ಗುರುವಾರ , ಏಪ್ರಿಲ್ 2, 2020
19 °C

ಇಸ್ರೋ: ಯುವ ವಿಜ್ಞಾನಿ ಕಾರ್ಯಕ್ರಮ ನೋಂದಣಿ ದಿನಾಂಕ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಾಲಾ ಮಕ್ಕಳಲ್ಲಿ ಬಾಹ್ಯಾಕಾಶದ ಬಗ್ಗೆ ಅರಿವು ಮೂಡಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ವಿದ್ಯಾರ್ಥಿಗಳಿಂದ ಯುವ ವಿಜ್ಞಾನಿ ಕಾರ್ಯಕ್ರಮಕ್ಕೆ (ಯಂಗ್ ಸೈಂಟಿಸ್ಟ್‌) ಆನ್‌ಲೈನ್‌ ನೋಂದಣಿಯನ್ನು ಮಾರ್ಚ್‌ 5 ರವರೆಗೆ ವಿಸ್ತರಿಸಿದೆ.

ನೋಂದಣಿಗೆ ಫೆಬ್ರುವರಿ 24 ಕೊನೆಯ ದಿನ ಎಂದು ಇಸ್ರೋ ಈ ಹಿಂದೆ ಪ್ರಕಟಿಸಿತ್ತು. ಇದೀಗ ಮಾರ್ಚ್‌ 5ರವರೆಗೂ ವಿಸ್ತರಣೆ ಮಾಡಲಾಗಿದೆ. 

8ನೇ ತರತಿಯಲ್ಲಿ ಶೇ 60ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಬಹುದು. ವಿಜ್ಞಾನದಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಬಾಹ್ಯಾಕಾಶ, ಬಾಹ್ಯಾಕಾಶ ತಂತ್ರಜ್ಞಾನ, ರಾಕೇಟ್‌ ಉಡಾವಣೆ, ಕೃತಕ ಉಪಗ್ರಹಗಳ ಕೆಲಸ, ಸ್ಪೇಸ್ ಅಪ್ಲಿಕೇಶನ್‌ ಕುರಿತು ಅಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲಾಗುವುದು.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯಲ್ಲಿ ಎರಡು ವಾರ ಬಾಹ್ಯಾಕಾಶದ ಪ್ರಾಯೋಗಿಕ ಮಾಹಿತಿಯನ್ನು ನೀಡಲಾಗುವುದು. 

ಇಸ್ರೋದ ಈ ಕಾರ್ಯಕ್ರಮ 2020ರ ಮೇ ತಿಂಗಳಲ್ಲಿ ನಡೆಯಲಿದ್ದು ಆಸಕ್ತ ವಿದ್ಯಾರ್ಥಿಗಳು ಅಥವಾ ವಿದ್ಯಾರ್ಥಿಗಳ ಪೋಷಕರು ನೋಂದಣಿ ಮಾಡಿಕೊಳ್ಳಬಹುದು. ಆನ್‌ಲೈನ್‌ ನೋಂದಣಿ ಮಾಡಿಕೊಳ್ಳಲು ಮಾರ್ಚ್‌ 5 ಕೊನೆಯ ದಿನವಾಗಿದೆ. 

ಆಯ್ಕೆಯಾಗಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ಮಾರ್ಚ್‌ ತಿಂಗಳ ಅಂತ್ಯದಲ್ಲಿ ಪ್ರಕಟಿಸಲಾಗುವುದು. ರಾಜ್ಯದ ವಿದ್ಯಾರ್ಥಿಗಳಿಗಾಗಿ ಯುವ ವಿಜ್ಞಾನಿ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನಡೆಸಲಾಗುವುದು. 

ಮಾಹಿತಿ ಹಾಗೂ ನೋಂದಣಿ ಲಿಂಕ್‌:  https://www.isro.gov.in/update/22-jan-2020/young-scientist-programme-2020

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು