ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls Results:ಕಡಿಮೆಯಾದ ಗೆಲುವಿನ ಅಂತರ; ವಾರಾಣಸಿಯಲ್ಲಿ ಪ್ರಧಾನಿ ಮೋದಿಗೆ ಜಯ

Published 4 ಜೂನ್ 2024, 11:56 IST
Last Updated 4 ಜೂನ್ 2024, 11:56 IST
ಅಕ್ಷರ ಗಾತ್ರ

ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗೆಲುವು ಸಾಧಿಸಿದ್ದಾರೆ. 1,52,513 ಮತಗಳ ಅಂತರದಲ್ಲಿ ಗೆಲುವು ಕಂಡಿದ್ದಾರೆ. 

ವಾರಾಣಸಿಯಲ್ಲಿ 3ನೇ ಬಾರಿಗೆ ಮೋದಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಅವರು 6,12,970 ಮತಗಳನ್ನು ಪಡೆದಿದ್ದಾರೆ  ಅಜಯ್‌ ರಾಯ್‌ ಅವರು ಮೋದಿ ಎದುರಾಳಿಯಾಗಿ ವಾರಾಣಸಿಯಲ್ಲಿ ಸ್ಪರ್ಧಿಸಿದ್ದರು. ಇವರು 4,60,457 ಮತಗಳನ್ನು ಪಡೆದಿದ್ದಾರೆ.

ಮೋದಿಯವರು 2014ರಲ್ಲಿ ಮೊದಲ ಬಾರಿ ವಾರಾಣಸಿಯಲ್ಲಿ ಸ್ಪರ್ಧಿಸಿದ್ದಾಗ 3,71,000 ಮತಗಳ ಅಂತರದಲ್ಲಿ ಹಾಗೂ 2019ರಲ್ಲಿ  4,79,505 ಮತಗಳ ಅಂತರದಲ್ಲಿ ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT