ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲೇರಿದವರು ಕೆಳಗಿಳಿಯಲೇಬೇಕು, ಮೋದಿ ಬಣ್ಣ ಬಯಲಾಗಿದೆ: ಸಿದ್ದರಾಮಯ್ಯ

Published 11 ಮೇ 2024, 6:43 IST
Last Updated 11 ಮೇ 2024, 6:43 IST
ಅಕ್ಷರ ಗಾತ್ರ

ಮೈಸೂರು: ರಾಜಕೀಯವಾಗಿ ಯಾರನ್ನು ಯಾರೂ ಸಮಾಧಿ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

'ವಿರೋಧ ಪಕ್ಷಗಳು ನನ್ನನ್ನು ಸಮಾಧಿ ಮಾಡಲು ಮುಂದಾಗಿವೆ' ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಇಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, 'ಮೋದಿ 10 ವರ್ಷ ಬಡವರ ಪರ ಕೆಲಸ ಮಾಡಿಲ್ಲ. ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ' ಎಂದು‌ ಆರೋಪಿಸಿದರು.

'ದೇಶದ ಪ್ರಧಾನ ಮಂತ್ರಿಯನ್ನು ಸೋಲಿಸಬೇಕು ಎಂಬುದು ವಿರೋಧ ಪಕ್ಷಗಳ ಬಯಕೆಯಾಗಿದೆ. ಸೋಲುವ ಭಯದಿಂದಾಗಿ ಪ್ರಧಾನಿ ಹತಾಶೆಯಿಂದ ಮಾತನಾಡುತ್ತಿದ್ದಾರೆ' ಎಂದು ಹೇಳಿದರು

'ಈ ಪ್ರಧಾನಿ ಸುಳ್ಳಿನ ಸರದಾರ ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ಬಣ್ಣ ದೇಶದ ಜನರ ಮುಂದೆ ಬಯಲಾಗಿದೆ. ಈ ಹತಾಶೆಯಲ್ಲಿ ಈ ರೀತಿ ಮಾತನಾಡುತ್ತಿದ್ದಾರೆ. ಅವರ ಭಾವನಾತ್ಮಕ ಮಾತುಗಳು ಜನರಿಗೆ ಗೊತ್ತಿವೆ. ಮೇಲಕ್ಕೆ ಏರಿದವರು ಕೆಳಗೆ ಇಳಿಯಲೇ ಬೇಕು' ಎಂದರು.

'ರೈತರ ಸಾಲ ಮನ್ನಾ ಮಾಡಬೇಕು' ಎಂಬ ಬಿ.ಎಸ್. ಯಡಿಯೂರಪ್ಪ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಅವರು, 'ಸಾಲ ಮನ್ನಾ ಮಾಡಿ ಎಂದು ಹಿಂದೆ ಕೇಳಿದಾಗ ಯಡಿಯೂರಪ್ಪ ಏನು ಹೇಳಿದ್ದರು ಗೊತ್ತಾ? ನಮ್ಮ ಬಳಿ ನೋಟ್ ಪ್ರಿಂಟಿಂಗ್ ಮಷಿನ್ ಇದೆಯಾ ಎಂದು ಕೇಳಿರಲಿಲ್ಲವಾ? ಈಗ ಸಾಲ ಮನ್ನಾ ಮಾಡಿ ಎಂದು ಕೇಳುವ ನೈತಿಕತೆ ಇವರಿಗೆ ಇದೆಯಾ?' ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT