ಕೋಲಾರ: ನಾಮಪತ್ರ ಪರಿಶೀಲನೆ ನಡೆಯುವ ಮಾ.27ರ ಒಳಗೆ ಜಾತಿ ಪ್ರಮಾಣಪತ್ರದ ಮೂಲ ಪ್ರತಿ ಸಲ್ಲಿಸಬೇಕು ಎಂದು ಸೂಚಿಸಿ ಜಿಲ್ಲಾ ಚುನಾವಣಾಧಿಕಾರಿ ಡಿ.ಕೆ.ರವಿ ಜೆಡಿಎಸ್ ಅಭ್ಯರ್ಥಿ ಕೆ.ಕೇಶವ ಅವರಿಗೆ ನೋಟಿಸ್ ನೀಡಿದ್ದಾರೆ.

ಕೇಶವ ಕೋಲಾರ ತಹಶೀಲ್ದಾರರಿಂದ 1994ರಲ್ಲಿ ಪಡೆದ ಜಾತಿ ಪ್ರಮಾಣಪತ್ರದ ಮೂಲಪ್ರತಿಯನ್ನು ಸಲ್ಲಿಸದೆ ದೃಢೀಕೃತ ನಕಲು ಪ್ರತಿ ಮಾತ್ರ ಸಲ್ಲಿಸಿರುವುದರಿಂದ ನೋಟಿಸ್ ನೀಡಲಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ,

ದಾಖಲೆಗಳಿಲ್ಲ: 20 ವರ್ಷದ ಹಿಂದೆ ನೀಡಲಾದ ಜಾತಿ ಪ್ರಮಾಣಪತ್ರದ ದಾಖಲೆಗಳು ಲಭ್ಯವಾಗಿಲ್ಲ ಎಂದು ತಹಶೀಲ್ದಾರ್ ಕಚೇರಿ ಮೂಲಗಳು ತಿಳಿಸಿವೆ.

ಕೇಶವ ಅವರು ಇದೇ ಮಾರ್ಚ್ನಲ್ಲಿ ಬೆಂಗಳೂರು ಉತ್ತರ ತಾಲ್ಲೂಕು ತಹಶೀಲ್ದಾರರಿಂದ ಪಡೆದ ಮತ್ತೊಂದು ಜಾತಿ ಪ್ರಮಾಣಪತ್ರವೂ ರದ್ದಾಗಿದೆ. ರದ್ದತಿ ಆದೇಶಕ್ಕೆ ಹೈಕೋರ್ಟ್ನಿಂದ ತಡೆಯಾಜ್ಞೆ ತರುವ ಪ್ರಯತ್ನವೂ ನಡೆದಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.