ಇದೀಗ ಶಸ್ತ್ರಚಿಕಿತ್ಸೆ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅಭಿಷೇಕ್, ‘ಚೆನ್ನೈನಲ್ಲಿ ನನ್ನ ಹೊಸ ಸಿನಿಮಾದ ಶೂಟಿಂಗ್ ವೇಳೆ ಬುಧವಾರ ಅವಘಡ ನಡೆದಿತ್ತು. ಬಲಗೈಗೆ ಗಾಯವಾಗಿದ್ದು, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಆದ್ದರಿಂದ ಕೂಡಲೇ ಮುಂಬೈ ಹೊರಟುಬಂದು ಆಸ್ಪತ್ರೆಗೆ ದಾಖಲಾಗಿದ್ದೆ. ಸದ್ಯ ಶಸ್ತ್ರಚಿಕಿತ್ಸೆ ನಡೆದಿದ್ದು, ಎಲ್ಲವೂ ಸರಿ ಹೋಗಿದೆ. ಶೂಟಿಂಗ್ ಮುಂದುವರಿಸಲು ಈಗ ಮತ್ತೆ ಚೆನ್ನೈಗೆ ಮರಳಿದ್ದೇನೆ. ನಿಮ್ಮೆಲ್ಲರ ಹಾರೈಕೆಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.