ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಶಕ್ಕೆ ಪಡೆದ ₹ 4,650 ಕೋಟಿ ಮೊತ್ತದ ವಸ್ತುಗಳಲ್ಲಿ ಅರ್ಧದಷ್ಟು ಡ್ರಗ್ಸ್: ಚು.ಆಯೋಗ

Published 15 ಏಪ್ರಿಲ್ 2024, 10:24 IST
Last Updated 15 ಏಪ್ರಿಲ್ 2024, 10:24 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತೀವ್ರ ನಿಗಾ ವಹಿಸಿರುವ ಅಧಿಕಾರಿಗಳು, ದೇಶದಾದ್ಯಂತ ನಗದು ಸೇರಿದಂತೆ ಸುಮಾರು ₹ 4,650 ಕೋಟಿಗೂ ಅಧಿಕ ಮೊತ್ತದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ₹ 2,000 ಕೋಟಿಗೂ ಹೆಚ್ಚು ಮೌಲ್ಯದ ಡ್ರಗ್ಸ್‌ ಸಹ ಇದರಲ್ಲಿ ಸೇರಿವೆ ಎಂದು ಚುನಾವಣಾ ಆಯೋಗ ಸೋಮವಾರ ತಿಳಿಸಿದೆ.

2024ರ ಮಾರ್ಚ್‌ 1ರಿಂದ ಈವರೆಗೆ ವಶಪಡಿಸಿಕೊಳ್ಳಲಾಗಿರುವ ವಸ್ತುಗಳ ಮೌಲ್ಯವು 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಶಪಡಿಸಿಕೊಂಡದ್ದಕ್ಕಿಂತಲೂ ಅಧಿಕವಾಗಿದೆ. ಕಳೆದ ಚುನಾವಣೆ ವೇಳೆ ಸುಮಾರು ₹ 3,475 ಕೋಟಿ ಮೊತ್ತದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಆಯೋಗ ಮಾಹಿತಿ ನೀಡಿದೆ.

ಮಾರ್ಚ್‌ 1ರಿಂದ ಈವರೆಗೆ ನಿತ್ಯ ಸರಾಸರಿ ₹ 100 ಕೋಟಿ ಮೊತ್ತದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದಿರುವ ಒಟ್ಟು ₹ 4,658 ಕೋಟಿ ಮೊತ್ತದ ವಸ್ತುಗಳ ಪೈಕಿ ನಗದು ಪ್ರಮಾಣ ₹ 395 ಕೋಟಿ ಹಾಗೂ ಮದ್ಯದ ಪ್ರಮಾಣ ₹ 489 ಕೋಟಿ. ಉಳಿದಂತೆ ಶೇ 45ರಷ್ಟು (₹ 2,069 ಕೋಟಿ) ಮಾದಕವಸ್ತುಗಳು ಎಂದು ವಿವರಿಸಿದ್ದಾರೆ.

ಚುನಾವಣಾ ಆಯೋಗವು ಮಾರ್ಚ್‌ 16ರಂದು ಲೋಕಸಭೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದೆ. ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್‌ 19ರಂದು ಮೊದಲ ಹಂತದಲ್ಲಿ ಹಾಗೂ ಜೂನ್‌ 1ರಂದು ಕೊನೇ ಹಂತದ ಮತದಾನವಾಗಲಿದೆ. ಜೂನ್‌ 4ರಂದು ಫಲಿತಾಂಶ ಹೊರಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT