ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಾಶ್ರಿತ ಕನ್ನಡಿಗರಿಗೆ ಪುನರ್ವಸತಿ: ಗೋವಾ CM ಪ್ರಮೋದ ಸಾವಂತ್‌

Published 17 ಏಪ್ರಿಲ್ 2024, 13:30 IST
Last Updated 17 ಏಪ್ರಿಲ್ 2024, 13:30 IST
ಅಕ್ಷರ ಗಾತ್ರ

ಬೆಳಗಾವಿ: ‘ನ್ಯಾಯಾಲಯದ ಆದೇಶದಂತೆ ಗೋವಾದಲ್ಲಿ ಕನ್ನಡಿಗರ ಮನೆಗಳನ್ನು ತೆರವು ಮಾಡಲಾಗುತ್ತಿದೆ ಹೊರತು ಸರ್ಕಾರದ ಇರಾದೆ ಇಲ್ಲ. ನಿರಾಶ್ರಿತರಿಗೆ ಪ್ರತ್ಯೇಕ ಜಾಗ ಒದಗಿಸಿ, ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್‌ ಹೇಳಿದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಅವರು ಬುಧವಾರ ಉಮೇದುವಾರಿಕೆ ಸಲ್ಲಿಸಿದ ಸಂದರ್ಭದಲ್ಲಿ ಜತೆಗಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ನ್ಯಾಯಾಲಯದ ಆದೇಶ ಪಾಲನೆ ಸರ್ಕಾರದ ಕರ್ತವ್ಯ. ನಿರಾಶ್ರಿತ ಕನ್ನಡಿಗರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನೊಂದಿಗೆ ನೇರ ಮಾತನಾಡಿಲ್ಲ. ‘ಎಕ್ಸ್’ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದು ಗಮನಿಸಿದ್ದೇನೆ’ ಎಂದರು.

ನಂತರ ನಡೆದ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡಿದ ಅವರು,‌‘ಸುಳ್ಳು ಹೇಳುವ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್‌. ಅದು ಜನರ ಭರವಸೆ ಈಡೇರಿಸಲ್ಲ. ನುಡಿದಂತೆ ನಡೆಯಲ್ಲ. ಹೀಗಾಗಿ ಜನರಿಗೆ ಆ ಪಕ್ಷದ ಮೇಲೆ ವಿಶ್ವಾಸ ಇಲ್ಲ. ಅದು ಕುಟುಂಬ ರಾಜಕಾರಣದ ಪಕ್ಷ. ನಮ್ಮದು ರಾಷ್ಟ್ರೀಯ ವಾದದ ಪಕ್ಷ’ ಎಂದರು.

‘10 ವರ್ಷಗಳಲ್ಲಿ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ಸಾಧನೆಗಳನ್ನು ದೇಶದ ಜನ ನೋಡಿದ್ದಾರೆ. ಪ್ರಧಾನಿ ನುಡಿದಂತೆ ನಡೆದಿದ್ದಾರೆ. ದೇಶದ ವಿಕಾಸಕ್ಕೆ ಭದ್ರ ಅಡಿಪಾಯ ಹಾಕಿದ್ದಾರೆ. ರಾಜ್ಯದಲ್ಲಿ 28 ಸ್ಥಾನ ಗೆಲ್ಲುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT