ಮಡಿಕೇರಿ: ಸತತ ನಾಲ್ಕು ಚುನಾವಣೆಗಳಿಂದಲೂ ‘ಬಿಜೆಪಿಯ ಭದ್ರಕೋಟೆ’ ಎನಿಸಿರುವ ಕೊಡಗಿನ ಎರಡೂ ವಿಧಾನಸಭಾ ಕ್ಷೇತ್ರಗಳಿಗೆ ಲಗ್ಗೆ ಇಡಲು ಕಾಂಗ್ರೆಸ್ ಈ ಬಾರಿ ಯುವಕರನ್ನು ಕಣಕ್ಕಿಳಿಸಿದೆ. ಆದರೆ, ಬಿಜೆಪಿಯು ‘ಹ್ಯಾಟ್ರಿಕ್’ ಗೆಲುವು ಪಡೆದಿರುವ ಹಿರಿಯರನ್ನೇ ಕಣಕ್ಕಿಳಿಸಿ, ‘ಟಿಪ್ಪು ಜಯಂತಿ’ ಅಸ್ತ್ರವನ್ನೇ ಮತ್ತೆ ಕಾಂಗ್ರೆಸ್ನತ್ತ ಪ್ರಯೋಗಿಸಿದೆ.

ಎಸ್ಡಿಪಿಐ, ಸರ್ವೋದಯ ಪಕ್ಷಗಳ ಸ್ಪರ್ಧೆಯಿಂದ ಆಗಲಿರುವ ಮತ ವಿಭಜನೆ ಕಾಂಗ್ರೆಸ್ ಪಾಲಿಗೆ ನಕಾರಾತ್ಮಕ ಅಂಶ. ಒಂದೇ ಕುಟುಂಬದವರಿಗೆ ಸತತವಾಗಿ ಟಿಕೆಟ್ ನೀಡುವುದರ ವಿರುದ್ಧ ಎದ್ದಿರುವ ಅಸಮಾಧಾನದ ಹೊಗೆ ಹಾಗೂ ₹ 7 ಕೋಟಿಗೂ ಅಧಿಕ ಹಣ ವ್ಯಯಿಸಿದರೂ ಕುಸಿಯುತ್ತಲೇ ಇರುವ ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆಯು ಬಿಜೆಪಿ ಪಾಲಿಗೂ ‘ಮೈನಸ್ ಪಾಯಿಂಟ್’. ಈ ಸನ್ನಿವೇಶದ ಲಾಭ ಪಡೆಯಲು ಜೆಡಿಎಸ್ ಹವಣಿಸಿದ್ದು, ಚುನಾವಣಾ ಕಣ ಕಳೆದ ಬಾರಿಗಿಂತಲೂ ಹೆಚ್ಚಿನ ಕುತೂಹಲ ಕೆರಳಿಸಿದೆ.

ಮಡಿಕೇರಿ ಕ್ಷೇತ್ರದಲ್ಲಿ 2004ರಲ್ಲಿ ಕೆ.ಜಿ.ಬೋಪಯ್ಯ, 2008ರಿಂದ ಸತತ ಮೂರು ಬಾರಿ ಎಂ.ಪಿ.ಅಪ್ಪಚ್ಚುರಂಜನ್ ಗೆದ್ದಿದ್ದಾರೆ. ವಿರಾಜಪೇಟೆ ಕ್ಷೇತ್ರದಲ್ಲಿ 2004ರಲ್ಲಿ //ಎಚ್.ಡಿ.ಬಸವರಾಜು// ನಂತರ 2008ರಿಂದ ಸತತವಾಗಿ ಕೆ.ಜಿ.ಬೋಪಯ್ಯ ಗೆದ್ದಿದ್ದಾರೆ. ಅತಿವೃಷ್ಟಿಯಾದಾಗಲೆಲ್ಲ ಗುಡ್ಡ, ಬೆಟ್ಟಗಳನ್ನು ಹತ್ತಿ ಸಂತ್ರಸ್ತರಿಗೆ ಸಾಂತ್ವನ ಹೇಳಿರುವುದು ಇವರಿಬ್ಬರ ಪಾಲಿಗೆ ‘ಪ್ಲಸ್ ಪಾಯಿಂಟ್’ ಎನಿಸಿದೆ.

ಹಿಂದಿನ ಮೂರು ಚುನಾವಣೆಗಳಲ್ಲಿ ಮಡಿಕೇರಿಯಲ್ಲಿ 2ನೇ ಸ್ಥಾನದಲ್ಲಿದ್ದ ಬಿ.ಎ.ಜೀವಿಜಯ ಕಣದಲ್ಲಿಲ್ಲ. ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದರೂ ಟಿಕೆಟ್ ಲಭಿಸಿಲ್ಲ. ಸದ್ಯ, ಅವರು ಕಾಂಗ್ರೆಸ್ನ ಡಾ.ಮಂತರ್ಗೌಡ ಪರವಾಗಿ ಹೆಚ್ಚು ಪ್ರಚಾರಕ್ಕೆ ಹೋಗದೆ, ಬಂಡಾಯದ ಮಾತುಗಳನ್ನೂ ಆಡದೇ ಮೌನಕ್ಕೆ ಜಾರಿದ್ದಾರೆ. ಅವರ ‘ಮೌನ’ ಎಂಥ ಪರಿಣಾಮ ಬೀರುತ್ತದೆಂಬುದನ್ನು ಕಾದು ನೋಡಬೇಕಿದೆ.

ಮಡಿಕೇರಿಯ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂತರ್ಗೌಡ, ಹಾಸನ ಜಿಲ್ಲೆಯ ಅರಕಲಗೂಡಿನ ಜೆಡಿಎಸ್ ಅಭ್ಯರ್ಥಿ ಎ.ಮಂಜು ಪುತ್ರ. 2021ರ ಡಿಸೆಂಬರ್ನಲ್ಲಿ ನಡೆದಿದ್ದ ವಿಧಾನಪರಿಷತ್ ಚುನಾವಣೆಯಲ್ಲಿ ಅವರು 102 ಮತಗಳ ಅಂತರದಿಂದ, ಬಿಜೆಪಿ ಅಭ್ಯರ್ಥಿ ಎಂ.ಪಿ.ಅಪ್ಪಚ್ಚುರಂಜನ್ ಅವರ ಸೋದರ ಸುಜಾ ಕುಶಾಲಪ್ಪ ವಿರುದ್ಧ ಸೋತಿದ್ದರು. ಕ್ಷೇತ್ರಕ್ಕೆ ಹೊಸಬರಾಗಿದ್ದರೂ ಅವರು ಪಡೆದಿದ್ದ ಮತಗಳು ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್ನ ಹುಬ್ಬೇರುವಂತೆ ಮಾಡಿದ್ದವು.

2021ರಿಂದಲೂ ಸತತವಾಗಿ ಕ್ಷೇತ್ರದಲ್ಲಿ ನಿಕಟ ಸಂಪರ್ಕವನ್ನಿರಿಸಿಕೊಂಡಿರುವ ಅವರು ಯುವ ಸಮುದಾಯದವನ್ನೇ ಹೆಚ್ಚು ಕೇಂದ್ರೀಕರಿಸಿದ್ದಾರೆ. ಬಿಜೆಪಿ ಅಭ್ಯರ್ಥಿ, ಕೊಡವ ಸಮುದಾಯದ ಎಂ.ಪಿ.ಅಪ್ಪಚ್ಚುರಂಜನ್ ಕಳೆದ ಚುನಾವಣೆಗಳಂತೆ ‘ಬೂತ್ಮಟ್ಟದ ಪ್ರಚಾರ’ ನಡೆಸುತ್ತಿದ್ದಾರೆ.

ಜೀವಿಜಯ ಅವರು ಪಕ್ಷದಿಂದ ಹೊರನಡೆದ ಬಳಿಕ ನಿಸ್ತೇಜವಾಗಿದ್ದ ಜೆಡಿಎಸ್, ಈ ಬಾರಿ ಕೊಡವರಾದ ನಾಪಂಡ ಮುತ್ತಪ್ಪ ಅವರಿಗೆ ಟಿಕೆಟ್ ನೀಡಿದ್ದು, ಅವರು ಬಿರುಸಿನ ಪ್ರಚಾರ ನಡೆಸುತ್ತಾ, ಮಡಿಕೇರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇರುವಂತೆ ನೋಡಿಕೊಂಡಿದ್ದಾರೆ. ‘ಮುತ್ತಪ್ಪ ಕೊಡವ ಸಮುದಾಯದವರ ಮತ ವಿಭಜನೆಗೆ ಕಾರಣರಾಗಬಹುದು’ ಎಂದು ಕಾಂಗ್ರೆಸ್ ಆಸೆಗಣ್ಣಿನಿಂದ ನೋಡುತ್ತಿದೆ. ಎಸ್ಡಿಪಿಐನ ಅಮಿನ್ ಮೊಯಿಸಿನ್ ಸ್ಪರ್ಧೆಯಿಂದ ಕಾಂಗ್ರೆಸ್ನ ಮತಗಳ ವಿಭಜನೆಯಾಗುವ ಸಾಧ್ಯತೆಯೂ ಇದೆ. ಇದೂ ಫಲಿತಾಂಶದ ಮೇಲೆ ನೇರ ಪ್ರಭಾವ ಬೀರಲಿದೆ.

ಕೊಡವರೇ ಹೆಚ್ಚಾಗಿರುವ ವಿರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಇದೆ. ‘ಹ್ಯಾಟ್ರಿಕ್’ ಗೆಲುವು ಸಾಧಿಸಿರುವ ಅರೆಭಾಷೆ ಗೌಡ ಸಮುದಾಯಕ್ಕೆ ಸೇರಿದ ಕೆ.ಜಿ.ಬೋಪಯ್ಯ, ಸತತ 4ನೇ ಬಾರಿ ಗೆಲುವು ಸಾಧಿಸಲು ಬಿಡುವಿಲ್ಲದೆ ಪ್ರಚಾರ ನಡೆಸಿದ್ದಾರೆ. ಅವರ ವಿರುದ್ಧ ಹೈಕೋರ್ಟ್ ವಕೀಲ, ಕೊಡವ ಸಮುದಾಯದ ಎ.ಎಸ್.ಪೊನ್ನಣ್ಣ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಪೊನ್ನಣ್ಣ ಪ್ರಚಾರದ ತಂತ್ರಗಾರಿಕೆಯನ್ನೇ ಬದಲಿಸಿಕೊಂಡಿರುವುದು ಕಾಂಗ್ರೆಸ್ ಹೈಕಮಾಂಡ್ಗೂ ಅಚ್ಚರಿ ತಂದಿದೆ.

ಕಳೆದ ಬಾರಿ ಜೆಡಿಎಸ್ನಿಂದ ಸ್ಪರ್ಧಿಸಿದ್ದ ಸಂಕೇತ್ ಪೂವಯ್ಯ ಕಾಂಗ್ರೆಸ್ ಸೇರಿ ಪೊನ್ನಣ್ಣ ಅವರಿಗೆ ಬೆಂಬಲ ನೀಡಿರುವುದು ಅವರಿಗೆ ‘ಪ್ಲಸ್ ಪಾಯಿಂಟ್’. //ಸರ್ವೋದಯ ಪಕ್ಷದಿಂದ// ಮನು ಸೋಮಯ್ಯ ಕಣಕ್ಕಿಳಿದಿರುವುದರಿಂದ ಕಾಂಗ್ರೆಸ್ಗೆ ಮತಗಳ ವಿಭಜನೆಯ ಭೀತಿ ತರಿಸಿದೆ. ಅದಕ್ಕಾಗಿಯೇ ಪೊನ್ನಣ್ಣ ಕಾಡಂಚಿನ ಪ್ರದೇಶಗಳ ರೈತರು, ಬುಡಕಟ್ಟು ನಿವಾಸಿಗಳ ಕಡೆಗೆ ಗಮನ ಕೇಂದ್ರೀಕರಿಸಿದ್ದಾರೆ.

ವಿಚಾರವಾದಿ ಎ.ಕೆ.ಸುಬ್ಬಯ್ಯ ಅವರ ಪುತ್ರರಾದ ಪೊನ್ನಣ್ಣ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿ, ‘ನಾನು ಕಾವೇರಮ್ಮನ ಪುತ್ರ’ ಎಂದು ಘೋಷಿಸಿಕೊಂಡಿದ್ದಾರೆ. ಬಹಿರಂಗವಾಗಿ ಅಲ್ಪಸಂಖ್ಯಾತರನ್ನು ಓಲೈಸುವ ಸಣ್ಣ ಪ್ರಯತ್ನವನ್ನೂ ಅವರು ನಡೆಸಿಲ್ಲ. ‘ಚುನಾವಣೆ ಸಮೀಪಿಸಿದ್ದರೂ ಟಿಪ್ಪು ಜಯಂತಿಗೆ ಕಾರಣರಾದ ಸಿದ್ದರಾಮಯ್ಯ ಅವರನ್ನು ಪ್ರಚಾರಕ್ಕೆ ಕರೆಸದಿರುವುದು ಅವರ ಮತ್ತೊಂದು ತಂತ್ರಗಾರಿಕೆ’ ಎಂದೇ ವಿಶ್ಲೇಷಿಸಲಾಗುತ್ತಿದೆ. ಈ ಬಾರಿ ಮತದಾರರು ಇತಿಹಾಸವನ್ನು ಮರುಕಳಿಸುತ್ತಾರೋ ಬದಲಾವಣೆ ಬಯಸುತ್ತಾರೋ ಎಂಬುದು ಕುತೂಹಲಕಾರಿಯಾಗಿದೆ.

Cut-off box - ಕೊಡಗು ಜಿಲ್ಲೆಯ ಒಟ್ಟು ಕ್ಷೇತ್ರಗಳು;02 ಕ್ಷೇತ್ರ;2013;2018 ಮಡಿಕೇರಿ;ಬಿಜೆಪಿ;ಬಿಜೆಪಿ ವಿರಾಜಪೇಟೆ;ಬಿಜೆಪಿ;ಬಿಜೆಪಿ

Cut-off box - ಅಂಕಿ ಅಂಶ 457735 ಕೊಡಗು ಜಿಲ್ಲೆಯ ಮತದಾರರು 224875 ಪುರುಷರು 231415 ಮಹಿಳೆಯರು 23 ಲೈಂಗಿಕ ಅಲ್ಪಸಂಖ್ಯಾತರು 1422 ಸೇವಾ ಮತದಾರರು 24 ಕಣದಲ್ಲಿರುವ ಅಭ್ಯರ್ಥಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.