ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Modi Cabinet: 7 ರಾಜ್ಯಗಳ ಮಾಜಿ ಮುಖ್ಯಮಂತ್ರಿಗಳಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ!

Published 9 ಜೂನ್ 2024, 14:59 IST
Last Updated 9 ಜೂನ್ 2024, 14:59 IST
ಅಕ್ಷರ ಗಾತ್ರ

ನವದೆಹಲಿ: ಸತತ ಮೂರನೇ ಬಾರಿಗೆ ರಚನೆಯಾಗಿರುವ ಎನ್‌ಡಿಎ ಸರ್ಕಾರದ ಸಚಿವ ಸಂಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಸೇರಿದಂತೆ ಒಟ್ಟು ಏಳು ರಾಜ್ಯಗಳ ಮಾಜಿ ಮುಖ್ಯಮಂತ್ರಿಗಳು ಸ್ಥಾನ ಪಡೆದಿದ್ದಾರೆ.

ಮೋದಿ ಅವರು 2014ರಲ್ಲಿ ಮೊದಲ ಸಲ ಪ್ರಧಾನಿಯಾಗುವುದಕ್ಕೂ ಮುನ್ನ ಗುಜರಾತ್‌ ಮುಖ್ಯಮಂತ್ರಿಯಾಗಿ 15 ವರ್ಷ ಸರ್ಕಾರ ನಡೆಸಿದ್ದರು.

ಉಳಿದಂತೆ, ಶಿವರಾಜ್‌ ಸಿಂಗ್‌ ಚೌಹಾಣ್‌ (ಮಧ್ಯಪ್ರದೇಶ), ರಾಜನಾಥ್‌ ಸಿಂಗ್‌ (ಉತ್ತರ ಪ್ರದೇಶ), ಮನೋಹರ್‌ ಲಾಲ್‌ ಖಟ್ಟರ್‌ (ಹರಿಯಾಣ), ಸರ್ಬಾನಂದ ಸೋನವಾಲ್‌ (ಅಸ್ಸಾಂ), ಎಚ್‌.ಡಿ.ಕುಮಾರಸ್ವಾಮಿ (ಕರ್ನಾಟಕ), ಜೀತನ್‌ ರಾಮ್‌ ಮಾಂಝಿ (ಬಿಹಾರ) ಅವರು ಸಂಪುಟದಲ್ಲಿದ್ದಾರೆ.

ಇದರಲ್ಲಿ ಕುಮಾರಸ್ವಾಮಿ ಅವರು ಜೆಡಿಎಸ್‌ ಹಾಗೂ ಮಾಂಝಿ ಅವರು ಹಿಂದೂಸ್ತಾನಿ ಅವಂ ಮೋರ್ಚಾ ಪಕ್ಷದವರು. ಮಿಕ್ಕವರೆಲ್ಲ ಬಿಜೆಪಿಯವರು.

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭಕ್ಕೆ ವಿದೇಶಿ ಗಣ್ಯರೂ ಸೇರಿದಂತೆ, ಸಾವಿರಾರು ಜನರು ಸಾಕ್ಷಿಯಾದರು.

ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಬಳಿಕ ಸತತ ಮೂರನೇ ಬಾರಿಗೆ ಪ್ರಧಾನಿಯಾದ ಹೆಗ್ಗಳಿಗೆ ಮೋದಿ ಪಾತ್ರರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT