪ್ರಶ್ನೆಗಳು ಬರುತ್ತವೆ. ಈ ರಚನೆಗಳ ಬಗ್ಗೆ ತಿಳಿದುಕೊಂಡಿರಬೇಕು.

* ಸಂಖ್ಯಾಶಾಸ್ತ್ರಕ್ಕೆ ಸಂಬಂಧಿಸಿದಂತೆ ಸರಾಸರಿ, ಮಧ್ಯಾಂಕ, ಬೌಲಕ ಅಥವಾ ರೂಢಿಬೆಲೆ – ಇವುಗಳಿಗೆ ಸೂತ್ರಗಳಿವೆ. ಅವುಗಳನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೊಂಡರೆ ಸಮಸ್ಯೆ ಬಿಡಿಸಬಹುದು.

* ವರ್ಗ ಸಮೀಕರಣ ವಿಭಾಗದಲ್ಲಿ ‘ಸೂತ್ರದ ಸಹಾಯದಿಂದ ಸಮೀಕರಣವನ್ನು ಬಿಡಿಸಿ’ ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಬರುತ್ತದೆ. ಅದಕ್ಕೆ ಸಿದ್ಧವಾಗಬೇಕು.

* ವಾಸ್ತವ ಸಂಖ್ಯೆ (ರಿಯಲ್‌ ನಂಬರ್ಸ್‌)ಯಲ್ಲಿ ರೂಟ್ 2, 3, 5 ಅಥವಾ 7 ಇದರಲ್ಲಿ ಯಾವುದಾದರೂ ಒಂದು ಬರುತ್ತದೆ. ಇತ್ತ ಗಮನಹರಿಸಬೇಕು.

* ನಿರ್ದೇಶಾಂಕ ರೇಖಾಗಣಿತ ಪಾಠದಲ್ಲಿ 4 ಸೂತ್ರಗಳು ಬರುತ್ತವೆ. ದೂರದ ಸೂತ್ರ, ಭಾಗಪ್ರಮಾಣದ ಸೂತ್ರ, ಮಧ್ಯ ಬಿಂದುವಿನ ಸೂತ್ರ ಹಾಗೂ ತ್ರಿಭುಜದ ವಿಸ್ತೀರ್ಣದ ಸೂತ್ರಗಳು ಇವಾಗಿವೆ. ಇವುಗಳನ್ನು ಚೆನ್ನಾಗಿ ನೆನಪಿಟ್ಟುಕೊಂಡರೆ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಬಹುದು. ಅದರಿಂದ 5 ಅಂಕಗಳನ್ನು ಪಡೆಯಬಹುದು.

* ಈ ಮೇಲಿನ ಪಾಠಗಳು ಗೊತ್ತಿದ್ದರೆ ಸರಾಸರಿ 32 ಅಂಕಗಳು ಬರುತ್ತವೆ. ಮಲ್ಟಿಪಲ್‌ ಚಾಯ್ಸ್ ಹಾಗೂ ಡೈರಕ್ಟ್‌ ಪ್ರಶ್ನೆಗಳ ವಿಭಾಗದಲ್ಲಿ 8ರಿಂದ 10 ಅಂಕ ಪಡೆದರೆ 40 ಅಂಕಗಳನ್ನು ಗಳಿಸಬಹುದಾಗಿದೆ.

* ಪ್ರಶ್ನೆಪತ್ರಿಕೆ ದೊರೆತಾಗ ಮೊದಲಿಗೆ ರಚನೆಗಳಿಗೆ ಆದ್ಯತೆ ನೀಡಬೇಕು. ನಂತರ ಪ್ರಮೇಯಗಳನ್ನು ಸಾಧಿಸಬೇಕು. ಬಳಿಕ ಉಳಿದವುಗಳನ್ನು ಬಿಡಿಸಬೇಕು.

* ಗಣಿತ ಪರೀಕ್ಷೆಗೆ ಈ ಬಾರಿ ಮೂರು ದಿನಗಳು ಗ್ಯಾಪ್‌ ಇರುತ್ತದೆ. ಆಗ ಹೆಚ್ಚಿನ ಗಮನಹರಿಸಿದರೆ, ಹೆಚ್ಚಿನ ಸ್ಕೋರ್ ಮಾಡಬಹುದಾಗಿದೆ.

– ಎಸ್.ಎಂ. ಬಡ್ಡೂರ, ಗಣಿತ ವಿಷಯ ಸಂಪನ್ಮೂಲ ವ್ಯಕ್ತಿ ಹಾಗೂ ಮುಖ್ಯಶಿಕ್ಷಕರು, ಕನ್ನಡ ಮಾಧ್ಯಮ ಪ್ರೌಢಶಾಲೆ, ಮಹಾಂತೇಶ ನಗರ, ಬೆಳಗಾವಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು