‘ಭೀಷ್ಮ’ ಸಿನಿಮಾ ಖ್ಯಾತಿಯ ತೆಲುಗು ನಟ ನಿತಿನ್, ತನ್ನ ಗೆಳತಿ ಶಾಲಿನಿ ಅವರ ಕೈಹಿಡಿಯಲಿದ್ದಾರೆ. ಈ ಜೋಡಿಯ ಮದುವೆ ಏಪ್ರಿಲ್ ತಿಂಗಳಲ್ಲಿ ನಡೆಯಬೇಕಿತ್ತು. ಆದರೆ ಲಾಕ್‌ಡೌನ್ ಕಾರಣದಿಂದ ಮುಂದೂಡಲಾಗಿತ್ತು. ಈಗ ಈ ಜೋಡಿ ಸರಳವಾಗಿ ಮದುವೆಯಾಗಲು ನಿರ್ಧರಿಸಿದ್ದಾರೆ.

ಇತ್ತೀಚಿನ ಸುದ್ದಿ ಪ್ರಕಾರ, ನಿತಿನ್ ಮದುವೆ ದಿನ ಬಹುದೂರವಿಲ್ಲ. ಈ ವರ್ಷವೇ ನಿತಿನ್ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದು, ಈ ಜೋಡಿಯ ಹೆತ್ತವರು ಜುಲೈ ಅಥವಾ ಆಗಸ್ಟ್‌ನಲ್ಲಿ ಮದುವೆ ನೆರವೇರಿಸಲು ಮಾತುಕತೆ ನಡೆಸಿದ್ದಾರಂತೆ. ಮುಹೂರ್ತವೂ ಗೊತ್ತಾಗಿದೆ. ಅದರ ಬಗ್ಗೆ ಸದ್ಯದಲ್ಲೇ ಎಲ್ಲರಿಗೂ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.

ಈ ಮುಂಚೆ ನಿತಿನ್ ಮದುವೆಯು ದುಬೈನ ಹೋಟೆಲೊಂದರಲ್ಲಿ ವೈಭವದಿಂದ ಆಯೋಜಿಸಲು ತೀರ್ಮಾನವಾಗಿತ್ತು. ಮದುವೆಯ ದಿನವೂ ನಿಗದಿಯಾಗಿತ್ತು. ಆದರೆ, ಕೊರೊನಾ – ಲಾಕ್‌ಡೌನ್‌ನಿಂದಾಗಿ ಈಗ ಹೈದಾರಾಬಾದ್‌ನಲ್ಲಿ ಮದುವೆ ನಡೆಸಲು ತೀರ್ಮಾನಿಸಲಾಗಿದೆ. ಕೊರೊನಾ ಸೋಂಕಿನ ಭೀತಿ ಮತ್ತು ಸರ್ಕಾರ ವಿಧಿಸಿರುವ ನಿರ್ಬಂಧದಿಂದಾಗಿ ಆಪ್ತರು ಹಾಗೂ ತುಂಬಾ ಹತ್ತಿರದ ಸಂಬಂಧಿಕರಷ್ಟೇ ಮದುವೆಯಲ್ಲಿ ಭಾಗವಹಿಸಲಿದ್ದಾರೆ.ನಿತಿನ್ ಹಾಗೂ ಶಾಲಿನಿ ಐದಾರು ವರ್ಷಗಳಿಂದ ಸ್ನೇಹಿತರು. ಸ್ನೇಹ, ಪ್ರೀತಿಗೆ ತಿರುಗಿ, ಇಬ್ಬರೂ ತಮ್ಮ ಹಿರಿಯರ ಸಮ್ಮತಿ ಪಡೆದು ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿದ್ದಾರೆ.

ಸದ್ಯ ನಿತಿನ್ ಕೈಯಲ್ಲಿ ‘ರಂಗ್ ದೇ’ ಸಿನಿಮಾವಿದೆ. ಈ ಸಿನಿಮಾದ ಶೂಟಿಂಗ್ ಶೇಕಡ 30ರಷ್ಟು ಮುಗಿದಿದೆ. ಸದ್ಯ ಚಿತ್ರೀಕರಣ ಸ್ಥಗಿತಗೊಂಡಿರುವುದರಿಂದ, ನಿತಿನ್ ಮದುವೆಯ ನಂತರ ಈ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ವೆಂಕಿ ಅಟ್ಲುರಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಕೀರ್ತಿ ಸುರೇಶ್ ಚಿತ್ರದ ನಾಯಕಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.