ಉದ್ಧವ್ ಠಾಕ್ರೆ ನೇತೃತ್ವದ ನಕಲಿ ಶಿವಸೇನಾ, ಶರದ್ ಪವಾರ್ ನೇತೃತ್ವದ ನಕಲಿ ಎನ್‌ಸಿಪಿ ಹಾಗೂ ಅಳಿದುಳಿದ ಕಾಂಗ್ರೆಸ್ ಪಕ್ಷವು ಮಹಾರಾಷ್ಟ್ರದಲ್ಲಿ ಜೊತೆಯಾಗಿವೆ. ಈ ಮೂರು ಪಕ್ಷಗಳು ಬಿಡಿ ಭಾಗಗಳು ಹೊಂದಾಣಿಕೆಯಾಗದ ಆಟೊ ರಿಕ್ಷಾ ಇದ್ದಂತೆ. ಇವುಗಳಿಂದ ಮಹಾರಾಷ್ಟ್ರಕ್ಕೆ ಏನಾದರೂ ಒಳ್ಳೆಯದನ್ನು ನಿರೀಕ್ಷಿಸಲು ಸಾಧ್ಯವೇ?

-ಅಮಿತ್ ಶಾ, ಕೇಂದ್ರ ಗೃಹಸಚಿವ

ನಕಲಿ ಎನ್‌ಸಿಪಿ ಮತ್ತು ನಕಲಿ ಶಿವಸೇನಾವು ಬಿಜೆಪಿಯ ಜೊತೆಗೆ ಹೊಂದಣಿಕೆ ಮಾಡಿಕೊಂಡಿವೆ. ನಮ್ಮನ್ನು ನಕಲಿಗಳೆಂದು ಕರೆಯಲು ಅಮಿತ್ ಶಾ ಯಾರು? ಬಿಜೆಪಿಯು ಮಹಾರಾಷ್ಟ್ರ ಸರ್ಕಾರದೊಳಗೆ ನಕಲಿ ನಾಯಕರನ್ನು ಸೇರಿಸಿಕೊಂಡಿದೆ. ಮುಖ್ಯಮಂತ್ರಿ ಏಕನಾಥ ಶಿಂದೆ ಬಣದ ಶಿವಸೇನಾ ಮತ್ತು ಅಜಿತ್ ಪವಾರ್ ಬಣದ ಎನ್‌ಸಿಪಿ ಕಾರ್ಯಕರ್ತರ ಬಗ್ಗೆ ಬಿಜೆಪಿಯು ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಈ ಎರಡು ಬಣಗಳ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಈ ಕುರಿತು ಚಿಂತನೆ ನಡೆಸಲಿ. ಮಹಾರಾಷ್ಟ್ರಕ್ಕೆ ಬಂದು ಶರದ್ ಪವಾರ್ ಅವರನ್ನು ಟೀಕಿಸದಿದ್ದರೆ ಮಾಧ್ಯಮಗಳಲ್ಲಿ ಸುದ್ದಿಯಾಗದು ಎಂಬುದು ಅಮಿತ್ ಶಾ ಅವರಿಗೆ ಚೆನ್ನಾಗಿ ತಿಳಿದಿದೆ.

-ಮಹೇಶ್ ತಾಪಸೆ, ಎನ್‌ಸಿಪಿ ಶರದ್ ಪವಾರ್ ಬಣದ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.