ಗುರುವಾರ , ಅಕ್ಟೋಬರ್ 29, 2020
28 °C

ನಟಿ ಪ್ರಿಯಾಂಕಾ ಚೋಪ್ರಾರ ‘ಅಪೂರ್ಣ’ ಆತ್ಮಕಥೆ ಬಿಡುಗಡೆಗೆ ದಿನಾಂಕ ನಿಗದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ತನ್ನ ಆತ್ಮಕಥೆಯಾದ ‘ಅನ್‌ಫಿನಿಷ್ಡ್‌’ ಪುಸ್ತಕವನ್ನು ಬರೆದು ಮುಗಿಸಿದ್ದಾರೆ. ಇದರ ಬಿಡುಗಡೆ ಯಾವಾಗ ಎಂಬ ಅಭಿಮಾನಿಗಳ ಪ್ರಶ್ನೆಗೆ ಆಕೆಯೇ ಈಗ ಉತ್ತರ ನೀಡಿದ್ದಾರೆ. 2021ರ ಜನವರಿ 19ರಂದು ಈ ಪುಸ್ತಕ ಬಿಡುಗಡೆಯಾಗಲಿದೆ. ಪೆಂಗ್ವಿನ್ ರ‍್ಯಾಂಡಮ್‌ ಹೌಸ್‌ ಇದರ ಪ್ರಕಟಣೆಯ ಹೊಣೆ ಹೊತ್ತಿದೆ.

ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪುಸ್ತಕದ ಮುಖಪುಟದ ಜೊತೆಗೆ ಪ್ರಿಯಾಂಕಾ ಅಧಿಕೃತವಾಗಿ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಿದ್ದಾರೆ. ಜೊತೆಗೆ, ಆತ್ಮಕಥೆಯ ಬರವಣಿಗೆ ಪ್ರಕ್ರಿಯೆಗಳ ವಿಡಿಯೊಗಳನ್ನೂ ಅವರು ಹಂಚಿಕೊಂಡಿದ್ದಾರೆ. ಈಗಾಗಲೇ, ಈ ಪುಸ್ತಕದ ಮುಂಗಡ ಕಾಯ್ದಿರಿಸುವಿಕೆಯೂ ಆರಂಭಗೊಂಡಿದೆ.

‘ಬಾಲ್ಯದಲ್ಲಿ ನನಗೆ ಅಪ್ಪ–ಅಮ್ಮ ಧೈರ್ಯ ತುಂಬಿದ್ದರು. ನನ್ನ ಕುತೂಹಲ, ಸವಾಲುಗಳನ್ನು ಮೆಟ್ಟಿ ನಿಲ್ಲಲು ನೆರವಾಗಿದ್ದಾರೆ. ಅವರು ನೀಡಿದ ಬೆಂಬಲವೇ ನಾನು ಚಿತ್ರರಂಗಕ್ಕೆ ಬರಲು ರಹದಾರಿಯಾಯಿತು. ನಾನು ಹಿಂದಡಿ ಇಟ್ಟಾಗ ಅಪ್ಪ, ಅಮ್ಮ ಆತ್ಮಸ್ಥೈರ್ಯ ತುಂಬಿದ್ದಾರೆ. ಜೀವನದಲ್ಲಿ ಕೆಲವು ತಪ್ಪುಗಳಿಗೆ ಬೆಲೆ ತೆತ್ತಿದ್ದೇನೆ. ಆ ಮೂಲಕ ಸಾಕಷ್ಟು ಕಲಿತಿದ್ದೇನೆ. ಇದು ನನ್ನ ಬದಲಾವಣೆಗೂ ಕಾರಣವಾಗಿದೆ’ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.

ಪ್ರಿಯಾಂಕಾ ಬಹುಬೇಡಿಕೆಯ ನಟಿ ಎಂಬುದರಲ್ಲಿ ಎರಡು ಮಾತಿಲ್ಲ. ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರಿಂದ ಆಕೆ ಬರವಣಿಗೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರಲಿಲ್ಲ. ಈಗ ಆತ್ಮಕಥೆಯನ್ನು ಬರೆದು ಮುಗಿಸಿರುವುದು ಆಕೆಯ ಅಭಿಮಾನಿಗಳಿಗೆ ಖುಷಿ ನೀಡಿದೆ. ಇಲ್ಲಿಯವರೆಗೂ ಆಕೆ ತನ್ನ ವೈಯಕ್ತಿಕ ಬದುಕಿನ ಬಗ್ಗೆ ಎಲ್ಲಿಯೂ ಮಾಹಿತಿ ಹಂಚಿಕೊಂಡಿಲ್ಲ. ಹಾಗಾಗಿ, ಈ  ಆತ್ಮಕಥೆಯ ಮೇಲೆ ಆಕೆಯ ಅಭಿಮಾನಿಗಳಲ್ಲಿ ಕುತೂಹಲದ ರೆಕ್ಕೆಗಳು ಮೂಡಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು