ವಿಜಯಪುರ: ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ಮಾಡಿರುವ ನೀರಾವರಿ ಕೆಲಸಗಳಿಂದ ಸಂತಸನಾದ ರೈತರೊಬ್ಬರು, ಚುನಾವಣೆ ಖರ್ಚಿಗೆ ಕಾಣಿಕೆಯಾಗಿ ₹ 50 ಸಾವಿರ ಚೆಕ್ ಅನ್ನು ನೀಡಿ ಅಭಿಮಾನ ತೋರಿದ್ದಾರೆ.

ಬಬಲೇಶ್ವರ ತಾಲ್ಲೂಕಿನ ಸಂಗಾಪುರ ಎಸ್.ಎಚ್. ಗ್ರಾಮದ ರೈತ ಶೇಖಪ್ಪ ಚಿಕ್ಕಗಲಗಲಿ ಅವರು ಎಂ.ಬಿ.ಪಾಟೀಲರ ನಿವಾಸಕ್ಕೆ ರೈತ ಸ್ನೇಹಿತರೊಂದಿಗೆ ಆಗಮಿಸಿ, ಚೆಕ್ ನೀಡಿದರು.

ಬಳಿಕ ಮಾತನಾಡಿದ ಶೇಖಪ್ಪ ಚಿಕ್ಕಗಲಗಲಿ, ನಮ್ಮ ಭಾಗದಲ್ಲಿ ಈ ಮುಂಚೆ ಕುಡಿಯುವ ನೀರಿಗೂ ಹಾಹಾಕಾರವಿತ್ತು. ಕೆರೆಗಳಿಗೂ ನೀರು ಸಿಗುತ್ತಿರಲಿಲ್ಲ. ಎಂ.ಬಿ.ಪಾಟೀಲರು ಜಲಸಂಪನ್ಮೂಲ ಸಚಿವರಾದ ನಂತರ ನಮ್ಮ ಭಾಗದಲ್ಲಿ ಸಂಪೂರ್ಣ ನೀರಾವರಿ ಮಾಡಿ ಎಲ್ಲವನ್ನು ಸಮೃದ್ಧಿ ಮಾಡಿದ್ದಾರೆ ಎಂದು ಹೇಳಿದರು.

ಈ ಮುಂಚೆ ಪ್ರತಿ ಎಕರೆ ಭೂಮಿಯ ಬೆಲೆ ₹ 10 ಸಾವಿರ ಮಾತ್ರ ಇತ್ತು. ಈಗ ಪ್ರತಿ ಎಕರೆಗೆ ಕನಿಷ್ಠ ₹ 50 ಸಾವಿರರಂತೆ ಬೆಳೆ ಬೆಳೆಯುತ್ತಿದ್ದೇವೆ. ಎಲ್ಲ ಗ್ರಾಮಗಳು ಶ್ರೀಮಂತವಾಗಿವೆ. ಆರ್ಥಿಕವಾಗಿ ಅಭಿವೃದ್ಧಿಯಾಗಿವೆ. ಪ್ರತಿಯೊಂದು ಊರುಗಳ ಚಿತ್ರಣ ಬದಲಾಗಿದೆ. ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎಂದರು.

ಕ್ಷೇತ್ರದಲ್ಲಿ ಎಂ.ಬಿ.ಪಾಟೀಲರು ಕ್ರಾಂತಿಕಾರಿ ಬದಲಾವಣೆ ಮಾಡಿದಾರೆ. ಇಂಥ ವ್ಯಕ್ತಿಗಳನ್ನು ತಾವೆಲ್ಲರೂ ಬೆಂಬಲಿಸಬೇಕು. ಅವರೊಂದಿಗೆ ಕೈಜೋಡಿಸಬೇಕು ಎಂಬ ಸದುದ್ದೇಶದಿಂದ ಚುನಾವಣೆ ಖರ್ಚಿಗೆ ₹ 50 ಸಾವಿರ ಹಣದ ಚೆಕ್ ನೀಡಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಗ್ರಾಮದ ಮುಖಂಡರಾದ ದುಂಡಪ್ಪ ಬಡ್ರಿ, ರಮೇಶ ಬಡ್ರಿ, ರಾಜು ಬಡ್ರಿ, ರಮೇಶ ಬರಗಿ ಮತ್ತು ನಂದೆಪ್ಪ ಬಡ್ರಿ ಇದ್ದರು.

ಓದಿ...

* ಚುನಾವಣಾ ಪ್ರಚಾರಕ್ಕೆ ಕಿಚ್ಚ ಸುದೀಪ್ ಎಂಟ್ರಿ: ಬಸವರಾಜ ಬೊಮ್ಮಾಯಿ ಪರ ಕ್ಯಾಂಪೇನ್

* ಸಚಿವ ಸುಧಾಕರ್ ಹಂಚಿದ ಕಳಪೆ ಸ್ಟೌಗಳು ಸ್ಫೋಟಗೊಳ್ಳುತ್ತಿವೆ: ಕಾಂಗ್ರೆಸ್ ವಾಗ್ದಾಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.