ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls: ಬಿಜೆಪಿ 4ನೇ ಪಟ್ಟಿ ಬಿಡುಗಡೆ, ವಿರುಧುನಗರದಿಂದ ನಟಿ ರಾಧಿಕಾ ಕಣಕ್ಕೆ

Published 22 ಮಾರ್ಚ್ 2024, 9:12 IST
Last Updated 22 ಮಾರ್ಚ್ 2024, 9:12 IST
ಅಕ್ಷರ ಗಾತ್ರ

ನವದೆಹಲಿ: ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಿಜೆಪಿ ಇಂದು (ಶುಕ್ರವಾರ) ಬಿಡುಗಡೆ ಮಾಡಿದೆ.

ತಮಿಳು ನಟ ಶರತ್‌ಕುಮಾರ್ ಅವರ ಪತ್ನಿ ರಾಧಿಕಾ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದು, ಅವರು ವಿರುಧುನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಇತ್ತೀಚೆಗಷ್ಟೇ ಶರತ್‌ಕುಮಾರ್‌ ಅವರು ತಮ್ಮ ಆಲ್‌ ಇಂಡಿಯಾ ಸಮತ್ವ ಮಕ್ಕಳ್‌ ಕಚ್ಚಿ (ಎಐಎಸ್‌ಎಂಕೆ) ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು.

ಅಭ್ಯರ್ಥಿಗಳ ಪಟ್ಟಿ ಇಂತಿದೆ...

ಪುದುಚೇರಿ - ನಮಃಶಿವಾಯಮ್

ತಿರುವಳ್ಳೂರ್ (ಎಸ್‌ಸಿ) - ಬಾಲಗಣಪತಿ

ಚೆನ್ನೈ ಉತ್ತರ - ಪಾಲ್ ಕನಕರಾಜ್

ತಿರುವಣ್ಣಾಮಲೈ - ಅಶ್ವಥಾಮನ್

ನಾಮಕ್ಕಲ್ - ಕೆ.ಪಿ.ರಾಮಲಿಂಗಂ

ತಿರುಪ್ಪೂರ್ - ಎಪಿ ಮುರುಗಾನಂದಂ

ಪೊಲ್ಲಾಚಿ - ವಸಂತರಾಜನ್

ಕರೂರ್ - ವಿವಿ ಸೆಂಥಿಲನಾಥನ್

ಚಿದಂಬರಂ (ಎಸ್‌ಸಿ) - ಕಾರ್ತಿಯಾಯಿನಿ

ನಾಗಪಟ್ಟಣಂ (ಎಸ್‌ಸಿ) - ಎಸ್‌ಜಿಎಂ ರಮೇಶ್

ತಂಜಾವೂರು - ಮುರುಗಾನಂದಂ

ಶಿವಗಂಗಾ - ದೇವನಾಥನ್ ಯಾದವ್

ವಿರುಧುನಗರ - ರಾಧಿಕಾ ಶರತ್‌ಕುಮಾರ್

ಮಧುರೈ - ರಾಮ ಶ್ರೀನಿವಾಸನ್

ತೆಂಕಶಿ - ಜಾನ್ ಪಾಂಡಿಯನ್

ಪಕ್ಷವು ಗುರುವಾರ 9 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತ್ತು. ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಅಣ್ಣಾಮಲೈ ಕೊಯಮತ್ತೂರಿನಿಂದ, ಕೇಂದ್ರ ಸಚಿವ ಎಲ್.ಮುರುಗನ್ ನೀಲ್‌ಗಿರೀಸ್‌ನಿಂದ, ತಮಿಳ್ ಇಸೈ ಸೌಂದರರಾಜನ್ ಚೆನ್ನೈ ದಕ್ಷಿಣದಿಂದ, ಕೇಂದ್ರದ ಮಾಜಿ ಸಚಿವ ಪೊನ್ ರಾಧಾಕೃಷ್ಣನ್ ಕನ್ಯಾಕುಮಾರಿಯಿಂದ ಸ್ಪರ್ಧಿಸುತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಲಾಗಿತ್ತು. ಮಾರ್ಚ್ 2 ಮತ್ತು 13ರಂದು ಬಿಡುಗಡೆಯಾದ ಎರಡು ಪಟ್ಟಿಗಳಲ್ಲಿ ಬಿಜೆಪಿ 267 ಅಭ್ಯರ್ಥಿಗಳನ್ನು ಘೋಷಿಸಿತ್ತು. 195 ಹೆಸರುಗಳನ್ನು ಒಳಗೊಂಡ ಮೊದಲ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್, ಕಿರಣ್ ರಿಜಿಜು ಮುಂತಾದ ಪ್ರಮುಖರ ಹೆಸರಿತ್ತು.

ಬಿಆರ್‌ಎಸ್‌ನಿಂದ ಇಬ್ಬರ ಹೆಸರು ಘೋಷಣೆ

ಹೈದರಾಬಾದ್ (ಪಿಟಿಐ): ಬಿಆರ್‌ಎಸ್ ಪಕ್ಷವು ಲೋಕಸಭಾ ಚುನಾವಣೆಗಾಗಿ ತೆಲಂಗಾಣದಲ್ಲಿ ಮತ್ತೆ ಇಬ್ಬರು ಅಭ್ಯರ್ಥಿಗಳನ್ನು ಘೋಷಿಸಿದೆ. ಮಾಜಿ ಐಎಎಸ್ ಅಧಿಕಾರಿ ವೆಂಕಟರಾಮ ರೆಡ್ಡಿ ಮೇಡಕ್ ಕ್ಷೇತ್ರದಿಂದ ಮಾಜಿ ಐಪಿಎಸ್ ಅಧಿಕಾರಿ ಆರ್.ಎಸ್.ಪ್ರವೀಣ್ ಕುಮಾರ್ ನಾಗರಕರ್ನೂಲ್‌ನಿಂದ ಕಣಕ್ಕಿಳಿಯುತ್ತಿದ್ದಾರೆ.

ವೆಂಕಟರಾಮ ರೆಡ್ಡಿ ಹಾಲಿ ವಿಧಾನ ಪರಿಷತ್ ಸದಸ್ಯರಾಗಿದ್ದರೆ ಆರ್.ಎಸ್.ಪ್ರವೀಣ್ ಕುಮಾರ್ ಇತ್ತೀಚೆಗೆ ತಾನೇ ಬಿಎಸ್‌ಪಿ ತ್ಯಜಿಸಿ ಬಿಆರ್‌ಎಸ್ ಸೇರ್ಪಡೆಯಾಗಿದ್ದರು. ಇದರೊಂದಿಗೆ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಪಕ್ಷವು ತೆಲಂಗಾಣದ 17 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT