ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls: ಹಿರಿಯ, ಅಂಗವಿಕಲ ಮತದಾರರಿಗೆ ಏ.26ರಂದು ರ‍್ಯಾಪಿಡೊದಿಂದ ಉಚಿತ ಸಾರಿಗೆ

Published 24 ಏಪ್ರಿಲ್ 2024, 12:25 IST
Last Updated 24 ಏಪ್ರಿಲ್ 2024, 12:25 IST
ಅಕ್ಷರ ಗಾತ್ರ

ನವದೆಹಲಿ: ಏ.26ರಂದು ಲೋಕಸಭಾ ಚುನಾವಣೆಯಲ್ಲಿ ಮತಚಲಾವಣೆ ಮಾಡುವ ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ‌ ಟ್ಯಾಕ್ಸಿ ಸೇವೆಗೆ ಜನಪ್ರಿಯವಾಗಿರುವ ರ್‍ಯಾಪಿಡೊ ಉಚಿತ ಸೇವೆ ನೀಡುವುದಾಗಿ ಹೇಳಿದೆ. 

‘ಜವಾಬ್ದಾರಿಯ ಸವಾರಿ’ (ಸವಾರಿ ಜಿಮ್ಮೇದಾರಿ ಕಿ) ಉಪಕ್ರಮದ ಭಾಗವಾಗಿ ಈ ಸೇವೆ ನೀಡುತ್ತಿದ್ದು, ಬೆಂಗಳೂರು, ಮೈಸೂರು ಮತ್ತು ಮಂಗಳೂರಿನ ಮತದಾರರು ಏಪ್ರಿಲ್ 26 ರಂದು ‘VOTENOW’ ಕೋಡ್ ಅನ್ನು ಬಳಸಿಕೊಂಡು ಮತದಾನದ ಪಾಯಿಂಟ್‌ಗಳಿಗೆ ಉಚಿತ ಸವಾರಿಯ ಸೌಕರ್ಯವನ್ನು ಪಡೆಯಬಹುದು ಎಂದು ತಿಳಿಸಿದೆ.

ಭಾರತೀಯ ಚುನಾವಣಾ ಆಯೋಗ (ಇಸಿಐ) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಯೋಗದೊಂದಿಗೆ 2024 ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಬೆಂಗಳೂರಿನಲ್ಲಿರುವ ಅಂಗವಿಕಲರು ಮತ್ತು ಹಿರಿಯ ನಾಗರಿಕ ಮತದಾರರಿಗೆ ಉಚಿತ ಆಟೋ ಮತ್ತು ಕ್ಯಾಬ್ ಸೇವೆಗಳನ್ನು ವಿಸ್ತರಿಸುವ ಮೂಲಕ ರ್‍ಯಾ‌ಪಿಡೊ ಚುನಾವಣೆಯಲ್ಲಿ ನಾಗರಿಕರು ಒಳಗೊಳ್ಳುವಂತೆ ಮಾಡಲು ಮುಂದಾಗಿದೆ ಎಂದು ರಾಪಿಡೊ ಹೇಳಿಕೆಯಲ್ಲಿ ತಿಳಿಸಿದೆ.

ಅಂಗವಿಕಲರು ಮತ್ತು ಹಿರಿಯ ನಾಗರಿಕ ಮತದಾರರು ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಚಲಾಯಿಸಲು ಸಮಾನ ಅವಕಾಸ ಹೊಂದಲು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ರ್‍ಯಾಪಿಡೋದ ಸಹ ಸಂಸ್ಥಾಪಕ ಪವನ್ ಗುಂಟುಪಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT