ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚೊಚ್ಚಲ ಮಗು ನಿರೀಕ್ಷೆಯಲ್ಲಿ ಹರ್ಷಿಕಾ ಪೂಣಚ್ಚ: ವಿಶೇಷ ವಿಡಿಯೊ ಹಂಚಿಕೊಂಡ ದಂಪತಿ

Published 2 ಜುಲೈ 2024, 13:23 IST
Last Updated 2 ಜುಲೈ 2024, 13:23 IST
ಅಕ್ಷರ ಗಾತ್ರ

ಬೆಂಗಳೂರು: ಮಗುವಿನ ನಿರೀಕ್ಷೆಯಲ್ಲಿರುವ ಸ್ಯಾಂಡಲ್‌ವುಡ್‌ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್‌ ದಂಪತಿ ವಿಶೇಷ ವಿಡಿಯೊ ಹಂಚಿಕೊಳ್ಳುವ ಮೂಲಕ ಶುಭ ಸುದ್ದಿ ನೀಡಿದ್ದಾರೆ. 

ಮಡಿಕೇರಿಯ ಸಾಂಪ್ರದಾಯಿಕ ಶೈಲಿಯ ಮನೆಯಲ್ಲಿ ಕೊಡವರ ಉಡುಗೆ ತೊಟ್ಟು ಫೋಟೊಶೂಟ್‌ ಮಾಡಿಸಿದ್ದಾರೆ. ಅಲ್ಲದೆ ಕುಟುಂಬದವರನ್ನೂ ಒಳಗೊಂಡು ವಿಡಿಯೊ, ಫೋಟೊಶೂಟ್‌ ಮಾಡಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 

ಅಮ್ಮನಾಗುವ ಖುಷಿಯಲ್ಲಿರುವ ಹರ್ಷಿಕಾ ಅಭಿಮಾನಿಗಳಿಗೆ ಸಂದೇಶ ನೀಡಿದ್ದು ‘ಗೆಳೆಯರೆ ,ಇಂದಿನವರೆಗು ನಮ್ಮಿಬ್ಬರಿಗೆ ಸದಾ ಆಶೀರ್ವಾದಿಸುತ್ತಾ ಬಂದಿದ್ದೀರಿ, ಇನ್ನು ಮುಂದೆ ನಿಮ್ಮ ಪ್ರೀತಿ ,ಆಶೀರ್ವಾದ ನಮ್ಮ ಈ ಇನ್ನೊಂದು ಪುಟ್ಟ ಜೀವದ ಮೇಲು ಇರಲಿ. ಅಕ್ಟೋಬರ್‌ಗೆ ಕಾತುರದಿಂದ ಕಾಯುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ 2023 ಆಗಸ್ಟ್‌ 24ರಂದು ಮದುವೆಯಾಗಿತ್ತು. ಹರ್ಷಿಕಾ ಮತ್ತು ಭುವನ್‌ ಇಬ್ಬರೂ ಕೊಡಗಿನ ಮೂಲದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT