ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ವೋಟ್ ಹಾಕಿ

ADVERTISEMENT

ಕರ್ನಾಟಕ ಚುನಾವಣೆ 2023 | ಜವಾಬ್ದಾರಿಯಿಂದ ಮತ ಚಲಾಯಿಸಿ: ಮಂಸೋರೆ

ಪ್ರಜಾತಂತ್ರ ವ್ಯವಸ್ಥೆಯಲ್ಲಿ, ತನ್ನ ಸಮಾಜದ ಒಳಿತಿಗಾಗಿ, ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸಂವಿಧಾನ ಕೊಟ್ಟಿರುವ ಅತ್ಯಂತ ಪ್ರಬಲ ಅಸ್ತ್ರ ಮತದಾನ. ಮೂಲ ಸೌಲಭ್ಯಗಳ ಆದಿಯಾಗಿ, ಸಮಾಜದ ಪ್ರತಿಯೊಂದು ಅಗತ್ಯಗಳನ್ನು ಪೂರೈಸಬೇಕಾದ, ಅದಕ್ಕೆ ಪೂರಕವಾದ ಶಾಸನಗಳನ್ನು ರೂಪಿಸಲು ‘ಮಾನವೀಯ’ ಗುಣವುಳ್ಳ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ.
Last Updated 10 ಏಪ್ರಿಲ್ 2023, 3:09 IST
ಕರ್ನಾಟಕ ಚುನಾವಣೆ 2023 | ಜವಾಬ್ದಾರಿಯಿಂದ ಮತ ಚಲಾಯಿಸಿ: ಮಂಸೋರೆ

ವೋಟ್ ಹಾಕಿ

ನಮ್ಮದು ಗಣತಂತ್ರ ವ್ಯವಸ್ಥೆ ಎನ್ನುವುದನ್ನು ನಮಗೆ ನೆನಪಿಸಲು ಬರುವ ಕ್ಷಣವೆಂದರೆ ಚುನಾವಣೆ. ಮತದಾನ ಈ ಗಣತಂತ್ರದ ನಿಜವಾದ ಆಚರಣೆ. ಚುನಾವಣಾ ಕಣದಲ್ಲಿ ಇರುವ ಅಭ್ಯರ್ಥಿಗಳಾರೂ ಯೋಗ್ಯರಲ್ಲ ಎನಿಸಿದರೆ ‘ನೋಟಾ’ ಬಳಸುವ ಅವಕಾಶವಿದೆ. ಆದರೆ ಅದರಿಂದ ಪ್ರಯೋಜನವಿಲ್ಲ ಎನ್ನುವುದು ನನ್ನ ಅಭಿಪ್ರಾಯ. – ಅಭಯಸಿಂಹ, ನಿರ್ದೇಶಕ
Last Updated 14 ಏಪ್ರಿಲ್ 2014, 19:30 IST
ವೋಟ್ ಹಾಕಿ

‘ನೋಟಾ’ ಅವಕಾಶವೂ ಇದೆ

ಯಾವುದೇ ಪಕ್ಷಕ್ಕಾದರೂ ಮತದಾನ ಮಾಡಿ. ಒಂದು ವೇಳೆ ಯಾವ ಪಕ್ಷದವರೂ ನಮಗೆ ಇಷ್ಟವಾಗದಿದ್ದರೆ ‘ನೋಟಾ’ ಅವಕಾಶವೂ ಇದೆ. ಒಟ್ಟಿನಲ್ಲಿ ನಮ್ಮ ಹಕ್ಕು ಚಲಾಯಿಸುವುದು ಮುಖ್ಯ –ಬಿ. ಆನಂದ್‌ ಕುಮಾರ್‌, ಪ್ಯಾರಾಬ್ಯಾಡ್ಮಿಂಟನ್‌ ಆಟಗಾರ
Last Updated 14 ಏಪ್ರಿಲ್ 2014, 19:30 IST
fallback

ತಪ್ಪದೆ ವೋಟ್‌ ಹಾಕಿ

ಹಳ್ಳಿಗಳಲ್ಲಿ ಜನ ಅನಕ್ಷರಸ್ಥರಾಗಿದ್ದರೂ ಅವರಿಗೆ ಮತದಾನದ ಮಹತ್ವದ ಅರಿವು ಚೆನ್ನಾಗಿದೆ. ಆದರೆ ಸವಲತ್ತುಗಳನ್ನು ಸಲೀಸಾಗಿ ಪಡೆಯುವ ವಿದ್ಯಾವಂತರಲ್ಲಿ ಜಡ್ಡುಗಟ್ಟಿದ ಮನೋಭಾವ ಇರುವುದು ದುರಂತ. ಎನ್‌ಆರ್‌ಐ ಆದ ನನಗೆ ಈ ಬಾರಿ ಮೊದಲ ಸಲ ಮತಚಲಾಯಿಸುವ ಹಕ್ಕು ಸಿಕ್ಕಿದೆ. ನೀವೂ ತಪ್ಪದೆ ವೋಟ್‌ ಹಾಕಿ. -ಐಶ್ವರ್ಯಾ ನಾಗ್‌, ನಟಿ
Last Updated 13 ಏಪ್ರಿಲ್ 2014, 19:30 IST
ತಪ್ಪದೆ ವೋಟ್‌ ಹಾಕಿ

ಉತ್ತಮ ಜನಪ್ರತಿನಿಧಿ

ಉತ್ತಮ ಜನಪ್ರತಿನಿಧಿ ಮತ್ತು ಉತ್ತಮ ಸರ್ಕಾರವನ್ನು ಆಯ್ಕೆ ಮಾಡಲು ನಮಗಿರುವ ಅವಕಾಶ ಇದೊಂದೇ. ಆದ್ದರಿಂದ ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಇರುವ ಅವಕಾಶ ಕಳೆದುಕೊಂಡು ಮುಂದೆ ಪರಿತಪಿಸುವುದು ಬೇಡ. ಜನಪ್ರತಿನಿಧಿಗಳು ನಮ್ಮ ಸಮಾಜದ ಸಂಕಷ್ಟಗಳಿಗೆ ಸ್ಪಂದಿಸಬೇಕು. ಆದ್ದರಿಂದ ನಮ್ಮ ಹಕ್ಕು ಚಲಾಯಿಸುವ ಮುಂದೆ ಸಾವಿರ ಸಲ ಯೋಚಿಸಬೇಕು. –ಅಭಿಮನ್ಯು ಮಿಥುನ್‌, ಕರ್ನಾಟಕ ಕ್ರಿಕೆಟ್‌ ತಂಡದ ಆಟಗಾರ
Last Updated 12 ಏಪ್ರಿಲ್ 2014, 19:30 IST
fallback

ದೇಶದ ಭವಿಷ್ಯ

ನಮ್ಮ ದೇಶದ ಭವಿಷ್ಯ ನಿಂತಿರುವುದು ನಾವು ಆಯ್ಕೆ ಮಾಡಿ ಕಳುಹಿಸುವ ನಾಯಕರ ಮೇಲೆ. ಆ ಆಯ್ಕೆಯಲ್ಲಿಯೇ ನಾವು ಅಸಡ್ಡೆ ತೋರಿದರೆ? ನಮಗಿರುವ ಹಕ್ಕನ್ನು ಸಮರ್ಪಕವಾಗಿ ವಿನಿಯೋಗಿಸಿದಾಗ ಮಾತ್ರ ಸಮರ್ಥ ನಾಯಕರ ಮೂಲಕ ದೇಶದ ಅಭಿವೃದ್ಧಿ ಸಾಧ್ಯ. ಕೆಲವರು ಮತದಾನವನ್ನು ನಿರ್ಲಕ್ಷಿಸುತ್ತಾರೆ. ಐದು ವರ್ಷಕ್ಕೆ ಒಮ್ಮೆ ಸಿಗುವ ಅವಕಾಶಕ್ಕೆ ಒಂದು ದಿನ ಮೀಸಲಿಡುವುದೂ ಕಷ್ಟವೇ? –ಮಿಲನಾ, ನಟಿ
Last Updated 12 ಏಪ್ರಿಲ್ 2014, 19:30 IST
ದೇಶದ ಭವಿಷ್ಯ

ಮತದಾನ ನಮ್ಮ ಹಕ್ಕು

ಮತದಾನ ನಮ್ಮ ಹಕ್ಕು, ಮತ ಹಾಕದ ವ್ಯಕ್ತಿಗೆ ಆ ಕೆಲಸ ಆಗಿಲ್ಲ, ಅಭಿವೃದ್ಧಿ ಆಗಿಲ್ಲ ಎಂದು ದೂರುವ ಹಕ್ಕೂ ಇಲ್ಲ. ಮತಹಾಕಿದರೆ ನಮಗೆ ಪ್ರಶ್ನಿಸುವ ಅಧಿಕಾರವೂ ಇರುತ್ತದೆ. ಮತ ಚಲಾಯಿಸದೆ ಗೊಣಗಾಡುವುದು ನಮ್ಮ ಈಗಿನ ಪೀಳಿಗೆಯ ಸಮಸ್ಯೆ. ಅದರ ಬದಲು ಅರ್ಹರನ್ನು ಆಯ್ಕೆ ಮಾಡಿ ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಕೆಲಸವನ್ನು ಯುವಜನತೆ ಮಾಡಬೇಕು. – ಮೇಘನಾ ಗಾಂವ್ಕರ್‌, ನಟಿ
Last Updated 10 ಏಪ್ರಿಲ್ 2014, 19:30 IST
ಮತದಾನ ನಮ್ಮ ಹಕ್ಕು
ADVERTISEMENT

ವೋಟ್ ಹಾಕಿ

ಎಲ್ಲರಿಂದಲೂ ದೇಶವನ್ನು ಮುನ್ನಡೆ­ಸಲು ಸಾಧ್ಯವಿಲ್ಲ. ದಕ್ಷ ಆಡಳಿತಗಾ­ರರನ್ನು ನಮ್ಮ ನಾಯಕರನ್ನಾಗಿ ಆರಿಸಿಕೊಳ್ಳಲು ಎಲ್ಲರೂ ಮತಹಾಕಲೇ­ಬೇಕು. ಮತದಾನವನ್ನು ಕಡ್ಡಾಯ ಮಾಡಬೇಕಾದ ಅಗತ್ಯವಿದೆ ಎನ್ನುವುದು ನನ್ನ ಅನಿಸಿಕೆ. ಸಮಾಜದ ಸುಧಾರಣೆ ಹೇಗೆ ಎನ್ನುವ ಪ್ರಶ್ನೆಗಳಿಗೆ ಮತದಾನ ಉತ್ತರ ನೀಡಬಲ್ಲದು. ಈ ಚುನಾವಣೆಯಲ್ಲಿ ನನ್ನ ಹಕ್ಕನ್ನು ಮೊದಲ ಬಾರಿಗೆ ಚಲಾಯಿಸಲಿದ್ದೇನೆ. ನೀವೂ ಮರೆಯದೆ ಮತಹಾಕಿ. – ಶ್ರಾವ್ಯ, ನಟಿ
Last Updated 9 ಏಪ್ರಿಲ್ 2014, 19:30 IST
ವೋಟ್ ಹಾಕಿ

ಮತದಾನ ಮಾಡಿ

ಸರ್ಕಾರದ ಸೌಲಭ್ಯಗಳು ಬೇಕು. ಆದರೆ, ನಮ್ಮ ಹಕ್ಕು ಚಲಾಯಿಸುವುದು ಬೇಡ ಎಂದರೆ ಹೇಗೆ? ದಯವಿಟ್ಟು ಎಲ್ಲರೂ ಮತದಾನ ಮಾಡಿ. ನಮ್ಮ ಆಶೋತ್ತರಗಳಿಗೆ ಸ್ಪಂದಿಸುವ ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ಇದೊಂದು ಅತ್ಯುತ್ತಮ ಅವಕಾಶ. ಇದನ್ನು ತಪ್ಪದೇ ಬಳಸಿಕೊಳ್ಳೋಣ. –ಕರುಣ್‌ ನಾಯರ್‌, ಕರ್ನಾಟಕ ಕ್ರಿಕೆಟ್‌ ತಂಡದ ಆಟಗಾರ
Last Updated 9 ಏಪ್ರಿಲ್ 2014, 19:30 IST
ಮತದಾನ ಮಾಡಿ

ಚುನಾಯಿತ ಪ್ರತಿನಿಧಿಗಳು

ಪ್ರಾಮಾಣಿಕ ಮತ್ತು ದಕ್ಷ ಜನಪ್ರತಿನಿಧಿಗಳನ್ನು ನಾವು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಮತದಾರನೂ ತನ್ನ ಹಕ್ಕನ್ನು ವಿವೇಚನೆಯಿಂದ ಚಲಾಯಿಸಬೇಕು. ಜನರು ತಮ್ಮ ಮೇಲೆ ನಿರೀಕ್ಷೆ ಮತ್ತು ಸದುದ್ದೇಶ­ವನ್ನಿಟ್ಟುಕೊಂಡು ಆಯ್ಕೆ ಮಾಡಿದ್ದಾರೆ ಎನ್ನುವು­ದನ್ನು ಮನಗಂಡು ಚುನಾಯಿತ ಪ್ರತಿನಿಧಿಗಳು ಪ್ರಾಮಾಣಿಕ­ವಾಗಿ ಕಾರ್ಯನಿರ್ವಹಿಸಬೇಕಾದದ್ದು ಅಗತ್ಯ. - ಪ್ರಿಯಾಂಕಾ ಉಪೇಂದ್ರ, ನಟಿ
Last Updated 8 ಏಪ್ರಿಲ್ 2014, 19:30 IST
ಚುನಾಯಿತ ಪ್ರತಿನಿಧಿಗಳು
ADVERTISEMENT