ಲಖನೌ: ‘ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರಿರುವ ನಟ ಶತ್ರುಘ್ನ ಸಿನ್ಹಾ ಈಗಲೂ ಆರ್ಎಸ್ಎಸ್ ವ್ಯಕ್ತಿಯೇ’ ಎಂದು ಕಾಂಗ್ರೆಸ್ ಪಕ್ಷದ ಲಖನೌ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಚಾರ್ಯ ಪ್ರಮೋದ್ ಕೃಷ್ಣಂ ಆರೋಪಿಸಿದ್ದಾರೆ.

ಸಿನ್ಹಾ ಹಾಗೂ ಅವರ ಪತ್ನಿ ಪೂನಂ ಸಿನ್ಹಾ ಅವರನ್ನು ಶುಕ್ರವಾರ ತೀವ್ರವಾಗಿ ಟೀಕಿಸಿದ ಕೃಷ್ಣಂ, ‘ಶತ್ರುಘ್ನ ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೂ, ಬಿಜೆಪಿಯ ರಾಜನಾಥ್ ಸಿಂಗ್ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಅವರು ಮತ್ತು ಪೂನಂ ಇನ್ನೂ ಆರ್ಎಸ್ಎಸ್ ಬಿಟ್ಟಿಲ್ಲ. ಕಾಂಗ್ರೆಸ್ ಪಕ್ಷ ಅವರ ಮೇಲೆ ವಿಶ್ವಾಸವಿಟ್ಟು ಪಟ್ನಾಸಾಹಿಬ್ ಲೋಕಸಭಾ ಕ್ಷೇತ್ರದಿಂದ ಅವರಿಗೆ ಟಿಕೆಟ್ ನೀಡಿದೆ. ಆದರೆ ಅವರ ಆತ್ಮ ಇನ್ನೂ ಬಿಜೆಪಿಯಲ್ಲಿದೆ. ಕಾಂಗ್ರೆಸ್ಗೆ ಅವರು ವಿಶ್ವಾಸ ದ್ರೋಹ ಮಾಡಿದ್ದಾರೆ. ಪತ್ನಿಯ ಪರ ಪ್ರಚಾರ ಮಾಡಲು ಹೋಗಿ ಮಾಯಾವತಿ ಹಾಗೂ ಅಖಿಲೇಶ್ ಯಾದವ್ ಅವರನ್ನು ಹೊಗಳಿದ್ದಾರೆ. ಅವರು ಕಾಂಗ್ರೆಸ್ ಪರ ಪ್ರಚಾರ ಮಾಡಬೇಕು ಮತ್ತು ‘ಪಕ್ಷ ಧರ್ಮ’ವನ್ನು ಪಾಲಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.