ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಮಹಾರಾಷ್ಟ್ರದ ಶೇ 40ಕ್ಕಿಂತ ಅಧಿಕ ಮತದಾರರು 30–49 ವಯಸ್ಸಿನವರು

Published 24 ಮಾರ್ಚ್ 2024, 7:12 IST
Last Updated 24 ಮಾರ್ಚ್ 2024, 7:12 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದಲ್ಲಿರುವ ಒಟ್ಟು 9.2 ಕೋಟಿ ಮತದಾರರ ಪೈಕಿ ಶೇ 40ಕ್ಕಿಂತಲೂ ಅಧಿಕ ಮಂದಿ 30–49 ವಯಸ್ಸಿನವರು. 18ರಿಂದ 19 ವರ್ಷ ವಯಸ್ಸಿನವರ ಪ್ರಮಾಣ ಶೇ 1.27 ಮಾತ್ರ ಎಂಬುದು ರಾಜ್ಯ ಚುನಾವಣಾ ಆಯೋಗದ ಅಂಕಿ–ಅಂಶಗಳಿಂದ ತಿಳಿದುಬಂದಿದೆ.

ಮಾರ್ಚ್‌ 18ರ ವರೆಗಿನ ಮತದಾರರ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಶೇ 22.59 ಅಂದರೆ, 2.07 ಕೋಟಿ ಮತದಾರರು 30ರಿಂದ 39 ವರ್ಷದವರಾಗಿದ್ದಾರೆ. ಇದರಲ್ಲಿ 1.07 ಕೋಟಿ ಪುರುಷರು, 1 ಕೋಟಿ ಮಹಿಳಾ ಮತದಾರರು ಹಾಗೂ 1,970 ಮಂದಿ ಲೈಂಗಿಕ ಅಲ್ಪಸಂಖ್ಯಾತರಿದ್ದಾರೆ.

ಶೇ 21.98 ರಷ್ಟು (2.02 ಕೋಟಿ) ಮತದಾರರು 40–49 ವಯೋಮಾನದವರಾಗಿದ್ದಾರೆ. ಈ ಪೈಕಿ 1.05 ಕೋಟಿ ಪುರುಷರು, 96.86 ಲಕ್ಷ ಮಹಿಳಾ ಮತದಾರರು ಮತ್ತು 821 ಲೈಂಗಿಕ ಅಲ್ಪಸಂಖ್ಯಾತರು ಇದ್ದಾರೆ. 

ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ನೋಂದಾಯಿಸಿಕೊಂಡಿರುವವರ ಸಂಖ್ಯೆ 11.72 ಲಕ್ಷದಷ್ಟಿದ್ದು, 6.91 ಲಕ್ಷ ಪುರುಷರು, 4.80 ಲಕ್ಷ ಮಹಿಳೆಯರು ಹಾಗೂ 101 ಲೈಂಗಿಕ ಅಲ್ಪಸಂಖ್ಯಾತರು ಈ ಪಟ್ಟಿಯಲ್ಲಿದ್ದಾರೆ.

50-59 ವಯೋಮಾನದ ಮತದಾರರ ಪ್ರಮಾಣ 1.53 ಕೋಟಿಯಷ್ಟಿದೆ. ಇದು ರಾಜ್ಯದ ಒಟ್ಟಾರೆ ಮತದಾರರ ಸಂಖ್ಯೆಯ ಶೇ 16.68 ರಷ್ಟಾಗುತ್ತದೆ. ಇದರಲ್ಲಿ 77.41 ಲಕ್ಷ ಪುರುಷರು, 76.09 ಲಕ್ಷ ಮಹಿಳೆಯರು ಮತ್ತು 309 ಲೈಂಗಿಕ ಅಲ್ಪಸಂಖ್ಯಾತರು ಇದ್ದಾರೆ.

60–69 ವಯಸ್ಸಿನ ಶೇ 10.66 ರಷ್ಟು ಮತದಾರರು ಮಹಾರಾಷ್ಟ್ರದಲ್ಲಿದ್ದಾರೆ. ಈ ವಯೋಮಾನದ 98.12 ಲಕ್ಷ ಮತದಾರರಲ್ಲಿ ಪುರುಷರ ಸಂಖ್ಯೆ 50.19 ಲಕ್ಷ ಮತ್ತು ಮಹಿಳೆಯರ ಸಂಖ್ಯೆ 47.92 ಲಕ್ಷ. 127 ತೃತೀಯ ಲಿಂಗಿಗಳೂ ಇದ್ದಾರೆ.

70 ವರ್ಷ ದಾಟಿದ ಮಹಿಳೆಯರ ಸಂಖ್ಯೆ ಹೆಚ್ಚು
70ಕ್ಕಿಂತ ಅಧಿಕ ವಯಸ್ಸಿನ ಮತದಾರರ ಪೈಕಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

70–79 ವಯಸ್ಸಿನ 53.38 ಲಕ್ಷ ಮತದಾರರು ಇದ್ದು, ಇದರಲ್ಲಿ ಪುರುಷರ ಸಂಖ್ಯೆ 26.31 ಲಕ್ಷವಾದರೆ, ಮಹಿಳೆಯರ ಪ್ರಮಾಣ 27.06 ಲಕ್ಷ.

80–89 ವಯಸ್ಸಿನ 20.95 ಲಕ್ಷ ಮತದಾರರು ಇದ್ದಾರೆ. ಈ ಪೈಕಿ, 9.44 ಲಕ್ಷ ಪುರುಷರು ಇದ್ದರೆ, ಮಹಿಳೆಯರು 11.51 ಲಕ್ಷದಷ್ಟಿದ್ದಾರೆ.

90–100 ವಯಸ್ಸಿನ 5.31 ಲಕ್ಷ ಮತದಾರರ ಪೈಕಿ ಮಹಿಳೆಯರ ಸಂಖ್ಯೆ 2.96 ಲಕ್ಷ. ಈ ವಯೋಮಾನದ ಪುರುಷರ ಸಂಖ್ಯೆ 2.34 ಲಕ್ಷ ಇದೆ.

ನೂರು ವರ್ಷದ ದಾಟಿದ 52 ಸಾವಿರ ಮತದಾರರು ಮಹಾರಾಷ್ಟ್ರದಲ್ಲಿ ಇದ್ದಾರೆ. ಮಾರ್ಚ್‌ 17ರಿಂದ 22ರವರೆಗೆ ಐದೇ ದಿನಗಳಲ್ಲಿ 1,84,841 ಹೊಸ ಮತದಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂಬುದಾಗಿಯೂ ಆಯೋಗ ತಿಳಿಸಿದೆ.

ಐದು ಹಂತದಲ್ಲಿ ಮತದಾನ
ಉತ್ತರ ಪ್ರದೇಶದ (80) ನಂತರ ಅತಿಹೆಚ್ಚು ಲೋಕಸಭೆ ಸ್ಥಾನಗಳನ್ನು ಹೊಂದಿರುವ ರಾಜ್ಯ ಮಹರಾಷ್ಟ್ರ. ಇಲ್ಲಿನ 48 ಕ್ಷೇತ್ರಗಳಿಗೆ ಒಟ್ಟು ಐದು ಹಂತದಲ್ಲಿ ಮತದಾನ ನಡೆಯಲಿದೆ.

ಏಪ್ರಿಲ್‌ 19, ಏಪ್ರಿಲ್‌ 26, ಮೇ 7, ಮೇ 13 ಹಾಗೂ ಮೇ 20 ರಂದು ಚುನಾವಣೆ ನಡೆಯಲಿದ್ದು, ಜೂನ್‌ 4ರಂದು ಫಲಿತಾಂಶ ಹೊರಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT