ಗುರುವಾರ , ಜೂನ್ 30, 2022
24 °C

'83' ಸಿನಿಮಾ ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ: ಬಾಂಬೆ ಹೈಕೋರ್ಟ್

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

DH File

ಬೆಂಗಳೂರು: ರಣವೀರ್ ಸಿಂಗ್ ಅಭಿನಯದ, ಟೀಮ್ ಇಂಡಿಯಾ ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿನ ಕುರಿತ ಕಥೆಯನ್ನು ಹೊಂದಿರುವ ‘83‘ ಸಿನಿಮಾವನ್ನು ಒಟಿಟಿ ವೇದಿಕೆಗಳಾದ ಹಾಟ್‌ಸ್ಟಾರ್ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಬಹುದು ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

83 ಸಿನಿಮಾವನ್ನು ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡುವ ಕುರಿತು, ಪ್ರಸಾರದ ಹಕ್ಕು ಕುರಿತಂತೆ ಸ್ಟಾರ್ ಮತ್ತು ನೆಟ್‌ಫ್ಲಿಕ್ಸ್ ಮಧ್ಯೆ ಸಮಸ್ಯೆ ಸೃಷ್ಟಿಯಾಗಿತ್ತು.

ಚಿತ್ರದ ಡಿಜಿಟಲ್ ಹಕ್ಕುಗಳು ಹಾಗೂ ಸೆಟಲೈಟ್ ಹಕ್ಕಿನ ಕುರಿತು ವಿವಾದ ಹೈಕೋರ್ಟ್ ಮೆಟ್ಟಿಲೇರಿತ್ತು.

ಸಿನಿಮಾದ ಹಕ್ಕು ಮತ್ತು ಮಾಲೀಕತ್ವವು ಮ್ಯಾಡ್‌ ಮ್ಯಾನ್ ಫಿಲ್ಮ್ ವೆಂಚರ್ಸ್, ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಮತ್ತು ವೈಬ್ರಿ ಮೀಡಿಯಾಗಳ ಮಧ್ಯೆ ಹಂಚಿಕೆಯಾಗಿದೆ.

‘83‘ ಸಿನಿಮಾ, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಅವರ ಅಭಿನಯ ಹೊಂದಿದ್ದು, ಕಳೆದ ವರ್ಷದ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು