ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಜನತೆ, ಗಡಿ ರಕ್ಷಿಸಿಕೊಳ್ಳುವ ಬಗೆ ನವಭಾರತಕ್ಕೆ ಗೊತ್ತು: ಯೋಗಿ ಆದಿತ್ಯನಾಥ

Published 7 ಏಪ್ರಿಲ್ 2024, 23:30 IST
Last Updated 7 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಜೈಪುರ: ದೇಶದ ಜನರು ಮತ್ತು ಗಡಿಗಳನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂಬುದು ನವಭಾರತಕ್ಕೆ ಗೊತ್ತಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

ರಾಜಸ್ಥಾನದ ಭರತ್‌ಪುರ, ದೌಸಾ ಮತ್ತು ಸಿಕಾರ್‌ನಲ್ಲಿ ಚುನಾವಣಾ ರ‍್ಯಾಲಿಗಳನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ಅವರು, ಬ್ರಿಟನ್‌ನ ದೈನಿಕ ‘ದಿ ಗಾರ್ಡಿಯನ್’ 2019ರ ನಂತರ ರಾಷ್ಟ್ರೀಯ ಭದ್ರತೆಗಾಗಿ ಭಾರತೀಯ ಗುಪ್ತಚರ ಸಂಸ್ಥೆಗಳು ಪಾಕಿಸ್ತಾನದಲ್ಲಿ ಭಯೋತ್ಪಾದಕರ ಉದ್ದೇಶಿತ ಹತ್ಯೆಗಳಲ್ಲಿ ಭಾಗಿಯಾಗಿವೆ ಎಂದು ಪ್ರಕಟಿಸಿರುವ ವರದಿ ಉಲ್ಲೇಖಿಸಿ, ಭಯೋತ್ಪಾದಕರನ್ನು ಕೊಲ್ಲುವುದು ತಪ್ಪೇ ಎಂದು ಪ್ರಶ್ನಿಸಿದ್ದಾರೆ.

‘ತಮ್ಮ ಜನರನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂಬುದು ನವ ಭಾರತಕ್ಕೆ ತಿಳಿದಿದೆ. ನಿನ್ನೆಯವರೆಗೆ ಆ ಭಯೋತ್ಪಾದಕರಿಗೆ ಆಶ್ರಯ ನೀಡಿದವರು ಈಗ ವೈಮಾನಿಕ ದಾಳಿಯ ಭಯದಿಂದ ಭಾರತದ ವಿರುದ್ಧ ಏನನ್ನೂ ಮಾತನಾಡಲು ಧೈರ್ಯ ತೋರುತ್ತಿಲ್ಲ’ ಎಂದು ಆದಿತ್ಯನಾಥ, ಪರೋಕ್ಷವಾಗಿ ಪಾಕಿಸ್ತಾನವನ್ನು ಟೀಕಿಸಿದರು.

‘ಜಗತ್ತು ಭಯೋತ್ಪಾದನೆಯನ್ನು ದೊಡ್ಡ ಹೊರೆ ಎಂದು ಪರಿಗಣಿಸುತ್ತದೆ. ಆದರೆ, ಇನ್ನೊಂದೆಡೆ ಕಾಂಗ್ರೆಸ್ ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುತ್ತಿದೆ’ ಎಂದೂ ಆದಿತ್ಯನಾಥ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT