ಬುಧವಾರ, ಸೆಪ್ಟೆಂಬರ್ 22, 2021
21 °C

ಪುತ್ರಿ ಲಾರಾ ಜತೆ ಕಾಣಿಸಿಕೊಂಡ ಲಿಸಾ ಹೇಡನ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Lisa Hayden Instagram Post Screengrab

ಬೆಂಗಳೂರು: ಸಾಮಾಜಿಕ ತಾಣಗಳಿಂದ ದೂರ ಉಳಿದಿದ್ದ ನಟಿ ಲಿಸಾ ಹೇಡನ್, ಈ ಬಾರಿ ಪುತ್ರಿಯ ಜತೆಗೆ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.

ಪುತ್ರಿ ಲಾರಾಗೆ ಎದೆ ಹಾಲು ಉಣಿಸುತ್ತಿರುವ ಫೋಟೊಗಳನ್ನು ಲಿಸಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಲಿಸಾ ಹೇಡನ್ ಮತ್ತು ಡಿನೊ ಲಲ್ವಾನಿ ದಂಪತಿಗೆ ಕಳೆದ ಜೂನ್ ತಿಂಗಳಿನಲ್ಲಿ ಮೂರನೇ ಮಗು ಜನಿಸಿದೆ. 2016ರಲ್ಲಿ ಮದುವೆಯಾಗಿದ್ದ ಈ ದಂಪತಿಗೆ ಈಗಾಗಲೇ ಎರಡು ಮಕ್ಕಳಿದ್ದಾರೆ.

 

ಮೂರನೇ ಮಗುವಿಗಾಗಿ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಇನ್‌ಸ್ಟಾಗ್ರಾಂನಿಂದ ದೂರ ಉಳಿದಿದ್ದೆ. ಈಗ ಮತ್ತೆ ಮರಳಿದ್ದೇನೆ, ಜತೆಗೆ ಮಗಳು ನನ್ನೊಂದಿದ್ದಾಳೆ ಎಂದು ನಟಿ ಲಿಸಾ ಹೇಳಿದ್ದಾರೆ.

ಇದಕ್ಕೂ ಮುನ್ನ ಲಿಸಾ ಹೇಡನ್ ಅವರು, ಬೇಬಿ ಶವರ್ ಫೋಟೊಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು