ಶುಕ್ರವಾರ, ಮೇ 20, 2022
23 °C

ಎಸ್ಸೆಸ್ಸೆಲ್ಸಿ ಪರೀಕ್ಷಾ ದಿಕ್ಸೂಚಿ: ವಾಹಕದ ರೋಧವು ಅವಲಂಬಿಸಿರುವ ಅಂಶಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೌತಶಾಸ್ತ್ರ

ಯಾವುದೇ ಏಕರೂಪದ ಲೋಹೀಯ ವಾಹಕದ ರೋಧವು ಅದರ ಉದ್ದಕ್ಕೆ (l) ನೇರಾನುಪಾತದಲ್ಲಿರುತ್ತದೆ ಮತ್ತು ಅದರ ಅಡ್ಡಕೊಯ್ತಗೆ (A) ವಿಲೋಮಾನುಪಾತದಲ್ಲಿರುತ್ತದೆ.

 ಸಮೀಕರಣ 1 ಮತ್ತು 2ನ್ನು ಸಂಯೋಜಿಸಿದಾಗ  ಅಥವಾ ಇಲ್ಲಿ p ಎಂಬುದು ಅನುಪಾತದ ಸ್ಥಿರಾಂಕವಾಗಿದ್ದು, ಇದನ್ನು ವಾಹಕದ ‘ವಿದ್ಯುತ್ ರೋಧಶೀಲತೆ’ ಎನ್ನುವರು.

 ರೋಧಕ ವ್ಯವಸ್ಥೆಯ ರೋಧ

(1) ಸರಣಿ ಕ್ರಮದಲ್ಲಿ ಜೋಡಿಸಿದ ರೋಧಕಗಳು

ಸರಣಿಯಲ್ಲಿನ ರೋಧಕಗಳ ಸರಣಿ ಸಂಯೋಜನೆಯ ವಿಭವಾಂತರವು ವೈಯುಕ್ತಿಕ ರೋಧಕಗಳ ವಿಭವಾಂತರಗಳ ಮೊತ್ತಕ್ಕೆ ಸಮನಾಗಿರುತ್ತದೆ.

ಮತ್ತು ವಿದ್ಯುತ್ ಪ್ರವಾಹ(I) ಆಗಿರುತ್ತದೆ. ಆದ್ದರಿಂದ ಸಂಪೂರ್ಣ ಮಂಡಲಕ್ಕೆ ಓಮ್‌ನ ನಿಯಮ ಅನ್ವಯಿಸಿದಾಗ

ಪ್ರತ್ಯೇಕವಾಗಿ ಮೂರು ರೋಧಕಗಳಿಗೆ ಓಮ್‌ನ ನಿಯಮವನ್ನು ಅನ್ವಯಿಸುವುದರಿಂದ ಸಮೀಕರಣ (1)ರಲ್ಲಿ ಸಮೀಕರಣ 2, 3(a), 3(b), 3(c) ಗಳನ್ನು ಹಾಕಲಾಗಿ ಅಥವಾ ಆದ್ದರಿಂದ ರೋಧಕಗಳನ್ನು ಸರಣಿಯಲ್ಲಿ ಜೋಡಿಸಿದಾಗ, ಸಂಯೋಜನೆಯ ರೋಧವು Rs ವೈಯುಕ್ತಿಕ ರೋಧಗಳಾದ R1, R2, R3ಗಳ ಮೊತ್ತಕ್ಕೆ ಸಮನಾಗಿರುತ್ತದೆ.

(2) ಸಮಾನಾಂತರವಾಗಿ ಜೋಡಿಸಿರುವ ರೋಧಕಗಳು

ಸಮಾನಾಂತರ ಸಂಯೋಜನೆಯಲ್ಲಿ ವಿದ್ಯುತ್ ಪ್ರವಾಹ ಯು ಸಂಯೋಜನೆಯ ಪ್ರತಿಯೊಂದು ವಿಭಾಗದ ಮೂಲಕ ಪ್ರತ್ಯೇಕವಾಗಿ ಪ್ರವಹಿಸುವ ವಿದ್ಯುತ್ ಪ್ರವಾಹಗಳ ಮೊತ್ತಕ್ಕೆ ಸಮನಾಗಿರುತ್ತದೆ.

ಓಮ್‌ನ ನಿಯಮವನ್ನು ಸಂಪೂರ್ಣ ಮಂಡಲಕ್ಕೆ ಅನ್ವಯಿಸಿದಾಗ ಸಮಾನಾಂತರ ಜೋಡಣೆ ಯಲ್ಲಿರುವ ರೋಧಕಗಳ ಸಮನಾದ ರೋಧ) ಓಮ್ ನ ನಿಯಮವನ್ನು ಪ್ರತಿಯೊಂದು ರೋಧಕ್ಕೂ ಅನ್ವಯಿಸಿದಾಗ, ಸಮೀಕರಣ (1) ರಲ್ಲಿ ಸಮೀಕರಣ (2), 3 (a), 3 (b), 3(c)ಗಳನ್ನು ಹಾಕಲಾಗಿ, ಅಥವಾ ಆದ್ದರಿಂದ ಸಮಾನಾಂತರವಾಗಿ ಜೋಡಿಸಲಾದ ರೋಧಕಗಳ ಸಮೂಹದ ಸಮಾನ ರೋಧದ ವ್ಯುತ್ಕ್ರಮವು ಪ್ರತಿಯೊಂದು ರೋಧಕಗಳ ರೋಧದ ವ್ಯುತ್ಕ್ರಮಗಳ ಮೊತ್ತಕ್ಕೆ ಸಮನಾಗಿರುತ್ತದೆ.

ಚಿತ್ರಕೃಪೆ: ಎನ್‌ಸಿಇಆರ್‌ಟಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು