ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ‘ಜೈ’ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಟ ಶ್ರೀಮುರಳಿ ಟೀಸರ್ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ಬಾಲಿವುಡ್ ನಟ ಸುನಿಲ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರೀಮುರಳಿ ಸಮಾರಂಭದಲ್ಲಿದ್ದ ಎಲ್ಲರಿಂದ ಜೈಕಾರ ಕೂಗಿಸಿ, ತಾವು ಜೋರಾಗಿ ‘ಜೈ’ ಎಂದು ಟೀಸರ್ ಬಿಡುಗಡೆಗೊಳಿಸಿದ್ದು ವಿಶೇಷವಾಗಿತ್ತು. ‘ಟೀಸರ್ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ತಂಡದ ಶ್ರಮ ಕಾಣುತ್ತದೆ. ನಟ ರೂಪೇಶ್ ಶೆಟ್ಟಿ ಬಹಳ ಸುಂದರವಾದ ನಾಯಕ. ತುಳು ಭಾಷೆಯ ಸಂಸ್ಕೃತಿ, ಆಚಾರ, ವಿಚಾರಗಳ ಬಗ್ಗೆ ಅಪಾರ ಪ್ರೀತಿಯನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಾ ಬಂದಿದ್ದಾರೆ. ನಾನು ಅವರನ್ನ ಬಿಗ್ಬಾಸ್ ನಿಂದ ನೋಡುತ್ತಾ ಬಂದಿದ್ದೇನೆ. ಏನಾದರೂ ಸಾಧಿಸಬೇಕು ಎಂಬ ತುಡಿತ ಅವರಲ್ಲಿ ಕಾಣುತ್ತಿದೆ. ಚಿತ್ರದ ಸಂಗೀತ, ಛಾಯಾಚಿತ್ರಗ್ರಹಣ ಎಲ್ಲವೂ ಸೊಗಸಾಗಿದೆ’ ಎಂದರು ಶ್ರೀಮುರಳಿ.

‘ತುಳುವಿನಲ್ಲಿ ಈ ಹಿಂದೆ ‘ಗಿರ್ಗಿಟ್’, ‘ಸರ್ಕಸ್’ ಸಿನಿಮಾಗಳನ್ನು ನಿರ್ದೇಶಿಸಿದ್ದೆ. ಎರಡೂ ನೂರು ದಿನ ತೆರೆಯಲ್ಲಿದ್ದು, ಹಿಟ್ ಆಗಿದ್ದವು. ಈ ‘ಜೈ’ ಮೂಲಕ ಕನ್ನಡ ಚಿತ್ರರಂಗಕ್ಕೂ ಕಾಲಿಡುತ್ತಿರುವೆ. ತುಳಿವಿನಲ್ಲಿ ಸಿದ್ಧಗೊಂಡು ಕನ್ನಡಕ್ಕೆ ಡಬ್ ಆಗಿದೆ. ಸುನಿಲ್ ಶೆಟ್ಟಿ 18–20 ನಿಮಿಷ ತೆರೆಯಲ್ಲಿ ಇರುತ್ತಾರೆ. ನವೆಂಬರ್ 14ರಂದು ಚಿತ್ರ ಬಿಡುಗಡೆಯಾಗಲಿದೆ. ದಕ್ಷಿಣ ಕನ್ನಡದ ಊರೊಂದರಲ್ಲಿ ನಡೆಯುವ ರಾಜಕೀಯದ ಕುರಿತಾದ ಕಾಲ್ಪನಿಕ ಕಥೆಯಿದು. ಚಿತ್ರ ನೋಡಿ ಜನ ಮಾತಾಡಬೇಕು. ಆಗ ನಮಗೆ ಖುಷಿ’ ಎಂದರು ರೂಪೇಶ್.

ಅದ್ವಿತಿ ಶೆಟ್ಟಿ ನಾಯಕಿ. ‘ಚಿತ್ರರಂಗಕ್ಕೆ ಬಂದು ಹತ್ತು ವರ್ಷಗಳ ಬಳಿಕ ತುಳು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಒಳ್ಳೆಯ ತಂಡಕ್ಕಾಗಿ ಕಾಯುತ್ತಿದ್ದೆ. ಈಗ ಆ ಅವಕಾಶ ಸಿಕ್ಕಿದೆ. ನಾನು ತುಳುವಿನಲ್ಲಿ ನಟಿಸಬೇಕು ಎಂಬುದು ಅಪ್ಪನ ಕನಸಾಗಿತ್ತು. ಅವರು ಈಗ ಜತೆಗಿಲ್ಲ. ಆದರೆ ಅವರ ಕನಸು ನನಸಾಗಿದೆ’ ಎಂದು ಭಾವುಕರಾದರು ಅದ್ವಿತಿ.

ಆರ್. ಎಸ್. ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರೂಪೇಶ್ ಶೆಟ್ಟಿ ಹಾಗೂ ವೇಣು ಹಸ್ರಾಳಿ ಚಿತ್ರಕಥೆಯಿದೆ. ದೇವದಾಸ್ ಕಾಪಿಕಾಡ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್ ಮೊದಲಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ವಿನುತ್ ಛಾಯಾಚಿತ್ರಗ್ರಹಣ, ಲೊಯ್ ವೆಲೆಂಟಿನ್ ಸಲ್ದಾನ ಸಂಗೀತ, ರಾಹುಲ್ ವಸಿಷ್ಠ ಸಂಕಲನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.