ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಬ್‌ ಸಿರೀಸ್‌ ಮಾಡ್ತಾರಂತೆ ಹ್ಯಾಟ್ರಿಕ್ ಹೀರೊ ಶಿವಣ್ಣ

Last Updated 1 ಮೇ 2022, 10:57 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನೂ ವೆಬ್‌ ಸಿರೀಸ್‌ ಮಾಡಬೇಕು’ ಎಂದಿದ್ದಾರೆ ನಟ ಶಿವರಾಜ್‌ಕುಮಾರ್‌. ‘ನನ್ನ ಮಗಳ ನಿರ್ಮಾಣದಲ್ಲಿ ಒಂದು ವೆಬ್‌ ಸಿರೀಸ್‌ ಮಾಡಬೇಕು ಎಂದುಕೊಂಡಿದ್ದೇನೆ. ವೆಬ್‌ಸಿರೀಸ್‌ನಲ್ಲಿ ಸಾಕಷ್ಟು ವೈವಿಧ್ಯಮಯ ಕಂಟೆಂಟ್‌ ಬರುತ್ತಿವೆ. ಅದನ್ನೆಲ್ಲಾ ನೋಡಿದಾಗ ನಾವೂ ಕೂಡಾ ಈ ಪ್ರಯೋಗಕ್ಕೆ ಕೈಹಾಕಬೇಕು ಎಂದುಕೊಂಡಿದ್ದೇನೆ’ ಎಂದು ಶಿವರಾಜ್‌ಕುಮಾರ್‌ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದ್ದಾರೆ.

‘ನಾವೆಲ್ಲಾ ಸಿನಿಮಾ ಕಲಿಯುವಾಗ ಬೇರೆಯೇ ರೀತಿಯ ಕ್ಯಾಮೆರಾಗಳಿದ್ದವು. ಈಗ ಡಿಜಿಟಲ್‌ಯುಗಕ್ಕೆ ಬಂದಿದ್ದೇವೆ. ನಾವೂ ಅಪ್‌ಡೇಟ್‌ ಆಗಬೇಕು. ಇಲ್ಲವಾದರೆ ಹಿಂದೆ ಉಳಿದುಬಿಡುತ್ತೇವೆ ಎಂದರು.

‘ಹಾಗಾಗಿ ನನಗೆ ಈ ಕ್ಷೇತ್ರದ ಮೇಲೆ ಆಸಕ್ತಿ ಬಂದಿದೆ’ ಎಂದು ಅವರು ಹೇಳಿದ್ದಾರೆ. ಹಾಗೆಂದು ವೆಬ್‌ ಸಿರೀಸ್‌ ಯಾವಾಗ? ಏನು ಎಂಬ ವಿವರಗಳು ಇನ್ನಷ್ಟೇ ಗೊತ್ತಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT