ಭಾನುವಾರ, ಜೂನ್ 13, 2021
25 °C

ಮನಕಲಕುವ ದೃಶ್ಯ: ಆಮ್ಲಜನಕ ಇಲ್ಲದೆ ಪ್ರಾಣ ಬಿಟ್ಟ ನಟ ರಾಹುಲ್‌ ವೋರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬಾಲಿವುಡ್‌ ನಟ ಹಾಗೂ ಯುಟ್ಯೂಬರ್‌ ರಾಹುಲ್‌ ವೋರಾ ಕೋವಿಡ್‌ನಿಂದಾಗಿ ಭಾನುವಾರ ನಿಧನರಾದರು. ಅವರು ಆಮ್ಲಜನಕ ಕೊರತೆಯಿಂದ ಮೃತಪಟ್ಟಿರುವ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ರಾಹುಲ್‌ ವೋರಾ ಕೋವಿಡ್‌ ಸೋಂಕು ದೃಢಪಟ್ಟ ಬಳಿಕ ದೆಹಲಿಯ ರಾಜೀವ್‌ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದರು. ಇಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು  ಸಾವಿಗೂ ಮುನ್ನ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

ಸಾಯುವುದಕ್ಕೂ ಮುನ್ನ ರಾಹುಲ್‌ ಒಂದು ವಿಡಿಯೊ ಮಾಡಿದ್ದರು. ಅದರಲ್ಲಿ ಆಮ್ಲಜನಕ ಮುಗೀತಾ ಇದೆ, ಬರ್ತಾ ಇಲ್ಲ ಅಂತ ಹೇಳಿದ ಕೆಲವೇ ಕ್ಷಣಗಳಲ್ಲಿ ಅವರು ಪ್ರಾಣ ಬಿಟ್ಟಿದ್ದರು. ನಂತರ ಈ ವಿಡಿಯೊವನ್ನು ಅವರ ಪತ್ನಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಮೇ 8ರಂದು ರಾಹುಲ್‌ ಫೇಸ್‌ಬುಕ್‌ನಲ್ಲಿ ಫೋಸ್ಟ್‌ವೊಂದನ್ನು ಹಾಕಿದ್ದರು. ಅದರಲ್ಲಿ ತಾವು ದಾಖಲಾಗಿರುವ ಆಸ್ಪತ್ರೆ, ಬೆಡ್‌ ಸಂಖ್ಯೆ ನಮೂದಿಸಿ ಇಲ್ಲಿ ಸರಿಯಾಗಿ ಚಿಕಿತ್ಸೆ ನೀಡಲಾಗುತ್ತಿಲ್ಲ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿ ಮಂತ್ರಿ ಸಿಸೋಡಿಯಾ ಅವರಿಗೂ ಟ್ಯಾಗ್‌ ಮಾಡಿದ್ದರು.

Mujhe bhi treatment acha mil jata, To main bhi bach jata tumhaara Irahul Vohra Name-Rahul Vohra Age -35 Hospital name...

Posted by Irahul Vohra on Saturday, May 8, 2021

ಬರಹದ ಕೊನೆಯಲ್ಲಿ ಜೀವನದಲ್ಲಿ ಈ ಸಲ ನಾನು ಸೋತೆ, ಮತ್ತೆ ಹುಟ್ಟಿ ಬರುತ್ತೇನೆ ಎಂದು ಬರೆದುಕೊಂಡಿದ್ದರು. ಹೀಗೆ ಬರೆದ ಕೆಲವೇ ಗಂಟೆಗಳಲ್ಲಿ ರಾಹುಲ್‌ ನಿಧನರಾದರು ಎಂದು ಅವರ ಕುಟುಂಬದವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು